ನಮ್ಮ ಶಾಲೆ ನಮ್ಮ ಹೆಮ್ಮೆಯ ವಿದ್ಯಾದೇಗುಲ : ತಾಲೂಕ ಶಿಕ್ಷಣ ಸಮಿತಿ ಶಿಗ್ಗಾವಿ
ಶಿಗ್ಗಾವಿ : ತಾಲೂಕಿನ ಇತಿಹಾಸದಲ್ಲಿ ಅತಿ ಹಳೆಯ ಹಾಗೂ ಹೆಚ್ಚು ವಿದ್ಯಾರ್ಥಿಗಳು ವಿಧ್ಯಾರ್ಜನೆ ಮಾಡಿ ಸ್ವಾವಲಂಬಿಯಾಗಲು ಕಾರಣಿಕರ್ಥವಾದ ವಿಧ್ಯಾ ಸಂಸ್ಥೆ ಎಂದರೆ ಅಂದಿನ ಗಜಾನನ ಹೈಸ್ಕೂಲ್ ಈಗಿನ ತಾಲೂಕ ಶಿಕ್ಷಣ ಸಮಿತಿ ಶಿಗ್ಗಾವಿ ಎಂದರೆ ಎಸ್.ಬಿ.ಬಿ.ಎಂ.ಡಿ ಸಂಯುಕ್ತ ಪದವಿ ಪೂರ್ವ ಕಾಲೇಜ ಶಿಗ್ಗಾವಿ ಎಂದರ್ಥ.
ಸಂಸ್ಥೆಯು ಪಟ್ಟಣದ ಗಜಾನನ ದೇವಸ್ಥಾನದಲ್ಲಿ 1946 ರಲ್ಲಿ ಪ್ರಾರಂಭವಾದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಲಕ್ಷಾಂತರ ವಿಧ್ಯಾಥರ್ಿಗಳ ಜೀವನಕ್ಕೆ ಆಶಾಕಿರಣವಾದ ಸಂಸ್ಥೆ, 1946 ರಲ್ಲಿ ಗಜಾನನ ಹೈಸ್ಕೂಲ್, 1963 ರಲ್ಲಿ ಶ್ರೀಮಂತ ಬಸವಂತರಾವ ಬುಳ್ಳಪ್ಪ ಮಾಮಲೇದೇಸಾಯಿ ಪ್ರೌಢಶಾಲೆ, 1984 ರಿಂದ ಶ್ರೀಮಂತ ಬ.ಬು.ಮಾಮಲೇದೇಸಾಯಿ. ಸ.ಪ.ಪೂ.ಕಾಲೇಜ ಶಿಗ್ಗಾವಿ ಈ ಸಂಸ್ಥೆಗೆ ಚಾಲನೆ ನೀಡಿದವರು ಅನಂತಭಟ್ಟ.ಕೇಶವಭಟ್ಟ.ಹುರುಳಿಕುಪ್ಪಿ, ವಿರಕ್ತಮಠದ ಶ್ರೀ.ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು, ಹನುಮಂತಗೌಡ.ಎ.ಪಾಟೀಲ ಹಾಗೂ 1954 ರಿಂದ ಶಿಗ್ಗಾವಿ ತಾಲೂಕ ಶಿಕ್ಷಣ ಸಮಿತಿಯ ನೇತೃತ್ವದಲ್ಲಿ ಅನೇಕ ಶಾಲಾ ಸುಧಾರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಗ್ರ ಧಾರವಾಡ ಜಿಲ್ಲೆಯಲ್ಲಿ ಮಾದರಿ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಹೇಳಲಾಗುತ್ತದೆ.
ಸಂಸ್ಥೆಯನ್ನು ಅಭಿವೃದ್ದಿ ಮಾಡಲು ಅನೇಕ ಮಹನೀಯರು ತಮ್ಮ ಅಳಿಲು ಸೇವೆಯನ್ನು ಅದ್ಯಕ್ಷ ಸ್ಥಾನದ ರೂಪದಲ್ಲಿ ಅಲಂಕರಿಸಿದ್ದಾರೆ ಅವರೆಂದರೆ ಆರ್.ಸಿ.ಪಾಟೀಲ, ಆರ್.ಬಿ.ಮಾಮಲೇದೇಸಾಯಿ, ಬಿ.ಬಿ.ಮಾಮಲೇದೇಸಾಯಿ, ಡಾ.ಪಿ.ವ್ಹಿ.ಜೋಶಿ, ಎಮ್.ಬಿ.ಅಂಕಲಕೋಟಿ, ಸದ್ಯ ಪ್ರಸ್ತುತವಾಗಿ ತಾಲೂಕ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ ಎನ್.ಆರ್.ಮಾಮಲೇದೇಸಾಯಿ ಕಾರ್ಯಭಾರವನ್ನು ನಿರ್ವಹಿಸುತ್ತಿದ್ದಾರೆ.
ಉಪಾಧ್ಯಕ್ಷರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ ಮಹನೀಯರೆಂದರೆ ಹನುಮಂತಗೌಡ.ಎ.ಪಾಟೀಲ, ಡಾ. ಪಿ.ವ್ಹಿ.ಜೋಶಿ, ಎನ್.ಎಫ್.ಯಲಿಗಾರ, ವ್ಹಿ.ಕೆ.ದೇಶಪಾಂಡೆ, ಆರ್.ಸಿ.ಸಂಶಿ, ಪ್ರಸ್ತುತವಾಗಿ ದತ್ತಣ್ಣಾ.ವ್ಹಿ.ವೇರ್ಣೀಕರ ತಮ್ಮ ಕಾರ್ಯಭಾರವನ್ನು ನಿರ್ವಹಿಸುತ್ತಿದ್ದಾರೆ. ಕಾರ್ಯದರ್ಶಿಯಾಗಿ ಡಾ.ಪಿ.ವ್ಹಿ.ಜೋಶಿ, ಶಂಕರಗೌಡ.ಜಿ.ಪಾಟೀಲ ದೈವಾದೀನರಾದಾಗಿನಿಂದ ಎಸ್.ಪಿ.ಜೋಶಿಯವರು ಕಾರ್ಯಾಭಾರವನ್ನು ನಿರ್ವಹಿಸುತ್ತಿದ್ದಾರೆ.
ಈ ಸಂಸ್ಥೆ ಮುಖ್ಯ ಉದ್ದೇಶ ತಾಲೂಕಿನ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಕಡಿಮೆ ಪ್ರವೇಶ ಶುಲ್ಕ ಹಾಗೂ ಅನುಧಾನ ಶುಲ್ಕ ಪಡೆಯುವುದು ಮತ್ತು ದೀನ ದಲಿತರ ಹಾಗೂ ಕಡು ಬಡವರ ಆಶಾಕಿರಣವಾಗುವ ಉದ್ದೇಶ ಹೊಂದಿ ಇಂದಿಗೆ 74 ವಸಂತಗಳನ್ನು ಕಳೆದು ಮುಂದಿನ ವರ್ಷ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಎಲ್ಲಾ ತರಹದ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಾಲೂಕ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಎನ್.ಆರ್.ಮಾಮಲೇದೇಸಾಯಿ ಹೇಳುತ್ತಾರೆ.
1946 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಮೊದಲಿಗೆ ಗಜಾನನ ದೇವಸ್ಥಾನದಲ್ಲಿ ಪ್ರಾರಂಭವಾಗಿ ಹಂತ ಹಂತವಾಗಿ ತಗಡಿನ ಶೆಡ್, ಸ್ವಂತ ಕಟ್ಟಡ ಹಾಗೂ ಇಂದು ಭವ್ಯವಾದ ಸುಂದರವಾದ ಕಟ್ಟಡವನ್ನು ಹೊಂದಿದೆ ಅಲ್ಲದೇ ಜಿಲ್ಲೆಯಲ್ಲಿ ಆದರ್ಶ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಆದರೆ ಸುತ್ತಲು ಕಂಪೌಂಡ ವ್ಯವಸ್ಥೆಯನ್ನು ಹಂತ ಹಂತವಾಗಿ ಸಮಿತಿಯಿಂದ ಮಾಡಲಾಗಿತ್ತು. ನಂತರ ಆ ಕಡೆ ಸರಕಾರಿ ಶಾಲೆಯ ಹತ್ತಿರದ ಕಂಪೌಂಡ ಕಟ್ಟುವುದು ಯಕ್ಷಪ್ರಶ್ನೆಯಾಗಿತ್ತು ಅದಕ್ಕೆ ಹಸಿರು ನಿಶಾನೆ ತೋರಿಸಿದ್ದು ತಾಲೂಕ ಶಿಕ್ಷಣ ಸಮಿತಿಯ ಎಲ್ಲ ಗೌರವ್ಹಾನಿತ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಎಂದರೆ ತಪ್ಪಾಗದು.
ಶಿಗ್ಗಾವಿ ತಾಲೂಕ ಶಿಕ್ಷಣ ಸಮಿತಿಯ ಪ್ರೇರಣೆಯಿಂದ ಹಳೆ ವಿದ್ಯಾರ್ಥಿಗಳ ಸಂಘವನ್ನು ನೋಂದಣಿ ಮಾಡಿಸಿ ಅದರ ನೇತೃತ್ವದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 2023 ರಲ್ಲಿ ಶಿಗ್ಗಾವಿ ತಾಲೂಕ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕೈಗೊಳ್ಳಲು ರೂಪು ರೇಷೆಗಳನ್ನು ತಯಾರಿಸಿದ್ದು ಅದರಲ್ಲಿ ಪ್ರಮುಖವಾಗಿದ್ದು ಕನ್ನಡ ಸರಕಾರಿ ಶಾಲೆಯ ಮೂಲೆಯಿಂದ ಹಿಡಿದು ಕೆ.ಇ.ಬಿ. ಕಂಪೌಂಡವರೆಗೂ ವ್ಯವಸ್ಥಿತವಾದ ಭವ್ಯವಾದ ಕಂಪೌಂಡ ನಿಮರ್ಾಣ ಮಾಡಲೂ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಸಂಕಲ್ಪ ಹೊಂದಿದ್ದು ಅದಕ್ಕೆ ಶಿಕ್ಷಣ ಸಮಿತಿಯ ಅಧ್ಯಕ್ಷ ಡಾ ಮಾಮಲೇದೇಸಾಯಿ, ಉಪಾಧ್ಯಕ್ಷ ದತ್ತಣ್ಣಾ ವೇಣರ್ೇಕರ, ಎಸ್.ಪಿ.ಜೋಶಿ, ಬಿ.ಬಿ.ಮಾಮಲೇದೇಸಾಯಿ, ಡಾ. ಪಿ.ಆರ್.ಪಾಟೀಲ, ಎಮ್.ಎಲ್.ದೇಶಪಾಂಡೆ, ಎಸ್.ಎಫ್.ಯಲಿಗಾರ, ವಿ.ಬಿ.ಮೇಟಿ, ಶಿವಪ್ಪ ಚಿನ್ನಪ್ಪನವರ, ಬಿ.ಜಿ. ಖುರ್ಸುಪೂರ, ವಿ.ಎಮ್.ಅಂಕಲಕೋಟಿ, ಸಿ.ಎಸ್.ಪಾಲನಕರ, ಎಸ್.ಎಸ್.ರಾಮಗೇರಿ, ಪ್ರಾಚಾರ್ಯ ಆರ್.ಎಸ್.ಭಟ್, ಉಪ ಪ್ರಾಚಾರ್ಯ ಕೆ.ಬಿ.ಚನ್ನಪ್ಪ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ. ಆರ್. ದೇಶಪಾಂಡೆ, ಕಾರ್ಯದಶರ್ಿ ಜಿ.ಎನ್.ಯಲಿಗಾರ ಹಾಗೂ ಗೌರವ್ಹಾನಿತ ಸರ್ವಸದಸ್ಯರು ಸೇರಿದಂತೆ ಹಳೆ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸುಮಾರು 10 ಲಕ್ಷ ಮೊತ್ತದ ಕಂಪೌಂಡ ನಿಮರ್ಾಣ ಮಾಡಿ ಕಂಪೌಂಡ ಕೆಲಸ ಸುಗಮವಾಗಿ ಪೂರ್ಣ ಗೊಂಡಿದ್ದು ಹಳೆ ವಿದ್ಯಾರ್ಥಿಗಳಿಗೆ ಹರ್ಷದಾಯಕವಾಗಿದೆ.
* ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಾಲೂಕ ಶಿಕ್ಷಣ ಸಮಿತಿ ಅಮೃತ ಮಹೋತ್ಸವ ಕಟ್ಟಡದ ಶಂಕುಸ್ಥಾಪನೆಗಾಗಿ 1 ಕೋಟಿ ಅನುಧಾನ ನೀಡಿದ್ದು ತಾಲೂಕಿನ ಎಲ್ಲ ಶಿಕ್ಷಣ ಪ್ರೇಮಿಗಳು ಮತ್ತು ತಾಲೂಕ ಶಿಕ್ಷಣ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದವರು ಹರ್ಷ ವ್ಯಕ್ತಪಡಿಸಿದ್ದಾರೆ.
-ಡಾ.ಎನ್.ಆರ್.ಮಾಮಲೇದೇಸಾಯಿ
ಅಧ್ಯಕ್ಷರು ತಾಲೂಕ ಶಿಕ್ಷಣ ಸಮಿತಿ ಶಿಗ್ಗಾವಿ