ಸೌಂದತ್ತಿ

ವ್ಯಕ್ತಿಕಾಣೆ

ವ್ಯಕ್ತಿಕಾಣೆ
ಫಕ್ಕೀರಪ್ಪ ಕರೆಪ್ಪ ಉಪ್ಪಾರ

ಸವದತ್ತಿ:  ತಾಲೂಕಿನ ಇನಾಂಹೊಂಗಲ ಗ್ರಾಮದ ಫಕ್ಕೀರಪ್ಪ ಕರೆಪ್ಪ ಉಪ್ಪಾರ (50) ಈತನು ಗ್ರಾಮದ ಬಸ್ಸ್ ನಿಲ್ದಾಣದ ಹತ್ತಿರ ಬೀಡಿ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಹೋದವನು ಮರಳಿ ಬಂದಿರುವದಿಲ್ಲ ಎಂದು ಈತನ ಪತ್ನಿ ಮಲ್ಲವ್ವ ಫಕ್ಕೀರಪ್ಪ ಉಪ್ಪಾರ ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಕಾಣೆಯಾದ ವ್ಯಕ್ತಿಯು 4.3 ಅಡಿ ಎತ್ತರವಿದ್ದು, ಸಾದಾಗಪ್ಪು ಮೈಬಣ್ಣ, ಕೋಲು ಮುಖ, ತಲೆಯಲ್ಲಿ ಕಪ್ಪು ಬಿಳಿ ಬಣ್ಣದ ಕೂದಲಿದ್ದು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಅಂಗಿ ನೀಲಿ ಬಣ್ಣದ ಚೆಕ್ಸ್ ಲುಂಗಿ ಧರಿಸಿದ್ದಾನೆ. ಈತನ ಪರಿಚಯ ಯಾರಿಗಾದರೂ ಸಿಕ್ಕಲ್ಲಿ ಸವದತ್ತಿ ಪೊಲೀಸ್ ಠಾಣೆಯ ಫೋನ ನಂ.08330-222333ಗೆ ತಿಳಿಸಲು ಕೋರಲಾಗಿದೆ.




ಸುದ್ದಿ ಓದಿ