ಎ.14ರಂದು ಸಾಮೂಹಿಕ ವಿವಾಹ
ಬೈಲಹೊಂಗಲ 06: ಪಟ್ಟಣದ ಬಸವ ನಗರದ ಮಾತಾ ದುರ್ಗಾಪರಮೇಶ್ವರಿದೇವಿ ದೇವಸ್ಥಾನದಲ್ಲಿ ಎ. 13,14,15 ರಂದು ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಎ.14ರಂದು ಡಾ.ಮಹರ್ಷಿ ಆನಂದ ಗುರೂಜಿ ಹಾಗೂ ನಾಡಿನ ವಿವಿಧ ಸಮ್ಮುಖದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಾಹ ಮಾಡಿಕೊಳ್ಳಲಿಚ್ಛಿಸುವವರು ಎ.10 ರೊಳಗಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ದೇವಸ್ಥನದ ಧರ್ಮದರ್ಶಿಳಾದ ಡಾ.ಮಹಾಂತಶಾಸ್ತ್ರೀಗಳು ಆರಾದ್ರಿಮಠ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೋ. 8686191111, 9945269880 ಸಂಪರ್ಕಿಸಲು ಕೋರಲಾಗಿದೆ.