ಶಿಗ್ಗಾವ್

ಬಜೆಟ್ ಜನ ಸಾಮಾನ್ಯರ ಆಶಾಕಿರಣ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ : ಡಾ.ವೀರಣ್ಣಾ

ಬಜೆಟ್ ಜನ ಸಾಮಾನ್ಯರ ಆಶಾಕಿರಣ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ : ಡಾ.ವೀರಣ್ಣಾ

ಲೋಕದರ್ಶನ ವರದಿ

ಶಿಗ್ಗಾವಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ಮುಂಗಡ ಪತ್ರವು ಜನ ಸಾಮಾನ್ಯರ ಆಶಾಕಿರಣವಾಗಿದ್ದು ಅವುಗಳನ್ನು ಕಾರ್ಯರೂಪಕ್ಕೆ ತರುವುದು ಕಷ್ಟಕರ ಅಲ್ಲದೇ ಅವುಗಳು ಪ್ರಚಾರಕ್ಕೆ ಮಾತ್ರ ಸೀಮಿತವಾಗಿವೆ ಎಂದು ಜನಪ್ರೀಯ ವೈದ್ಯ ಹಾಗೂ ಪರಿಶಿಷ್ಟ ಪಂಗಡದ ಮುಖಂಡ ಡಾ. ಬಿ.ಹೆಚ್.ವೀರಣ್ಣಾ ಹೇಳಿದರು.

ಪಟ್ಟಣದ ವರದಿಗಾರರೊಂದಿಗೆ ಮಾತನಾಡಿದ ಅವರು ಉದಾಹರಣೆಗೆ  ರೈತರಿಗೆ ಇಲ್ಲಿಯವರೆಗೂ 3-5 ಲಕ್ಷದವರೆಗೂ ಶೂನ್ಯ ಬಡ್ಡಿದರದಲ್ಲಿ ಸಾಲ ಅಂತ ಘೋಷಣೆ ಮಾಡಿದ್ದಾರೆ ನಾನು ಸಹಿತ ರೈತನ ಮಗ ಇದರ ಸೌಲಭ್ಯ ಯಾರು ಪಡೆದಿರುತ್ತಾರೆ ಇದರ ಬಗ್ಗೆ ಸಮೀಕ್ಷೆ ಆಗಬೇಕು ಮತ್ತು ಕಾರ್ಯರೂಪಕ್ಕೆ ಬರಬೇಕು ಅಂದಾಗ ಮಾತ್ರ  ಸರಕಾರದ ಸ್ವಾದೀನದಲ್ಲಿರುವ ಬ್ಯಾಂಕಗಳಲ್ಲಿ ಪಡೆದಿರುವ ಬಗ್ಗೆ ಮಾಹಿತಿಯು ಲಭ್ಯವಾಗುತ್ತದೆ ಇಲ್ಲವಾದಲ್ಲಿ ಇಗಾಗಲೇ ರೈತರು ಮಾಡಿದ ಸಾಲ ಹೆಚ್ಚಾಗಿ ರೈತರು ಸಾಲಧ ಬಾಧೆಯಿಂದ ಹೊರಬರದೇ ಆತ್ಮಹತ್ಯೆಗೆ ಅಥವಾ ವಿಷಶೇವಿಸಿ ಮರಣ ಹೊಂದುತ್ತಾ ಸರಕಾರಕ್ಕೆ ಹಿಡಿಶಾಪ ಹಾಕುತ್ತಾರೆ ರೈತ ಕುಟುಂಬ ವರ್ಗ.

ಮುಂಗಡ ಪತ್ರದಲ್ಲಿ ರೈತ ಬೆಳೆದ ಯಾವ ಬೆಳೆಗೆ ಬೆಂಬಲ ಬೆಲೆ ಘೋಷಣೆ ಆಗಿದೆ ಯಾವುದು ಇಲ್ಲ ಹಾಗಾದರೆ ಇದು ಹೇಗೆ ರೈತ ಪರ ಬಜೆಟ್ ಆಗುತ್ತದೆ ಅಲ್ಲದೇ ತಾಲೂಕಿನಲ್ಲಿ ಕಬ್ಬು ಬೆಳೆಗಾರರ ಸಂಕಷ್ಟವನ್ನು ಯಾರು ಅರಿಯರು ಏಕೆಂದರೆ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಬೆಳೆದಿದ್ದು ಅದರ ನಿರ್ವಹಣೆ ಮಾಡುವುದು ರೈತರಿಗೆ ತಲೆ ನೋವಾಗಿದೆ ಏಕೆಂದರೆ ಕಬ್ಬು ಬೆಳೆಗಾರರಿಗೆ ಪ್ರತಿಯೊಂದಕ್ಕು ಹಣ ಇದ್ದರೆ ಮಾತ್ರ ನಿರ್ವಹಣೆ ಇಲ್ಲದಿದ್ದರೆ ನಿರ್ವಹಣೆ ಮಾಡುವುದು ಕಷ್ಟದಾಯಕವಾಗಿದೆ ಆದರೆ ಅದಕ್ಕೆ ಸಕ್ಕರೆ ಕಾರ್ಖಾನೆಯ ಮಾಲಕರು ಸ್ಪಂದಿಸುತ್ತಾರೆಯೇ ಇಲ್ಲ ಹಾಗಾದರೆ ಈ ಬೆಳೆಯನ್ನು ಏಕೆ ಬೆಳೆಯಬೇಕು ಎನ್ನುತ್ತಾರೆ ತಾಲೂಕಿನ ರೈತ ಮುಖಂಡರು.

ಒಟ್ಟಿನಲ್ಲಿ ಬರುವ ದಿನಗಳು ಸಂಕಷ್ಟದಾಯಕವಾಗುತ್ತವೆ ಏಕೆಂದರೆ ರೈತ ದೇಶದ ಬೆನ್ನಲುಬು ಅವನಿಗೆ ಸ್ಪಂದಿಸಿದರೇ ಮಾತ್ರ ನಾವು ನೀವು ಇಲ್ಲವಾದರೆ ಯಾರು ಇಲ್ಲ ಆದ್ದರಿಂದ ಸರಕಾರದಿಂದ ರೈತನಿಗೆ ಸ್ಪಂದಿಸುವ ಕಾರ್ಯವಾಗಬೇಕು ಎಂದು ಮಾಮರ್ಿಕವಾಗಿ ಹೇಳಿದರು 

ಸುದ್ದಿ ಓದಿ