ರಾಷ್ಟ್ರೀಯ

ಪ್ರಶ್ನೋತ್ತರ ಕಲಾಪ ರದ್ದು, ಭುಗಿಲೆದ್ದ ವಿಪಕ್ಷ ನಾಯಕರ ಆಕ್ರೋಶ

ಪ್ರಶ್ನೋತ್ತರ ಕಲಾಪ ರದ್ದು, ಭುಗಿಲೆದ್ದ ವಿಪಕ್ಷ ನಾಯಕರ  ಆಕ್ರೋಶ

ನವದೆಹಲಿ-2 ಇದೇ  14ರಿಂದ ಆರಂಭಗೊಳ್ಳಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ  ಪ್ರಶ್ನೋತ್ತರ ಕಲಾಪ ರದ್ದುಗೊಳಿಸಿರುವ ಸರಕಾರದ ಕ್ರಮಕ್ಕೆ ವಿರೋಧಿ ನಾಯಕರು  ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ .

ಪ್ರಶ್ನೋತ್ತರಕ್ಕೆ ಅವಕಾಶವಿಲ್ಲದೇ ಇರುವುದು ಸದಸ್ಯರಲ್ಲಿ ಭಾರಿ ಆಕ್ರೋಶ ಮೂಡಿಸಿದೆ. ಜೊತೆಗೆ  ಶೂನ್ಯ ವೇಳೆಯ ಅವಧಿಯನ್ನು 30 ನಿಮಿಷಗಳಿಗೆ ಇಳಿಸಲಾಗಿದೆ.

 ಪ್ರಶ್ನೋತ್ತರ ಕಲಾಪ ರದ್ದುಪಡಿಸಿರುವ ಕ್ರಮವನ್ನು ಟೀಕಿಸಿ,  ಟ್ವೀಟ್ ಮಾಡಿರುವ ತೃಣಮೂಲ ಸಂಸದ ಡೆರೆಕ್ ಒ'ಬ್ರಿಯಾನ್ ಸರಕಾರವು ಕೋವಿಡ್ ನೆಪದಲ್ಲಿ 'ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು  ಹೊರಟಿದೆ  ಎಂದು ದೂರಿದ್ದಾರೆ. ಕಾಂಗ್ರೆಸ್  ನಾಯಕರಾದ  ಶಶಿ ತರೂರ್, ಅಧೀರ್ ರಂಜನ್ ಚೌಧುರಿ ಸರಕಾರದ ನಿರ್ಧಾರ ಖಂಡಿಸಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಸುದ್ದಿ ಓದಿ