ಶಿಗ್ಗಾವ್

ಪತ್ರಕರ್ತರ ಮೇಲೆ ಸಾಮೂಹಿಕ ಹಲ್ಲೆ ಕ್ರಮಕ್ಕೆ ಆಗ್ರಹಿಸಿ ಮನವಿ

ಪತ್ರಕರ್ತರ ಮೇಲೆ ಸಾಮೂಹಿಕ ಹಲ್ಲೆ ಕ್ರಮಕ್ಕೆ ಆಗ್ರಹಿಸಿ ಮನವಿ

ಶಿಗ್ಗಾವಿ : ವರದಿ ಮಾಡಲು ಹೋದ ಸ್ಥಳೀಯ ಪತ್ರಕರ್ತರ ಮೇಲೆ ಸಾಮೂಹಿಕ ಹಲ್ಲೆ ಘಟನೆ ನಡೆದಿದ್ದು ಸೂಕ್ತ ಭದ್ರತೆಯ ಜೊತೆಗೆ ಹಲ್ಲೆ ಮಾಡಿದವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಸವಣೂರ ಉಪವಿಭಾಗಾಧಿಕಾರಿಗಳಿಗೆ, ತಹಶೀಲ್ದಾರರಿಗೆ ಮತ್ತು ಶಿಗ್ಗಾವಿ ಪೊಲೀಸ್ ಠಾಣೆಗೆ ಶಿಗ್ಗಾವಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ ಅರ್ಪಿಸಿ ಒತ್ತಾಯಿಸಲಾಗಿದೆ. 

ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಇದೇ ಜನೇವರಿ 13 ರಂದು ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಕುರಿತು ಕೂಡಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತ್ರತ್ವದಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಸ್ಥಳೀಯ ಪತ್ರಕರ್ತರು ವರದಿಗಾಗಿ ಭಾಗವಹಿಸಿದ್ದರು.

ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರು ಯುಟ್ಯೂಬ್ ಮಾಧ್ಯಮದವರಿಗೆ ಗೆಟ್ಔಟ್ ಎಂದು ಪದ ಬಳಕೆ ಮಾಡಿದಾಗ ಪಂಚಮಸಾಲಿ ಸಮಾಜದ ಕೆಲ ಪ್ರತಿಭಟನಾ ನಿರತರು ಅಲ್ಲಿಯೇ ವರದಿ ಮಾಡುತ್ತಿದ್ದ, ಕಾರ್ಯನಿರತ ಪತ್ರ್ರಕರ್ತರ ಸಂಘದ ಕೆಲ ಸದಸ್ಯರ ಮೇಲೆ ವಿನಾಕಾರಣ ಹಲ್ಲೆ ಮಾಡಿದ್ದು,ಪತ್ರಕರ್ತರಿಗೆ ತೀವ್ರ ನೊವನ್ನಂಟು ಮಾಡಿದೆ. ಈ ಘಟನೆಯಲ್ಲಿ ಸ್ಥಳಿಯ ಪತ್ರಕರ್ತರ ಬಳಸುತ್ತಿದ್ದ ಮೊಬೈಲ್ ಕಿತ್ತುಕೊಂಡು ಕ್ಯಾಮರಾ ಹಾನಿ ಮಾಡಿದ್ದು, ಅಲ್ಲದೇ ಅವರು ಬಳಸುತ್ತಿದ್ದ ದ್ವಿಚಕ್ರ ವಾಹನವನ್ನು ಕೂಡಾ ಜಖಂ ಗೊಳಿಸಿದ್ದಾರೆ. 

ಈ ಘಟನೆಯಿಂದ ಸ್ಥಳಿಯ ಪತ್ರಕರ್ತರು ಸಾರ್ವಜನಿಕ ವರದಿ ಮಾಡಲು ಭಯಪಡುವಂತ ಸ್ಥಿತಿ ನಿರ್ಮಾಣ ಮಾಡಿದೆ.ಸ್ಥಳೀಯ ಪತ್ರಕರ್ತರ ಮೇಲೆ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸ್ಥಳಿಯ ಪತ್ರಕರ್ತರಿಗೆ ಸೂಕ್ತ ನ್ಯಾಯವದಗಿಸುವುದರ ಜೊತೆಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಿಲಾಗಿದೆ.

ಶಿಗ್ಗಾವಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಪರಮೇಶ ಲಮಾಣಿ, ಗೌರವಾದ್ಯಕ್ಷ ಬಸವರಾಜ ಹೊನ್ನಣ್ಣವರ, ಜಿಲ್ಲಾ ಉಪಾದ್ಯಕ್ಷ ಬಿ ಎಸ್ ಹಿರೇಮಠ, ರಾಜ್ಯ ಕಾರ್ಯಕಾರಿಣಿ ಸದಸ್ಯ ಪರಶುರಾಮ್ ಸತ್ಯಪ್ಪನವರ, ಎಂ ವಿ ಗಡಾದ,  ಉಪಾದ್ಯಕ್ಷ ಬಸವರಾಜ ಹಡಪದ, ಕಾರ್ಯದರ್ಶಿಗಳಾದ ಗೌಡಪ್ಪ ಬನ್ನೆ,ವಿಶ್ವನಾಥ ಬಂಡಿವಡ್ಡರ, ಖಜಾಂಚಿ ಮಂಜುನಾಥ ಕಮ್ಮಾರ, ಸದಸ್ಯರಾದ ರವಿ ಉಡುಪಿ, ಸುದಾಕರ ದೈವಜ್ಞ, ಸುರೇಶ ಯಲಿಗಾರ, ಶಿವಕುಮಾರ ಕೊಟಗಿಮಠ ಸೇರಿದಂತೆ ಉಳಿದ ಸದಸ್ಯರು ಇದ್ದರು 

ಸುದ್ದಿ ಓದಿ