ಕೈಗೆ ಕೈ ಜೋಡಿಸುವ ಪಾದಯಾತ್ರೆಯಲ್ಲಿ ಯಾವುದೇ ಸ್ವಾರ್ಥ ಅಡಗಿಲ್ಲ: ಶಾಸಕ ನ್ಯಾಮಗೌಡ
ಲೋಕದರ್ಶನ ವರದಿ
ಜಮಖಂಡಿ 31: ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿ,ಮನೆ ಮನಗಳ ಮುಟ್ಟುವ ಕೆಲಸ ಮಾಡುವ ಉದ್ದೇಶದಿಂದ ಕೈಗೆ ಕೈ ಜೋಡಿಸುವ ಪಾದಯಾತ್ರೆಯನ್ನು ಮಾಡಲಾಗಿದೆ ಇದರಲ್ಲಿ ನಮ್ಮ ಯಾವುದೇ ಸ್ವಾರ್ಥ ಅಡಗಿಲ್ಲವೆಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಪಾದಯಾತ್ರೆ ಪ್ರಾರಂಭಿಸಿ ಸಾರ್ವಕನಿಕನ್ನುದ್ದೇಶಿಸಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ದಿಗೆ 40 ಸಾವಿರ ಕೋಟಿ ರೂ, ಕುಮಾರಸ್ವಾಮಿ ಸಮಿಶ್ರ ಸರ್ಕಾರದಲ್ಲಿ ನೀಡಿದರು. ಭವಾನಿ ರೇವಣ್ಣ ಅವರು ಕೂಡಾ ರಸ್ತೆ ಅಭಿವೃದ್ದಿಗೆ 9 ಕೋ,ರು, ನೀಡಲು ಸರ್ಕಾರದ ಮೇಲೆ ಒತ್ತಡ ಹಾಕಿದ್ದು,ಇಂದು ಶೂರ್ಪಾಲಿ ಗ್ರಾಮದ ರಸ್ತೆ ಮಾಡಲಾಗಿದೆ. ಶುದ್ದೀಕರಣ ನೀರಿನ ಘಟಕವನ್ನು ನಿರ್ಮಿಸಲಾಗಿದೆ.ವಿದ್ಯುತ್ 110 ಕೆವಿ ಕೇಂದ್ರಕ್ಕೆ 1.40 ಕೋ,ರು,ಟೆಂಡರ ಕರೆಯಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗುತ್ತದೆ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ನೀಡಲಾಗುತ್ತೆದೆ.ಮನೆಯ ಯಜಮಾನಿಗೆ 2 ಸಾವಿರ ರು,ಪ್ರೋತ್ಸಾಹಧನ ಹಾಗೂ 10 ಕೆಜಿ ಅಕ್ಕಿ ನೀಡಲು ಕಾಂಗ್ರೆಸ್ ನಾಯಕರು ಸಿದ್ದರಿದ್ದಾರೆ.ಈ ಹಿಂದೆ ನೀಡಿದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿದೆಂದರು. ಕುಮಾರಸ್ವಾಮಿ ಸರ್ಕಾರ 1.5 ಕೋ,ರು, ಖರ್ಚು ಮಾಡಿ ನೀರಾವರಿ ಮಾಡುತ್ತವೆ ಎಂದಿದರು. ಆದರೆ ನಮ್ಮ ಸರಕಾರ 50 ಸಾವಿರ ಕೋಟಿ ಖರ್ಚು ಮಾಡಲಾಗಿದೆ.
ಬಿಜೆಪಿ ಸರ್ಕಾರದಲ್ಲಿ ಹಿಂದು ಮುಸ್ಲಿಂಗಳ ಮಧ್ಯ ದೇಶಭಕ್ತಿ ಹೆಸರಲ್ಲಿ ಕೋಮು ಗಲಭೆ ಸೃಷ್ಠಿಸುವ ಕೆಲಸವಾಗಿದೆ. ರೈತರ ಬೆಳೆದ ಕಬ್ಬಿನ ಬೆಳೆಗೆ ಬೆಂಬಲ ಬೆಲೆ ನೀಡಲಿಲ್ಲ.ಯಾವ ಸಬ್ಸಿಡಿಗಳ ಯೋಜನೆಗಳು ಇಲ್ಲ. ಸುಳ್ಳಿನ ಮೇಲೆ ಕಾಲಹರಣ ಮಾಡಿದೆ. ಇದು ಸುಳ್ಳಿನ ಸರ್ಕಾರ.ಈ ಸರಕಾರ ಎಸ್ಸಿ-ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಅವರಿಗೆ ಮೀಸಲಾತಿ ಹೆಚ್ಚಲು ಮಾಡಲು ಸಾಧ್ಯವಾಗುತ್ತಿಲ್ಲ.ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುತ್ತಿಲ್ಲ. ಮರಾಠಾ ಸಮಾಜಕ್ಕೆ 2ಎ ಮೀಸಲಾತಿ ನೀಡುತ್ತೇವೆ ಎಂದು ಹೇಳಿದರು ಇದುವರೆಗೂ ಮೀಡುತ್ತಿಲ್ಲ. ಲಿಂಗಾಯತ ಸಮಾಜ, ಮರಾಠ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಕೇವಲ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡುತ್ತಿದ್ದಾರೆ. 600 ಭರವಸೆ ನೀಡಿದವರು ಇದುವರೆಗೂ ಯಾವ ಭರವಸೆಯನ್ನು ನೀಡುವಲ್ಲಿ ವಿಫಲವಾದ ಸರಕಾರವಾಗಿದೆ ಎಂದರು.
ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಶಾಸಕ ಆನಂದ ನ್ಯಾಮಗೌಡ ಅವರ ಕೈ ಕೈ ಜೋಡಿಸಿ ಪಾದಯಾತ್ರೆಯಲ್ಲಿ ಭವ್ಯಾವಾದ ಸ್ವಾಗತಸಿದ ಸುಮಂಗಲೆಯರು ಆರತಿ ಮಾಡಿ ಬರಮಾಡಿಕೊಂಡರು. ಶೂರ್ಪಾಲಿ ಗ್ರಾಮದ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಆಗಮಿಸಿ, ದೇವರಿಗೆ ಪೂಜೆಯನ್ನು ಸಲ್ಲಿಸಲಾಯಿತು.ನಂತರ ಕಾಂಗ್ರೇಸ್ ಪಕ್ಷದ ಅಭಿಮಾನಿಗಳಿಂದ ಭವ್ಯವಾದ ಪಾದಯಾತ್ರೆ ಮೆರವಣಿಗೆ ನಡೆಯಿತು. ಮೆರವಣಿಯ ಉದ್ದಕ್ಕೂ ವಿವಿಧ ವಾದ್ಯಮೇಳಗಳೊಂದಿಗೆ ಕೈಗೆ ಕೈ ಜೋಡಿಸುವ ಪಾದಯಾತ್ರೆಯಲ್ಲಿ ಹಲವಾರು ಕಾಂಗ್ರೆಸ್ ಮುಖಂಡರು, ಪಕ್ಷದ ಅಭಿಮಾನಿಗಳು ಭಾಗಿಯಾಗಿದ್ದರು.
ವರ್ಧಮಾನ ನ್ಯಾಮಗೌಡ. ಪ್ರಕಾಶ ಕಣಬೂರ, ಕುಮಾರ ನಾಂದ್ರೇಕರ ಎನ್.ಎಸ್.ದೇವ ರವರ, ಕಲ್ಲಪ್ಪ ಗಿರಡ್ಡಿ, ಸಿದ್ದು ಮೀಶಿ, ಶ್ರೀಶೈಲ ದಳವಾಯಿ, ಈಶ್ವರ ವಾಳೆನ್ನವರ, ಮಹೇಶ ಕೋಳಿ,ಅನ್ವರ ಮೋಮಿನ, ಭೀಮಶಿ ನಡುವಿನಮನಿ, ಬಸವರಾಜ ನ್ಯಾಮಗೌಡ ಅನೇಕರಿದ್ದರು.