ಮಯೂರ ಅವರ 42ನೆ ಹುಟ್ಟು ಹಬ್ಬದ ಪ್ರಯಕ್ತ ರಕ್ತದಾನ ಶಿಬಿರ

ಮಯೂರ ಅವರ 42ನೆ ಹುಟ್ಟು ಹಬ್ಬದ ಪ್ರಯಕ್ತ ರಕ್ತದಾನ ಶಿಬಿರ

 

ಸಿಂದಗಿ; ಸಂಘಟನೆಗಳು ಕಟ್ಟಕಡೆಯ ವ್ಯಕ್ತಿಯ ನೋವು ನಲಿವುಗಳನ್ನು ಅರಿತು ಕಾರ್ಯನಿರ್ವಹಿಸುತ್ತವೆ ಅಂತ ಸಂಘಟನೆಗಳು ಸಮಾಜಮುಖಿ ಕಾರ್ಯ ಮಾಡುತ್ತಿವೆ ಎನ್ನುವದಕ್ಕೆ ಇಂದು ನಡೆಸಿದ ರಕ್ತದಾನ ಶಿಬಿರವೇ  ಸಾಕ್ಷಿಯಾಗಿದೆ ಎಂದು ಮನಗೂಳಿ ಆಸ್ಪತ್ರೆಯ ಖ್ಯಾತ ವೈಧ್ಯ ಡಾ. ಶಾಂತವೀರ ಮನಗೂಳಿ ಅಭಿಮತ ವ್ಯಕ್ತ ಪಡಿಸಿದರು. 

ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಜಯಪುರ ಜಿಲ್ಲಾ ಸಂಘಟನಾ ಸಂಚಾಲಕ ವಾಯ್ .ಸಿ ಮಯೂರ ರವರ 42ನೆ ಹುಟ್ಟು ಹಬ್ಬದ ಪ್ರಯಕ್ತ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಸ್ವತಹ ರಕ್ತದಾನ ಮಾಡುವ ಮೂಲಕ ಚಲನೆ ನೀಡಿ ಮಾತನಾಡಿ, ಜಗತ್ತಿನಲ್ಲಿರುವ ಎಲ್ಲರಲ್ಲಿ ಹರಿಯುತ್ತಿರುವ ರಕ್ತ ಒಂದೇ ಅದನ್ನು ನಾವು ಬೇದ-ಭಾವ ಮಾಡಿ ಅದಕ್ಕೊಂದು ಜಾತಿಯ ಲೇಪನ ಮಾಡಿದ್ದೇವೆ ಇಂದಿನ ಯುವಕರು ಅಪಘಾತ ಮತ್ತು ಅಸಾಯಕರಾಗಿ ಬಂದ ಸಂದರ್ಭದಲ್ಲಿ ಹಿಂದೆ ಮುಂದೆ ನೋಡದೇ ರಕ್ತ ನೀಡಿದಲ್ಲಿ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಅಂದಾಗ ಇಂತಹ ಕಾರ್ಯಕ್ರಮಗಳೀಗೆ ಅರ್ಥ ಬರುತ್ತದೆ ಎಂದರು. ಶ್ರೀ ಅಂಬಿಗರ ಚೌಡಯ್ಯ ನೌಕರರ ಸಂಘದ ರಾಜ್ಯ ಉಪಾದ್ಯಕ್ಷ ರಾಜಕುಮಾರ ನರಗೋದಿ ಮಾತನಾಡಿ, ಎಲ್ಲ ದಾನಗಳಿಂತ ರಕ್ತಧಾನ ಶ್ರೇಷ್ಠದಾನ, ಜೀವಧಾನ. ಒಬ್ಬ ವ್ಯಕ್ತಿಯ ರಕ್ತದಿಂದ ಮೂರು ಜನರ ಜೀವವನ್ನು ಉಳಿಸಬಹುದು ಅಸಾಯಕ ಕಡಬಡವ ವ್ಯಕ್ತಿಯನ್ನು, ಅಪಘಾತವಾದ ಸಂದರ್ಭದಲ್ಲಿ, ರಕ್ತ ನೀಡಿದರೆ ಸಾವು ಬದುಕಿನ ನಡುವೆ ಹೋರಾಟನಡೆಸುತ್ತಿರುವ ವ್ಯಕ್ತಿಯನ್ನು ಬದುಕಿಸುವುದು  ಇಂತ ಸೇವಾಮನೋಭಾವದಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಶ್ಲ್ಯಾಘನೀಯ ಎಂದರು. 

ಕಾರ್ಯಕ್ರಮಕ್ಕೆ ಆಗಮಿಸಿದ ಸಂಘಪಾಲ ಬಂತೆಜೀಯವರು ಶ್ರೀ ಭಗವಾನ್ ಬುದ್ದರ ಫೋಟೊ ಪೂಜೆ ನೆರವೇರಿಸಿ ಬದ್ದರ ತತ್ವಸಿಂದಾತಗಳನ್ನು ಹೇಳಿದರು. 

ಸನ್ಮಾನಿತ ವಾಯ್. ಸಿ. ಮಯೂರ ಮಾತನಾಡಿ, ಕೆಲವರು ಸಂಘಟನೆಗಳು ಕಟ್ಟಿಕೊಂಡು ಅನ್ಯ ಮಾರ್ಗ ಹಿಡಿಯುತ್ತಿದ್ದಾರೆ ಎನ್ನುವ ಖ್ಯಾತಿಯನ್ನು ಅಳಿಸುವ ನಿಟ್ಟಿನಲ್ಲಿ ದಲಿತ ಸಂಘಟನೆಗಳು ಸಮಾಜಮುಖಿ, ಸಹಾಮುಭೂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅನೆಕ ಜನಪರ ಕಾರ್ಯಗಳಿಗೆ ಅಣಿಯಾಗಿವೇ ಎನ್ನುವ ಸಂದೇಶ ರವಾನೆಯಾಗಬೇಕಾಗಿದೆ ಅನ್ಯಾಯ ನಡೆದಲ್ಲಿ ಸಂಘಟನೆಗಳು ಮುಖ್ಯ ಪಾತ್ರ ವಹಿಸುತ್ತವೆ. ರಕ್ತಕ್ಕೆ ಜಾತಿ-ಬೇದವಿಲ್ಲ ಜಗತ್ತಿನಲ್ಲಿ ಹುಟ್ಟಿದ ಸರ್ವರಲ್ಲಿ ಒಂದೇ ರಕ್ತ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಹಿರಿಯ ದುರೀಣ ಸದಾಶಿವ ಹೊಸಮನಿ ವಹಿಸಿದರು 

ಕಾರ್ಯಕ್ರಮದಲ್ಲಿ ಸಿ.ಪಿ.ಐ ಎನ್.ಎಂ.ದಾಮಣ್ಣನವರ, ರಮೇಶ ಜೋಗುರ, ಅಪ್ಪು ಕಮತಗಿ, ಶ್ರೀಕಾಂತ ಸೋಮಜಾಳ, ಡಾ. ಮಾಗಿ ಡಾ. ಆಕಾಶ ಮಂಜುನಾಥ, ಡಿ.ಎಸ್.ಎಸ್. ಕಾರ್ಯಕರತರಾದ ಜೈ ಭೀಮ ತಳಕೇರಿ, ಶರಣು ಬರಗಲ್. ಸಿದ್ದು ಸಿಂಗೆ, ಸಂಜು ಮೇಲಿನಮನಿ, ಪ್ರಮೋದ ಬರಗಲ್, ಕಂಠೀರವ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸ್ವಯಂ ಪ್ರೇರಿತವಾಗಿ 55 ಜನರು ರಕ್ತಧಾನ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಯಶಶ್ವಿಗೊಳಿಸಿದರು.ಪ್ರಕಾಶ ಗುಡಿಮನಿ ಸ್ವಾಗತಿಸಿದರು, ಎಮ್.ಪಿ.ಸಾಗರ ನಿರೂಪಿಸಿದರು. ಶಿವಪುತ್ರ ಮೇಲಿನಮನಿ ವಂದಿಸಿದರು, 

 

ಸುದ್ದಿ ಓದಿ