ಬೀದಿ ನಾಯಿಗಳ ಅಟ್ಟಹಾಸಕ್ಕೆ 9 ಆಡುಗಳು ಬಲಿ
ಲೋಕದರ್ಶನ ವರದಿ,
ಜಮಖಂಡಿ : ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸದಿಂದ 9 ಆಡುಗಳನ್ನು ಹಿಗ್ಗಾ-ಮುಗ್ಗಾ ಓಡಾಡಿಸಿ, ಮನ ಬಂದಂತೆ ತಿಂದು ಹಾಕಿರುವ ಘಟನೆ ನಡೆದಿದೆ.
ಇಲ್ಲಿನ ಚೌಡಯ್ಯನಗರದ ಬಡ ನಿವಾಸಿ ರುಕ್ಮವ್ವ ಮಾಂಗ ಎಂಬವರ 9 ಆಡುಗಳು ಪ್ರತಿನಿತ್ಯವೂ ಮೇಯಲು ಹೋಗುತ್ತಿದ್ದವು. ಪ್ರತಿದಿನ ಮರಳಿ ಮನೆಗೆ ಬರುತ್ತವೆಂದುಕೊಂಡಿರುವ ಅಜ್ಜಿ ರುಕ್ಮವ್ವ ಮಾಂಗ ಅವರಿಗೆ ಬರಸಿಡಿಲು ಬಡಿದಂತ ಸುದ್ದಿ ತಿಳಿದು ಕಣ್ಣೀರಿನ ಕೊಡಿ ಹರಿಸಿ, ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುವ ದೃಶ್ಯ ಸಾಮಾನ್ಯವಾಗಿತ್ತು. 9 ಆಡುಗಳನ್ನು ಬೀದಿ ನಾಯಿಗಳು ಸೇರಿ ತಿಂದು ಹಾಕಿರುವದನ್ನು ನೋಡಿದ ರುಕ್ಮವ್ವ ಮಾಂಗ ಎಂಬ ಅಜ್ಜಿಯ ರೋಧನ ಮುಗಿಲು ಮುಟ್ಟುವಂತೆ ಇತ್ತು.
ಜಮಖಂಡಿ ನಗರದ ಜನತೆ ಬೀದಿ ನಾಯಿಗಳ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಸಹ ನಗರಸಭೆ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಹೀಗಾಗಿ ನಗರಸಭೆ ಅಧಿಕಾರಿಗಳು ವಿರುದ್ದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ಇಲ್ಲಿನ ಸಾರ್ವಜನಿಕರು 9 ಆಡುಗಳನ್ನು ಕೊಂದು ಹಾಕಿರುವ ಬೀದಿ ನಾಯಿಗಳು ಇನ್ನು ಚಿಕ್ಕ ಮಕ್ಕಳು ಆಟವಾಡುತ್ತಿರುವ ವೇಳೆ ಇಂತಹ ಬೀದಿನಾಯಿಗಳ ಅಟ್ಟಹಾಸಕ್ಕೆ ಮಕ್ಕಳು ಬಲಿಯಾದ್ದರೆ ಯಾರು ಹೊಣೆಗಾರರು ಎಂದು ಪ್ರಶ್ನಿಸುತ್ತಿದ್ದಾರೆ. ಸಾರ್ವಜನಿಕರು ಸಂಬಂದ ಪಟ್ಟ ಅಧಿಕಾರಿಗಳ ಮುಖಕ್ಕೆ ಮಂಗಳಾರತಿ ಮಾಡಿ, ಹಿಡಿಶಾಪ ಹಾಕುತ್ತಿರುವದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿರುವದು ಅಷ್ಟೇ ಸತ್ಯದ ಸಂಗತಿಯಾಗಿದೆ.
ಬೀದಿ ನಾಯಿಗಳ ಅಟ್ಟಹಾಸಕ್ಕೆ 9 ಆಡುಗಳನ್ನು ಬಲಿಯಾಗಿದ್ದು. ನನ್ನ ಜೀವನ ಸಾಗಿಸುವದು ಕಷ್ಟದಾಯಕವಾಗಿದೆ. ಆಡುಗಳಿಂದ ನನ್ನ ಉಪಜೀವನ ಸಾಗಿಸುತ್ತಿದೆ ಎಂದು ಅಜ್ಜಿ ರುಕ್ಮವ್ವ ಮಾಂಗ ಕಣ್ಣೀರು ಹಾಕುತ್ತಾ. ನಗರಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುವ ದೃಶ್ಯ ಸಾಮಾನ್ಯವಾಗಿತ್ತು.