ಬೈಲಹೊಂಗಲ

9ರಿಂದ ಲಿಂ.ಗಂಗಾಧರ ಮಹಾಸ್ವಾಮೀಜಿಗಳ ಪುಣ್ಯಸ್ಮರಣೊತ್ಸವ

9ರಿಂದ ಲಿಂ.ಗಂಗಾಧರ ಮಹಾಸ್ವಾಮೀಜಿಗಳ ಪುಣ್ಯಸ್ಮರಣೊತ್ಸವ

ಬೈಲಹೊಂಗಲ 06: ಪಟ್ಟಣದ ಶಾಖಾ ಮೂರುಸಾವಿರಮಠದ ನೀಲಕಂಠ ಮಹಾಶಿವಯೋಗಿಶ್ವರರ ಜಾತ್ರಾ ಮಹೋತ್ಸವ ಲಿಂ.ಗಂಗಾಧರ ಮಹಾಸ್ವಾಮೀಜಿಗಳ 12 ನೇ ಪುಣ್ಯಸ್ಮರಣೊತ್ಸವ ಕಾರ್ಯಕ್ರಮ ದಿ.9ರಿಂದ 11ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಮಹಾಸ್ವಾಮೀಜಿ ತಿಳಿಸಿದರು. ಅವರು ಶನಿವಾರ ಪಟ್ಟಣದ ಮೂರುಸಾವಿರಮಠದಲ್ಲಿ ನಡೆದ ಗೋಷ್ಠಿ ಉದ್ದೇಶಿಸಿ ಮಾತನಾಡಿ, ದಿ.9 ರಂದು ಮುಂ 9ಕ್ಕೆ ಸ್ಥಲ ದ್ವಜಾರೋಹಣವನ್ನು ಹೊಸೂರ ಗಂಗಾಧರ ಮಹಾಸ್ವಾಮೀಜಿ ನೆರವೇರಿಸುವರು. ಮಹಾಂತೇಶ ಶಾಸ್ತ್ರಿ, ಸಿದ್ದರಾಮ ಶಾಸ್ತ್ರೀಗಳು ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ನಿ.ವಿ.ವ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಸಿ.ಎಸ್.ಸಾಧುನವರ, ಎಸ್.ಜಿ.ಮೆಟಗುಡ್ಡ, ಪುರಸಭೆ ಅಧ್ಯಕ್ಷ ಬಾಬು ಮೆಟಗುಡ್ಡ, ಸೋಮೆಶ್ವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಪುತ್ರ ಹೊಸಮನಿ, ಎಸ್.ಎಫ್.ಹರಕುಣಿ, ಬಸವಪ್ರಭು ಬೆಳಗಾವಿ, ಶ್ರೀಶೈಲ ಬೊಳನ್ನವರ, ಇತರರು ಪಾಲ್ಗೊಳ್ಳುವರು.

 ಸಂಜೆ 7 ಕ್ಕೆ ಹಾನಗಲ್ ಕುಮಾರ. ಮಹಾಶಿವಯೋಗಿಗಳ ಪುಣ್ಯಸ್ಮರಣೆ ಹಾಗೂ ಧಾರ್ಮಿ ಕ ಚಿಂತನ ಸಭೆ ಸಾನಿಧ್ಯವನ್ನು ಬೆಳಗಾವಿ ಕಾರಂಜಿಮಠದ ಗುರುಸಿದ್ದ ಮಹಾಸ್ವಾಮೀಜಿ ವಹಿಸುವರು. ಸಮ್ಮುಖವನ್ನು ಮಹಾದೇವ ಸರಸ್ವತಿ ಮಹಾಸ್ವಾಮೀಜಿ, ಮಡಿವಾಳೇಶ್ವರ ಸ್ವಾಮೀಜಿ,ಬುಡರಕಟ್ಟಿ ಮೃತ್ಯುಂಜಯ ಸ್ವಾಮೀಜಿ, ಕಿತ್ತೂರ ಮಲ್ಲಿಕಾರ್ಜುನ ದೇವರು, ಬ್ರಹ್ಮಕುಮಾರಿ ರಾಜಯೋಗಿನಿ ಬಿ.ಕೆ ಪ್ರಬಾಜಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಎಸ್.ಸಿ.ಮೆಟಗುಡ್ಡ ವಹಿಸುವರು.ಮುಖ್ಯ ಅತಿಥಿಗಳಾಗಿ ಶಾಸಕ ಮಹಾಂತೇಶ ದೊಡ್ಡಗೌಡರ, ಜಿ.ಪಂ ಸದಸ್ಯ ಶಂಕರ ಮಾಡಲಗಿ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಎಸ್.ಎಸ್.ಗಡತರನವರ, ಸಿಪಿಐ ಯು.ಎಚ್.ಸಾತೇನಹಳ್ಳಿ ಪಾಲ್ಗೊಳ್ಳುವರು.

 ದಿ.10 ರಂದು  ಗಂಗಾಧರ ಮಹಾಸ್ವಾಮೀಜಿ 12 ನೇ ಪುಣ್ಯಸ್ಮರಣೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಸಾನಿಧ್ಯವನ್ನು ಮುರಗೋಡ ನೀಲಕಂಠ ಮಹಾಸ್ವಾಮೀಜಿ ವಹಿಸುವರು. ಸಮ್ಮುಖವನ್ನು ಮುರಘೇಂದ್ರ ಮಹಾಸ್ವಾಮೀಜಿ, ಕಟಕೋಳ ಸಚ್ಚಿದಾನಂದ ಮಹಾಸ್ವಾಮೀಜಿ, ಘಟಪ್ರಭಾ ವೀರಪಾಕ್ಷ ದೇವರು,ಬೈಲಹೊಂಗಲ ಬಸವಲಿಂಗ ಸ್ವಾಮೀಜಿ, ಹೊಸೂರ ಗಂಗಾಧರ ಮಹಾಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಡಾ.ಸಿ.ಎಸ್.ಸಾಧುನವರ ವಹಿಸುವರು.

   ಮುಖ್ಯ ಅತಿಥಿಗಳಾಗಿ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಆನಂದ ಮಾಮನಿ, ಮಹಾಂತೇಶ ಕೌಜಲಗಿ, ವಿಧಾನಪರಿμÀತ್ ಸದಸ್ಯ ಮಹಾಂತೇಶ ಕವಟಗಿಮಠ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಎಸಿ ಶಶಿಧರ ಬಗಲಿ, ಡಿವಾಯ್ ಎಸ್ ಪಿ ಶಿವಾನಂದ ಕಟಗಿ, ತಹಶಿಲ್ದಾರ ಬಸವರಾಜ ನಾಗರಾಳ, ಚಿತ್ರನಟ ಶಿವರಂಜನ್ ಬೊಳನ್ನವರ, ಎಸ್.ಎಸ್. ಸಿದ್ನಾಳ, ಪ್ರಕಾಶ ಬಾಳೇಕುಂದರಗಿ,ವೀರನಗೌಡಾ ಸಂಗನಗೌಡರ, ಮಹಾಂತೇಶ ತುರಮರಿ ಈಶ್ವರ ಹೋಟಿ ಪಾಲ್ಗೊಳ್ಳುವರು.

ದಿ.11 ರಂದು ಮುಂ.6ಕ್ಕೆ ನೀಲಕಂಠ ಮಹಾಶಿವಯೋಗಿಶ್ವ ರ, ಗಂಗಾಧರ ಮಹಾಸ್ವಾಮೀಜಿಗಳ ಕರ್ತೃ ಗದ್ದುಗೆಗೆ ರುದ್ರಾಭಿμÉೀಕ, ಪಲ್ಲಕ್ಕಿ  ಉತ್ಸವ ನಡೆಯಲಿದೆ. ಸಂಜೆ 4ಕ್ಕೆ ಬಸವಲಿಂಗ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ವಿವಿಧ ಮಠಾದೀಶರ ಸಮ್ಮುಖದಲ್ಲಿ ಮಹಾರಥೊತ್ಸವ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ನೀವಿವ ಸಂಸ್ಥೆ ನಿರ್ದೇಶಕ ಎಸ್.ಎಸ್.ಸಿದ್ನಾಳ ಮತ್ತಿತರರು ಇದ್ದರು.


ಸುದ್ದಿ ಓದಿ