ಕೆಳಮಟ್ಟದ ಜನರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ
ಲೋಕದರ್ಶನ ವರದಿ
ಶಿಗ್ಗಾವಿ 23: ಅಂಬಿಗರ ಚೌಡಯ್ಯನವರು ಬಸವಣ್ಣನವರ ಸಮಕಾಲೀನ ಶರಣಲ್ಲಿ ಒಬ್ಬರಾಗಿದ್ದು, ಸಮಾಜದಲ್ಲಿನ ತಾರತಮ್ಯ, ಅಸ್ಪೃಷ್ಯತೆ ಕುರಿತಾಗಿ ಧ್ವನಿಯತ್ತಿದ ನಿಜ ಶರಣರಾಗಿದ್ದು ಅವರ ಮಾರ್ಗದರ್ಶನದಲ್ಲಿ ಬೆಳದ ಸಮಾಜ ಇನ್ನೂ ಜ್ಯಾತಿ ವ್ಯವಸ್ಥೆಯ ಹೊರತಾಗಿಲ್ಲ. ಶರಣರು ತೋರಿದ ಮಾರ್ಗದಲ್ಲಿ ನಾವೆಲ್ಲಾ ಬಾಳಿ ಸಹೋದರತ್ವದಿಂದ ಬದುಕಬೇಕಾಗಿದೆ ಎಂದು ಪುರಸಭೆ ಸದಸ್ಯ ಪರಶುರಾಮ ಸೊನ್ನದ ಹೇಳಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ತಾಲೂಕಾ ಆಡಳಿತ ವತಿಯಿಂದ ಆಯೋಜಿಲಾಗಿದ್ದ 902ನೇ ಅಂಭಿಗರ ಚೌಡಯ್ಯ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಪ್ರಾಮಾಣಿಕ ಕಾಯಕದಿಂದ ಮುಂದೆ ಬರಬೇಕು. ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಶೈಕ್ಷಣಿಕವಾಗಿ ಮುಂದೆ ಬರಬೇಕು, ಯುವಕರು ದುಷ್ಚಟಗಳಿಂದ ದೂರ ಉಳಿಯಬೇಕು, ಶರಣರನ್ನು ಮಾದರಿಯಾಗಿ ಇಟ್ಟುಕೊಂಡು ಬಾಳಬೇಕು, ಸಮಾಜ ರಾಜಕೀಯವಾಗಿ ಸದೃಡವಾಗಬೇಕು, ಮಧ್ಯಪಾನ ಧೂಮಪಾನ ತ್ಯಜಿಸಿದರೆ ಕೆಳಮಟ್ಟದ ಜನರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಹೇಳಿದರು.
ತಾಲೂಕ ಸಮಾಜದ ಅಧ್ಯಕ್ಷ ಹೊನ್ನಪ್ಪ ಹಾಳೆ ನಿಜ ಶರಣ ಅಂಭಿಗರ ಚೌಡಯ್ಯನವರ ಜೀವನ, ಅದರ್ಶಗಳನ್ನು ಕುರಿತಂತೆ ಉಪನ್ಯಾಸ ನೀಡಿದರು. ಗ್ರೇಡ್2 ತಹಶಿಲದಾರ ರವಿ ಕೋರವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದ್ಯಾಮಣ್ಣಾ ಬಾರ್ಕಿ, ಮುದುಕಣ್ಣಾ ಹಾಳಿ, ಅಶೋಕ ಕಾಳೆ, ಫಕ್ಕೀರಪ್ಪಾ ಕುಂದೂರ, ಷಣ್ಮುಖ ನೆಲ್ಲಿಕೊಪ್ಪ, ಸೇರಿದಂತೆ ತಾಲೂಕಿನ ವಿವಿಧ ಸಮಾಜಗಳ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು