ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳ; ಸಂಯುಕ್ತ ಕಿಸಾನ್ ಮೋರ್ಚಾದಿಂದ ಬಂಧನಕ್ಕೆ ಆಗ್ರಹ
ಕುಷ್ಟಗಿ 05; ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಸಂಸದ ಬ್ರಿಜ್ ಭೂಷಣ ಸಿಂಗ್ ಹಾಗೂ ಹರಿಯಾಣ ರಾಜ್ಯದ ಬಿಜೆಪಿ ಮಂತ್ರಿ ಸಂದೀಪಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಸೋಮವಾರ ಮಧ್ಯಾಹ್ನ ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ತಾಲೂಕಾ ಘಟಕದ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಮುಖಾಂತರ ಸಲ್ಲಿಸಿದರು.
ದೇಶದ ಮಹಿಳಾ ಕ್ರೀಡಾಪಟುಗಳ ಮೇಲೆ ಕುಸ್ತಿಪಟುಗಳ ನಿಗಮದ ಅಧ್ಯಕ್ಷ ಹಾಗೂ ಬಿಜೆಪಿಯ ಲೋಕಸಭಾ ಸದಸ್ಯರಾದ ಬ್ರಿಜ್ ಭೂಷಣ ಸಿಂಗ್ ಹಾಗೂ ಹರಿಯಾಣ ರಾಜ್ಯದ ಬಿಜೆಪಿ ಮಂತ್ರಿ ಸಂದೀಪಸಿಂಗ್ ಅವರ ಕೃತ್ಯ ಅಕ್ಷಮ್ಯ ಅಪರಾಧವಾಗಿದೆ. ಇವರು ಪೋಕ್ಸ್ ಕಾಯ್ದೆಯನ್ನು ತಿದ್ದುಪಡಿ
ಮಾಡುವಂತೆ ಸಲಹೆ ನೀಡಿರುವುದು ಅತ್ಯಂತ ನಾಚಿಗೆ ಗೇಡಿನ ವಿಷಯವಾಗಿದೆ. ಹರಿಯಾಣ ಸರಕಾರದ ಮಂತ್ರಿ ಸಂದೀಪಸಿಂಗ್ ಅವರೂ ಕೂಡಾ ಹಾಡುಹಗಲೇ
ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದು ಕೇಂದ್ರ ಸರಕಾರ ಕಣ್ಣುಮುಚ್ಚಿ ಕುಳಿತಿದೆ. ಸುಪ್ರೀಂಕೋರ್ಟ್ ಮಧ್ಯಸ್ಥಿಕೆ ವಹಿಸಿ ಮೇಲಿನ ಆರೋಪಿತರ ವಿರುದ್ಧ ಎಫ್ಐಆರ್ ಮಾತ್ರ ದಾಖಲಾಗಿದೆ ಇನ್ನೂ ಕೂಡಾ ಆರೋಪಿಗಳ ಬಂಧನ ಮಾಡಿರುವುದಿಲ್ಲ. ಈ ಕೂಡಲೇ ಬ್ರಿಜ್ ಭೂಷಣ ಸಿಂಗ್ ಮತ್ತು ಸಂದೀಪ್ ಸಿಂಗ್ ಅವರನ್ನು ಬಂಧಿಸಿ ಅವರಿಗೆ ತಕ್ಕ ಶಿಕ್ಷೆ ನೀಡುಬೇಕು ಒಂದು ವೇಳೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳದಿದ್ದರೆ, ಮುಂದೆ ಇಡೀ ದೇಶದಲ್ಲಿ ಮಹಿಳೆಯರ ರಕ್ಷಣೆಗಾಗಿ
ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪದಾಧಿಕಾರಿಗಳು ಪ್ರಧಾನಿಗಳಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಆರ್.ಕೆ ದೇಸಾಯಿ, ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.