ಬಳ್ಳಾರಿ

ಕನ್ನಡ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು: ಡಿವೈಎಫ್ಐ ಒತ್ತಾಯ

ಕನ್ನಡ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು: ಡಿವೈಎಫ್ಐ ಒತ್ತಾಯ

ಲೋಕದರ್ಶನ ವರದಿ

ಬಳ್ಳಾರಿ 11: ನಗರದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯಲ್ಲಿ ಖಾಲಿ ಇರುವ 9212 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿರುವ ಕೇಂದ್ರ ಸರ್ಕಾ , ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಮಾತೃಭಾಷೆ ಕನ್ನಡ ಕಡೆಗಣಿಸಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಯಲ್ಲಿ ಮಾತ್ರವೇ ಬರೆಯಬಹುದು ಎಂಬ ಷರತ್ತು ಹಾಕಿರುವುದು ರಾಜ್ಯದ ಯುವಜನರಿಗೆ ಎಸಗುತ್ತಿರುವ ಅನ್ಯಾಯವಾಗಿದೆ ಎಂದು ಡಿವೈಎಫ್ಐ ಬಳ್ಳಾರಿ ಜಿಲ್ಲಾ ಸಮಿತಿ ತೀವ್ರವಾಗಿ  ಖಂಡಿಸುತ್ತವೆ. 

   ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಯು. ಎರ್ರೀ ಸ್ವಾಮಿ ಮಾತನಾಡಿ.ಕೇಂದ್ರೀಯ ಮೀಸಲು ಪಡೆಯ ಪ್ರವೇಶ ಪರೀಕ್ಷೆಯ 9212 ಹುದ್ದೆಗಳ ಪೈಕಿ ಕರ್ನಾಟಕದಲ್ಲಿ ಖಾಲಿ ಇರುವ 400, ತಮಿಳು ನಾಡಿನ 579 ಹುದ್ದೆಗಳು ಸೇರಿವೆ. ಆಯಾ ರಾಜ್ಯಗಳ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸದಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ.ಸಿಆರ್ ಪಿಎಫ್ ನ ಈ ಕಟ್ಟಳೆಯಿಂದಾಗಿ ಹಿಂದಿ, ಇಂಗ್ಲೀಷ್ ಬರದಿರುವ ಅಭ್ಯಥರ್ಿಗಳು ಈ ಪರೀಕ್ಷೆ ಬರೆಯಲು ಅವಕಾಶವಿಲ್ಲದಂತಾಗಿದೆ. ಕೂಡಲೇ ಕೇಂದ್ರ ಸರಕಾರ ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆಗೆ ಅವಕಾಶ ನೀಡಬೇಕು 

   ಸಿಆರ್ಪಿಎಫ್ ಕಂಪ್ಯೂಟರ್ ಟೆಸ್ಟ್ನಲ್ಲಿ ಕನ್ನಡ ಸೇರಿಸಿಲ್ಲ. ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪರೀಕ್ಷೆ ಬರೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಪರೀಕ್ಷೆ ಕುರಿತ ಅಧಿಸೂಚನೆಯು ತಾರತಮ್ಯ ಮತ್ತು ಏಕಪಕ್ಷೀಯವಾಗಿದೆ. ಇದು ಕರ್ನಾಟಕದ ಅರ್ಜಿದಾರರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಯೋಧರಾಗಲು ಬಯಸುವ ವಿಭಿನ್ನ ಭಾಷಾ, ಪ್ರಾದೇಶಿಕ ಆಕಾಂಕ್ಷಿಗಳ ಮೂಲಭೂತ ಹಕ್ಕನ್ನು  ಕಸಿಯುವುದು ಸರ್ವಾಧಿಕಾರಿ ಧೋರಣೆಯಾಗಿದೆ. ಈ ಪರೀಕ್ಷೆಯಲ್ಲಿ 100ರಲ್ಲಿ 25 ಅಂಕಗಳು ಹಿಂದಿ ಬರವಣಿಗೆಗೆ ಸಂಬಂಧಿಸಿವೆ. ಇದು ಹಿಂದಿ ಮಾತನಾಡುವ ಅಭ್ಯರ್ಥಿಗಳಿಗೆ ಮಾತ್ರ ಲಾಭ ತರುತ್ತದೆ. 

   ಇದು ಕನರ್ಾಟಕ ಸೇರಿದಂತೆ ಇತರ ದಕ್ಷಿಣ ರಾಜ್ಯಗಳ ಆಕಾಂಕ್ಷಿಗಳಿಗೆ ಅನುಕೂಲಕರವಾಗಿಲ್ಲ. ಅಲ್ಲದೆ ಅವರ ಸ್ವಂತ ರಾಜ್ಯದಲ್ಲಿ ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು  ಅಡ್ಡಿಯನ್ನುಂಟು ಮಾಡುವುದಾಗಿದೆ. ಆದ್ದರಿಂದ ಕೇಂದ್ರ ಸರಕಾರ ಕೂಡಲೇ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಆಯಾ ರಾಜ್ಯಗಳ ಮಾತೃಭಾಷೆ ಅಥವಾ  ಆಂಗ್ಲ, ಹಿಂದಿ ಭಾಷೆಯಲ್ಲಿ ಬರೆಯವ ಆಯ್ಕೆಯ ಸ್ವಾತಂತ್ರ್ಯವನ್ನು ಅಭ್ಯರ್ಥಿಗಳ ವಿವೇಚನೆಗೆ ಬಿಡುವ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ತೀವ್ರತೆವಾದ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ), ಜಿಲ್ಲಾ ಅಧ್ಯಕ್ಷ ಯು. ಎರರ್ಿಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈ ಮೂಲಕ  ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದಶರ್ಿ ಎಚ್ ಸ್ವಾಮಿ, ತಾಲೂಕು ಅಧ್ಯಕ್ಷರು ಎಸ್ ಶಂಕರ್ ಗೌಡ,ಜಿಲ್ಲಾ ಉಪಾಧ್ಯಕ್ಷ ಹೊನ್ನೂರ್ ಸಾಬ್, ಕೊಳಗಲ್ ಎಚ್ ಎರರ್ಿಸ್ವಾಮಿಯವರು ಇತರರು ಉಪಸ್ಥಿತರಿದ್ದರು 

ಸುದ್ದಿ ಓದಿ