ಸಿದ್ಧರಾಮಯ್ಯ ಸೋಲುವ ಭಯದಿಂದ ವಲಸೆ ಹೋಗುತ್ತಿದ್ದಾರೆ; ಈಶ್ವರಪ್ಪ
ಲೋಕದರ್ಶನ ವರದಿ,
ಜಮಖಂಡಿ30: ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ ಅಭ್ಯರ್ಥಿ ಆಯ್ಕೆ ಮಾಡುವವವರೇ ಕ್ಷೇತ್ರವನ್ನು ಹಂಚಿಕೊಂಡು ವಲಸೆ ಹೋಗುವ ಸಂಸ್ಕೃತಿ ಕೈ ಬಿಡಬೇಕು. ಒಂದೇ ಕ್ಷೇತ್ರದಲ್ಲಿ ಚುನಾವಣೆ ಎದುರಿಸಬೇಕು. ಜನರ ಮನ ಗೆಲ್ಲಲು ವಿಫಲವಾಗಿರುವ ಸಿದ್ಧರಾಮಯ್ಯ ಸೋಲುವ ಭಯದಿಂದ ವಲಸೆ ಹೋಗುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಬಿಜೆಪಿಯಲ್ಲಿ 75 ವಯಸ್ಸು, ಸಚಿವರು ಎನ್ನುವ ಭೇದಭಾವವಿಲ್ಲ. 224 ಕ್ಷೇತ್ರಗಳನ್ನು ಸಮೀಕ್ಷೆ ಮಾಡಿ ಯಾರು ಸಾಮಾನ್ಯ ಜನರ ಮಧ್ಯದಲ್ಲಿದ್ದಾರೆ. ರಾಷ್ಟ್ರ ನಿಷ್ಠೆ, ಸಂಘಟನೆ, ಅಭಿವೃದ್ಧಿಗೆ ಯಾರು ಹೆಚ್ಚು ಒತ್ತು ಕೊಟ್ಟಿದ್ದಾರೆ ಎನ್ನುವವರನ್ನು ಗುರುತಿಸಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧೆಸಲು ಅಪೇಕ್ಷೆ ಪಡುವುದು ತಪ್ಪಲ್ಲ. ಎಲ್ಲಾ ಪಕ್ಷಗಳಲ್ಲಿ ತಮ್ಮದೇ ಸಂಬಂಧಿಗಳಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡುವುದು ಸಾಮಾನ್ಯ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣಾ ಸಮಿತಿಗಳನ್ನು, ಪಕ್ಷದ ಅಧ್ಯಕ್ಷರನ್ನು ಬದಿಗಿಟ್ಟು ತಮ್ಮ ಇಷ್ಟದಂತೆ ಸ್ವಯಂ ಅಭ್ಯರ್ಥಿಗಳ ಘೋಷಣೆ ಮಾಡುವುದು ಅವರ ಪಕ್ಷದ ಅಶಿಸ್ತು ತೋರಿಸುತ್ತದೆ. ಬಿಜೆಪಿಯಲ್ಲಿ ಇಂಥದ್ದಕ್ಕೆಲ್ಲ ಅವಕಾಶವಿಲ್ಲ ಎಂದರು.
ದೇವೇಗೌಡ್ರು, ರೇವಣ್ಣ, ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ ಅವರೆ ಕ್ಷೇತ್ರವನ್ನು ಹಂಚಿಕೊಂಡು ಅಭ್ಯರ್ಥಿಗಳನ್ನು ತಾವೇ ಘೋಷಣೆ ಮಾಡಿಕೊಂಡಿರುವುದು ಸರಿಯಲ್ಲ, ಬಿಜೆಪಿಯಲ್ಲಿ 75 ವಯಸ್ಸು, ಸಚಿವರು ಎನ್ನುವ ಭೇದಭಾವವಿಲ್ಲ. 224 ಕ್ಷೇತ್ರಗಳನ್ನು ಸಮೀಕ್ಷೆ ಮಾಡಿ ಯಾರು ಸಾಮಾನ್ಯ ಜನರ ಮಧ್ಯದಲ್ಲಿದ್ದಾರೆ. ರಾಷ್ಟ್ರ ನಿಷ್ಠೆ, ಸಂಘಟನೆ, ಅಭಿವೃದ್ಧಿಗೆ ಯಾರು ಹೆಚ್ಚು ಒತ್ತು ಕೊಟ್ಟಿದ್ದಾರೆ ಎನ್ನುವವರನ್ನು ಗುರುತಿಸಿ ಬಿಜೆಪಿ ಪಕ್ಷದ ಅಭ್ಯಥರ್ಿಯನ್ನಾಗಿ ಘೋಷಿಸುತ್ತಾರೆ. ಕಾರ್ಯಕರ್ತರ ಸಂಘಟನೆ, ಅಭಿವೃದ್ಧಿ ಕಾರ್ಯ, ನಾಯಕತ್ವದ ಸಿದ್ಧಾಂತದ ಮೇಲೆ ನಾವು ಚುನಾವಣೆ ಎದುರಿಸುತ್ತೇವೆ ಎಂದರು.
ನಾಗಪ್ಪ ಸನದಿ, ಡಾ. ಜಿ.ಎನ್. ಸನದಿ, ಬಸಪ್ಪ ಕಾಗವಾಡ, ಯಂಕಪ್ಪ ಎಂಟೆತ್ತು, ಸಂಗಮೇಶ ದಳವಾಯಿ, ಹಣಮಂತ ಕುರಣಿ, ರಾಜು ಗೆಣ್ಣೂರ ಇದ್ದರು