ಶಿಗ್ಗಾವ್

ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡುವಂತೆ ಸೂಚನೆ

ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡುವಂತೆ ಸೂಚನೆ

ಶಿಗ್ಗಾವಿ 30: ಸರ್ಕಾರ ನಿಯಮಿಸಿರುವ ಅಧಿಕಾರಿ ಸೂರ್ಯನಾಥ ಕಾಮತ್ ವರದಿ ಆಧಾರದ ಮೇಲೆ ಸಂವಿದಾನಬದ್ಧವಾಗಿ ಬೇಡ ಜಂಗಮರಿಗೆ ಸಿಗಬೇಕಾದ ಎಸ್‌ಸಿ ಪ್ರಮಾಣ ಪತ್ರವನ್ನು ನೀಡುವಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಹಿರಿಯ ಸಾಹಿತಿ ಎ.ಕೆ.ಆದವಾನಿಮಠ ರವರು ಸರ್ಕಾರವನ್ನು ಒತ್ತಾಯಿಸಿದರು. 

ಬಂಕಾಪೂರ ಅರಳೆಲೆಮಠದ ಆವರಣದಲ್ಲಿ ನಡೆದ ಬೇಡ ಜಂಗಮರ ಮಾಸಿಕ ಸಭೆಯನ್ನುದ್ದೇಸಿಸಿ ಮಾತನಾಡಿದ ಅವರು, ಜಂಗಮರು ಸರ್ವ ಸಮಾಜದವರ ಏಳಿಗೆಗಾಗಿ ಅನಾದಿಕಾಲದಿಂದಲೂ ಇಂದಿನವರೆಗೂ ಶುಭ, ಅಶುಭ ಕಾರ್ಯಗಳಲ್ಲಿ ತಮ್ಮನ್ನು ತಾವು ಸಮರ​‍್ಿಸಿಕೋಂಡು ಬಂದವರಾಗಿದ್ದಾರೆ. ಆದರೆ ಜಂಗಮರ ಕುಟುಂಬ ಈಗ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದೂಳಿದಿದ್ದು ಅವರಿಗೆ ಲಭಿಸಬೇಕಾದ ನ್ಯಾಯಯುತವಾದ ಹಕ್ಕನ್ನು ನೀಡಬೇಕು. ಇಲ್ಲದೇ ಹೋದರೆ ಹೋರಾಟದ ಹಾದಿ ಹಿಡಿಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಡಾ.ಆರ್‌.ಎಸ್‌.ಅರಳೆಲೆಮಠ ಮಾತನಾಡಿ, ಈ ಬೇಡಜಂಗಮರ ಸಭೆ ಬರಿ ಪ್ರಮಾಣ ಪತ್ರ ಪಡೆಯುವುದಕ್ಕೋಸ್ಕರ ಸಿಮಿತವಾಗಿರದೇ ಜಂಗಮ ಕುಟುಂಬಗಳ ಸಮಸ್ಯ, ಪರಿಹಾರ, ಮಕ್ಕಳ ಶೈಕ್ಷಣಿಕ ಚಿಂತನೆ ಸೇರಿದಂತೆ ಸಮೂದಾಯದ ಏಳ್ಗೆಗಾಗಿ ಈ ಸಂಘಟನಾತ್ಮಕ ಸಭೆ ನಡೆಸಲಾಗುತ್ತಿದೆ. ಜಂಗಮರು ಬ್ರಿಟಿಷರ ಕಾಲದಿಂದಲೂ ಬೇಡಿತಿನ್ನುವ ಕಾಯಕದಿಂದ ಬಂದವರಾಗಿದ್ದು, ನಿಜಾಮರ ಕಾಲದಲ್ಲಿಯೆ ಬೇಡಜಂಗಮರ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಹೀಗಿದ್ದರೂ ಜಾತಿ ಪ್ರಮಾಣ ಪತ್ರ ಪಡೆಯಲು ಬೇಡ ಜಂಗಮರು ಪರದಾಡುವಂತಾಗಿದೆ ಎಂದು ವಿಷಾದ ವ್ಯಕ್ತಪಡೆಸಿದರು. 

ಪ್ರೋ.ಎಲ್‌.ಎ.ಹಿರೇಮಠ ಮಾತನಾಡಿ, ಸೂರ್ಯನಾಥ ಕಾಮತ್ ರವರ ವರದಿಯಲ್ಲಿ ಬೇಡಜಂಗಮರ ಆಚಾರ, ವಿಚಾರ, ಕಾಯಕದ ಬಗ್ಗೆ ಹೇಳಲಾಗಿದೆ. ಸರ್ಕಾರ ಹೋರಡಿಸಿರುವ ಮಿಸಲಾತಿ ಪಟ್ಟಿಯಲ್ಲಿಯೂ ಕೂಡಾ ಬೇಡಜಂಗಮರ ಜಾತಿಯನ್ನು ಸೇರಿಸಲಾಗಿದೆ. ಸರ್ಕಾರದ ಆದೇಶವೂ ಕೂಡಾ ಇದೆ ಇಷ್ಟೇಲ್ಲಾ ಇದ್ದರೂ ಬೇಡಜಂಗಮರಿಗೆ ಅಧಿಕಾರಿಗಳು ಎಸ್‌.ಸಿ.ಪ್ರಮಾಣ ಪತ್ರ ನೀಡಲು ಹಿಂದೇಟುಹಾಕುತ್ತಿರುವುದು ನ್ಯಾಯಾಲಯ ಹಾಗು ಸಂವಿದಾನ ಶಿಲ್ಫಿ ಡಾ.ಬಿ.ಆರ್‌.ಅಂಬೇಡ್ಕರ ರವರಿಗೆ ಮಾಡುವ ಅವಮಾನವಾಗಿದೆ ಎಂದು ವಿಷಾದವ್ಯಕ್ತಪಡೆಸಿದರು. 

ಇತ್ತಿಚೆಗೆ ವಿಧಾನಸಭೆಯಲ್ಲಿ ಎಂ.ಪಿ.ರೇಣುಕಾಚಾರ್ಯರು ತಮ್ಮ ಪುತ್ರಿ ಎಸ್‌.ಸಿ.ಪ್ರಮಾಣ ಪತ್ರ ಪಡೆದಿರುವುದನ್ನು ವಾಪಸ್‌ಮಾಡುವುದಾಗಿ ಹೇಳಿಕೆ ನೀಡಿರುವುದನ್ನು ಹಾಗು ಪಿ.ರಾಜೀವ್ ರವರ ಹೇಳಿಕೆಯನ್ನು ಸಭೆಯಲ್ಲಿ ಬೇಡಜಂಗಮ ಸಮಾಜ ಒಕ್ಕೋರಲಿನಿಂದ ಖಂಡಿಸಿತು. ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಜಿ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ಬೇಡಜಂಗಮ ಸಮಾಜದ ತಾಲೂಕಾ ಅಧ್ಯಕ್ಷ ಎಫ.ಎಸ್‌.ಹಿರೇಮಠ, ಸೋಮಶೇಖರ ಗೌರಿಮಠ, ಚಪ್ಪನಮಠ, ಎಸ್‌.ಬಿ.ಆದವಾನಿಮಠ, ಉಳವಯ್ಯ ಹಿರೇಮಠ, ಚನವೀರಯ್ಯ ಹಿರೇಮಠ, ಗದಿಗಯ್ಯ ಹುಣಸಿಕಟ್ಟಿಮಠ, ಬಾಪುಗೌಡ್ರ ಪಾಟೀಲ, ಶೇಖಯ್ಯ ಕಟಗಿಮಠ, ವೀರಯ್ಯ ಹಿರೇಮಠ, ಗದಿಗಯ್ಯ ಮಹಾಂತಿನಮಠ, ಚಂದ್ರಶೇಖರ ಛಬ್ಬಿಮಠ, ಮಣಿಕಂಠ ಕಟಗಿಮಠ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ