ಶಿಗ್ಗಾವ್

ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ರಾಮಭಾಣ : ಮ್ಯಾಗೇರಿ

ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ರಾಮಭಾಣ : ಮ್ಯಾಗೇರಿ

ಶಿಗ್ಗಾವಿ :  ಗ್ರಾಮೀಣ ಪ್ರದೇಶದಲ್ಲಿ ಇಂದು ಯುವಕರು ಆಧುನೀಕರಣಕ್ಕೆ ಮಾರು ಹೋಗಿ ನಮ್ಮ ದೇಶಿ ಸಂಸ್ರ್ಕತಿಯನ್ನು ಮರೆಯುತ್ತಿದ್ದಾರೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.

ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮತ್ತು ಸಾಂಸ್ರ್ಕತಿಕ ಕಲಾ ಸಂಘ(ರಿ) ಶಿಗ್ಗಾಂವ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಮುಕ್ತ ಹಾರ್ಡ್  ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಇಂದು ನಾವು ಅಂದುಕೊಂಡಿರುವ ಗುರಿಯನ್ನು ಸಾಧಿಸಬೇಕಾದರೆ ಕಠಿಣ ಪರಿಶ್ರಮದ ಅವಶ್ಯಕತೆ ಇದೆ ಅತಿ ಹೆಚ್ಚು ಕಷ್ಟ ಪಟ್ಟವರು ಇಂದು ಏನನ್ನಾದರು ಸಾಧಿಸಿ ತೋರಿಸಬಲ್ಲರು ಅದಕ್ಕೆ ಸಾಕ್ಷಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್. ಅವರ ಹೆಸರಿನ ಶ್ಯಾಡಂಬಿ ಗ್ರಾಮದ ಯುವಕ ಸಂಘ ಇಂದು ಕ್ರೀಡೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ ಹಾಗಾಗಿ ತಮಗೆ ಅಭಿನಂದನೆಗಳು ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಿವೆಲ್ಲರು ನಡೆಯಬೇಕಿದೆ ಎಂದರು.

 ಕೆ.ಪಿ.ಸಿ.ಸಿ.ಎಸ್.ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ  ಪ್ರಕಾಶ ಹಾದಿಮನಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ ವಾಕ್ಯಗಳಾದ ಶಿಕ್ಷಣ ಸಂಘಟನೆ ಹೋರಾಟ ಈ ಮೂರು ವಾಕ್ಯಗಳ ಅನ್ವಯ ನಮ್ಮ ಯುವಕರು ಶಿಕ್ಷಣವಂತರಾಗಿ ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು ಮತ್ತು ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಸದಸ್ಯ ನರಹರಿ ಕಟ್ಟಿ ಮಾತನಾಡಿ ಅಂಬೇಡ್ಕರ್ ಎನ್ನುವ ಹೆಸರಿನಲ್ಲಿ ಒಂದು ದೊಡ್ಡ ಶಕ್ತಿ ಇದೆ ಇಂದು ದೇಶದಲ್ಲಿ ಕಟ್ಟ ಕಡೆಯ ಜನರಿಗೂ ಕೂಡಾ ಸಮಾನ ಅವಕಾಶಗಳು ಸಿಕ್ಕಿವೆ ಎಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಮೂಲಕ ಅಂತಹ ಮಹಾನ ನಾಯಕನ ಚಿಂತನೆಗಳನ್ನು ನಾವು ನೀವೆಲ್ಲ ಅಳವಡಿಸಿಕೊಳ್ಳಬೇಕಿದೆ ಎಂದರು.

ಮುಖ್ಯ ಅತಿಥಿ ಕೆ.ಎಮ್.ಎಪ್ ನಿರ್ದೇಶಕರಾದ ಬಸನಗೌಡ ಮೇಲಿನಮನಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಹನಮಂತಪ್ಪ ಸಂಜೀವಣ್ಣವರ ಈರಣ್ಣ ಕಾಳಿ ಸುರೇಶ ಭೀಮನವರ ಕೋಟೆಪ್ಪ ಸಂಜೀವಣ್ಣನವರ ಯುವಕ ಸಂಘದ ಸದಸ್ಯರಾದ ಈರಣ್ಣ ಬೀಮನವರ ಸುರೇಶ ಸಂಜೀವಣ್ಣವರ ವೀರುಪಾಕ್ಷ ಹಿರೇಪ್ಪನವರ ಪ್ರವೀಣ ಗಡೆಣ್ಣವರ ಹಾಗೂ ಇತರರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಶರೀಫ ಮಾಕಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. 

ಸುದ್ದಿ ಓದಿ