ಸಮಾಜ ಸೇವಕ ವಿಶ್ವನಾಥ್ ಬಿರಾದಾರಗೆ ಸನ್ಮಾನ
ತಾಳಿಕೋಟಿ: ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ ವಿಜಯಪುರ ಇದರ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡಕ್ಕೆ ಧನ ಸಹಾಯ ನೀಡಿದ ಸಮಾಜಸೇವಕ ಅಭಿಯಂತರ ವಿಶ್ವನಾಥ ಬಿರಾದಾರ ಹಾಗೂ ಅವರ ಧರ್ಮಪತ್ನಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇತ್ತೀಚಿಗೆ ವಿಜಯಪುರದ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ ವತಿಯಿಂದ ಆಯೋಜಿಸಿದ ಸಮಾರಂಭದಲ್ಲಿ ಅವರಿಗೆ ಈ ಸನ್ಮಾನವನ್ನು ನೀಡಲಾಯಿತು. ಸಮಾಜ ಸೇವಕ ವಿಶ್ವನಾಥ ಬಿರಾದಾರ ಅವರು ತಾಳಿಕೋಟಿ ಸಮೀಪದ ಹಂದ್ರಾಳ ಎಂಬ ಸಣ್ಣ ಗ್ರಾಮದವರಾಗಿದ್ದು ಪ್ರಸಕ್ತ ಕೃಷ್ಣ ಭಾಗ್ಯ ಜಲ ನಿಗಮ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ತಮ್ಮ ಹುಟ್ಟೂರಿನ ಶಾಲಾ ಕಟ್ಟಡಕ್ಕೆ ಆರ್ಥಿಕ ಸಹಾಯ ನೀಡಿದ ಅವರು ಜಾತ್ರಾ ಮಹೋತ್ಸವ ಗಳಿಗೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳಿಗೆ ಉದಾರವಾಗಿ ಆರ್ಥಿಕ ಸಹಾಯ ಮಾಡುತ್ತಾಬಂದಿದ್ದಾರೆ ಅವರು ಕೊಡುಗೈ ದಾನಿಗಳೆಂದೇ ಹೆಸರುವಾಸಿಯಾಗಿದ್ದಾರೆ ತನ್ನ ಈ ಸಮಾಜ ಸೇವಾ ಕಾರ್ಯಗಳಿಂದ ಅವರೆಂದೂ ಪ್ರಚಾರವನ್ನು ಬಯಸಿದವರಲ್ಲ ಈ ಕಾರಣಗಳಿ ಗಾಗಿಯೇ ಸಂಸ್ಥೆ ಅವರನ್ನು ಗುರುತಿಸಿ ಸನ್ಮಾನ ಮಾಡಿ ಗೌರವಿಸಿದೆ. ಸನ್ಮಾನ ಸಮಾರಂಭದಲ್ಲಿ ಪೂಜ್ಯಶ್ರೀಗಳು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ. ಮುದ್ದೇಬಿಹಾಳ ಶಾಸಕ ಸಿ .ಎಸ್. ನಾಡಗೌಡ ಅಪ್ಪಾಜಿ ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್ .ಪಾಟೀಲ ಯಾಳಗಿ. ಭೀಮನಗೌಡ ಲಿಂಗದಳ್ಳಿ ಚಬನೂರ. ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳು ರೆಡ್ಡಿ ಸಮಾಜದ ಗಣ್ಯರು ಮತ್ತಿತರರು ಉಪಸ್ಥಿತರಿದ್ದರು