ತಾಲೂಕ ಪಂಚಾಯತ ವತಿಯಿಂದ ಗಂಗವ್ವ ನೀಲಪ್ಪ ಹರಿಜನಗೆ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ 08: ತಾಲೂಕಿನ ಶಿಸುವಿನಾಳ ಗ್ರಾಮದ ಅಂದ ವಿಕಲಚೇತನ ಗಂಗವ್ವ ನೀಲಪ್ಪ ಹರಿಜನ ಭಾರತ ದೇಶದ ಅಂದ ವಿಕಲಚೇತನರ ಕ್ರಿಕೇಟ ತಂಡಕ್ಕೆ ಆಯ್ಕೆಯಾಗಿ ಇಂಗ್ಲೇಂಡಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದ ಜಯಗಳಿಸಿ ಚಿನ್ನದ ಪದಕ ಪಡೆದುಕೊಂಡ ನಿಮಿತ್ಯ ಅವರಿಗೆ ತಾಲೂಕ ಪಂಚಾಯತ ವತಿಯಿಂದ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪಾಲಯ್ಯನಕೋಟೆ ವಿಶ್ವನಾಥ ನೇತೃತ್ವದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು.
ಸಹಾಯಕ ನಿರ್ದೇಶಕ ಪಂಚಾಯತ ರಾಜ್ಯ ಪ್ರಕಾಶ ಔಂಧಕರ, ಸಹಾಯಕ ನಿರ್ದೇಶಕ ಎಂ.ಜಿ.ಎನ್.ಆರ್.ಇ.ಜಿ.ಎ ಭ್ರೂಪತಿ ಭೂಸರೆಡ್ಡಿ , ತಾಲೂಕ ಯೋಜನಾಧಿಕಾರಿ ಶಿವಾನಂದ ಸಣ್ಣಕ್ಕಿ, ಎಂ.ಆರ್.ಡಬ್ಲೂ ಸಿದ್ದಪ್ಪ ಮಸಳಿ, ವಿ.ಆರ್.ಡಬ್ಲೂ ಕರೆಪ್ಪ ಮಾದರ, ಶೇಖರ ಲಮಾಣಿ ಪರಸುರಾಮ ದೊಡ್ಡಮನಿ ಸೇರಿದಂತೆ ತಾಲೂಕಿನ ವಿ.ಆರ್.ಡಬ್ಲೂ ಉಪಸ್ಥಿತರಿದ್ದರು