ಜಮಖಂಡಿ

ರಾಜ್ಯ-ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ

ರಾಜ್ಯ-ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ
ಜಮಖಂಡಿ ತುಂಗಳ ಶಾಲೆ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಶಾಸಕ ಆನಂದ ನ್ಯಾಮಗೌಡ

ಲೋಕದರ್ಶನ ವರದಿ,

ಜಮಖಂಡಿ 28:  ಐತಿಹಾಸಿಕ ಪೋಲೋ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕೆಕೆ ತುಂಗಳ ಶಾಲೆಯಲ್ಲಿ ವಿವಿಧ ಕ್ರೀಡೆಗಳಲ್ಲಿ ಉತ್ತಮ ಸ್ಥಾನ ಪಡೆದು ರಾಜ್ಯ-ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮಕ್ಕಳನ್ನು ಶಾಸಕ ಆನಂದ ನ್ಯಾಮಗೌಡ ಶಾಲು ಹೊದಿಸಿ ಸನ್ಮಾನಿಸಿದರು.

ಈಚೆಗೆ ನಡೆದ ರಾಜ್ಯ ಮಟ್ಟದ ಜಿಮ್ನಾಸ್ಟಿಕ,ಮಲ್ಲಕಂಬ,ಜಂಪ್ ರೋಪ್, ಮಿನಿ ಓಲಂಪಿಕ್ಸ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ರಜಿನೇಶ ಶೇಗುಣಸಿ, ನವೀನ ಕಾಂಬಳೆ, ಅಂಕಿತಾ ಅರಬಾವಿ, ಭುವನೇಶ್ವರಿ ಯಾಳಗಿ, ಬಸವರಾಜ ಹಂಚನಾಳ, ಸೃಜನಕುಮಾರ ಕೌಜಲಗಿ, ಚಂದ್ರಿಕಾ ದೊಡಮನಿ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ , ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಸೀಲ್ದಾರ ಸದಾಶಿವ ಮಕ್ಕೋಜಿ, ಪೌರಾಯುಕ್ತೆ ಲಕ್ಷ್ಮಿ ಅಷ್ಟಗಿ, ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ಸದಸ್ಯ ಸುನೀಲ ಸಿಂಧೆ, ಪೂಜಾ ವಾಳ್ವೇಕರ, ನಗರದ ಪಾಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ, ರಾಜೂ ಚಿಕನಾಳ, ವಿನಾಯಕ ಗವಳಿ, ಡಿವೈಎಸ್ಪಿ ಶಾಂತವೀರ, ಗುರು ಜನವಾಡ ಅನೇಕರು ಉಪಸ್ಥಿತರಿದರು. 


ಸುದ್ದಿ ಓದಿ