ಬೈಲಹೊಂಗಲ

ನಿವೃತ್ತಿ ಯೋಧ ಶಿವುಕುಮಾರ ತೋಟಗಿಗೆ ಅದ್ದೂರಿ ಸ್ವಾಗತ

ನಿವೃತ್ತಿ ಯೋಧ ಶಿವುಕುಮಾರ ತೋಟಗಿಗೆ ಅದ್ದೂರಿ ಸ್ವಾಗತ

ಬೈಲಹೊಂಗಲ 04:  ಭಾರತೀಯ ಸೈನ್ಯದಲ್ಲಿ ಸತತ 17 ವರ್ಷಗಳಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಪಡೆದು ತಾಯಿ ನಾಡಿಗೆ ವಾಪ್ಪಸ್ಸಾದ ಯೋಧ ಶಿವುಕುಮಾರ (ಆನಂದ) ತೋಟಗಿ ಅವರನ್ನು ಮಾಜಿ ಸೈನಿಕರು, ಕುಟುಂಬಸ್ಥರು, ಗೆಳೆಯರು, ದೇಶಾಭಿಮಾನಿ ಯುವಕರು ಬುಧವಾರ ಅದ್ಧೂರಿ ಸ್ವಾಗತ ಕೋರಿದರು.

ಪಟ್ಟಣದ ಚನ್ನಮ್ಮನ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ದೇಶಾಭಿಮಾನಿಗಳು ಸೆಕೆಂಡ್ ಮದ್ರಾಸ್ ರೆಜಮೆಂಟ್ ವತಿಯಿಂದ ದೇಶದ ವಿವಿಧ ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿ ವಾಪ್ಪಸ್ಸಾದ ನಿವೃತ್ತ ಯೋಧ ಶಿವುಕುಮಾರ ಬರುತ್ತಿದ್ದಂತೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. 

ಯೋಧ ಶಿವುಕುಮಾರ ವೀರರಾಣಿ ಕಿತ್ತೂರು ಚನ್ನಮ್ಮನ ಆಶ್ವಾರೂಢ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು. ಚನ್ನಮ್ಮನ ವೃತ್ತದಿಂದ ತೆರೆದ ವಾಹನದಲ್ಲಿ ಯೋಧನನ್ನು ಎಪಿಎಂಸಿ, ಇಂಚಲ ಕ್ರಾಸ್ ಮಾರ್ಗವಾಗಿ ಮನೆಯವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಯುವಕರು, ಮಾಜಿ ಸೈನಿಕರು ಬೈಕ್ ರ‍್ಯಾಲಿ ನಡೆಸಿದರು. ರಸ್ತೆಯುದ್ದಕ್ಕೂ ಯೋಧನಿಗೆ, ಮಾಜಿ ಸೈನಿಕರಿಗೆ, ಭಾರತ ಮಾತೆಗೆ ಜೈ ಘೋಷ ಮೊಳಗಿಸಿದರು.

ಡಾ.ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ, ಸೋಮನಾಥ ಸೊಪ್ಪಿಮಠ, ಮಾಜಿ ಯೋಧರಾದ ಉಳವಪ್ಪ ನೇಗಿನಹಾಳ, ದಾನಪ್ಪ ದಿನ್ನಿಮನಿ, ಸಿದ್ಧಪ್ಪ ಲೋಕೂರ, ವೆಂಕಣ್ಣ ಶಿಂಧೆ, ದಾನಪ್ಪ ಬಾಗೇವಾಡಿ, ಶಿವಲಿಂಗಪ್ಪ ಮಾವಿನಕಟ್ಟಿ, ರುದ್ರಪ್ಪ ಬಾಗೇವಾಡಿ, ಶಿವಪ್ಪ ಸಂಗನಗೌಡರ, ಈರಪ್ಪ ಕಾಡೇಶನವರ, ಚಂದ್ರು ಮಾಳಿ, ಬಿ.ಎಸ್.ತೋಟಗಿ, ಗೆಳೆಯರಾದ ಮಂಜುನಾಥ ಜ್ಯೋತಿ, ಆನಂದ ಹಿರೇಮಠ, ಸಚಿನ ಬೊಂಗಾಳೆ, ರವಿ ವನ್ನೂರ, ಬಸವಾಜ ಕಟ್ಟಿಮನಿ, ಬಸವರಾಜ ದೊಡಮನಿ, ಸಂತೋಷ ಹುಣಶೀಕಟ್ಟಿ, ಸಂತೋಷ ದೇಶಪಾಂಡೆ, ಚಂದ್ರು ಉಂಡಿ, ಮಹಾಂತೇಶ ಬೋರಕನವರ, ಪ್ರಸಾದ ದೇಶಪಾಂಡೆ, ಪ್ರಭಾಕರ ಬಡಿಗೇರ, ರಾಮು ಚವ್ಹಾನ, ಕುಟುಂಬಸ್ಥರು ಇದ್ದರು. 

ಸುದ್ದಿ ಓದಿ