ಬಳ್ಳಾರಿ

ಸಚಿವರು ಮತ್ತು ಶಾಸಕರಿಂದ ಗೌರವ ಸನ್ಮಾನ

ಸಚಿವರು ಮತ್ತು ಶಾಸಕರಿಂದ ಗೌರವ ಸನ್ಮಾನ

ಲೋಕದರ್ಶನ ವರದಿ

ಬಳ್ಳಾರಿ 21: ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್ ಅವರನ್ನು. ನಿನ್ನೆ ಸಂಜೆ ನಗರದ ಮೇದಾರ ಓಣಿ ಗಣೇಶನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕ್ರೀಡೆ, ಯುವಜನಸೇವೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ನಗರ ಶಾಸಕ ನಾರಾಭರತ್ರೆಡ್ಡಿ ಅವರು ಟಿ.ಹೆಚ್.ಎಂ. ಬಸವರಾಜ್ ಅವರ ಕಲೆ, ಸಂಶೋಧನೆ, ಇತಿಹಾಸ, ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿನ ಸೇವೆಗಾಗಿ ಸನ್ಮಾನಿಸಿ ಗೌರವಿಸಿದರು. 

 ಕಾಂಗ್ರೆಸ್ ಮುಖಂಡರಾದ ಮುಂಡ್ರಿಗಿ ನಾಗರಾಜ್, ಸಚಿವರ ಆಪ್ತ ಸಹಾಯಕರಾದ ವಿಜಯ್ ಕುಮಾರ್, ಶಾಸಕರ ಆಪ್ತ ಸಹಾಯಕರಾದ ಲಕ್ಷ್ಮೀನಾರಾಯಣ ಶಾಸ್ತ್ರಿ, ಮೇದಾರ ಸಮಾಜದ ಮುಖಂಡರಾದ ಮಲ್ಲೇಶಿ ಮುಂತಾದವರು ಉಪಸ್ಥಿತರಿದ್ದರು 

ಸುದ್ದಿ ಓದಿ