ಇಂದಿನಿಂದ ಕೈಗೆ ಕೈ ಜೋಡಿಸಿ ಪಾದಯಾತ್ರೆ
ಲೋಕದರ್ಶನ ವರದಿ,
ಜಮಖಂಡಿ29: ಜಮಖಂಡಿ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಪ್ರತಿ ಮನೆ ಮನಕ್ಕೆ ತಿಳಿಸುವ ನಿಟ್ಟಿನಲ್ಲಿ ಜ.30 ರಿಂದ ಫೆ.28 ರವರೆಗೆ ಕ್ಷೇತ್ರದಾದ್ಯಂತ ಪ್ರತಿ ಗ್ರಾಮ ಹಾಗೂ ನಗರ ಪ್ರದೇಶದಲ್ಲಿ ಕೈಗೆ ಕೈ ಜೋಡಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.30ರಂದು ಬೆಳಿಗ್ಗೆ 8ಕ್ಕೆ ಶೂಪರ್ಾಲಿ ನರಸಿಂಹ ದೇವಸ್ಥಾನದಲ್ಲಿ ಪೂಜೆಯನ್ನು ಸಲಿಸಿ ನಂತರ ತುಬಚಿಯ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಪ್ರಾರಂಭಿಸಲಾಗುವುದು. ಪ್ರತಿ ದಿನ 20ಕಿ.ಮೀ ಪಾದಯಾತ್ರೆ ಮಾಡಿ ಪ್ರತಿ ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆಸಿ ಕ್ಷೇತ್ರದ ಅಭಿವೃದ್ಧಿ, ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಜಮಖಂಡಿ ಕ್ಷೇತ್ರದ ನದಿ ತೀರದ ಗ್ರಾಮಗಳಲ್ಲಿ ಪ್ರಾರಂಭಗೊಂಡ ಪಾದಯಾತ್ರೆಯು ಎಲ್ಲ ಗ್ರಾಮಗಳನ್ನು ಮುಗಿಸಿ. ತದನಂತರದಲ್ಲಿ ನಗರದ ಪ್ರತಿ ವಾರ್ಡಗಳಲ್ಲಿ ಸಹ ಪಾದಾಯಾತ್ರೆಯನ್ನು ಮಾಡಲಾಗುತ್ತದೆ. 2023ರ ಚುನಾವಣೆಯಲ್ಲಿ 200 ಯುನಿಟ್ ವಿದ್ಯುತ್ ಉಚಿತ, ಪ್ರತಿ ಕುಟುಂಬದ ಮನೆಯ ಯಜಮಾನಿಗೆ ಮಾಸಿಕ ರೂ, 2ಸಾವಿರ, ಪ್ರತಿ ಕುಟುಂಬಕ್ಕೆ 10 ಕೆಜಿ ಉಚಿತ ಅಕ್ಕಿ, ರೈತರಿಗೆ ಶೇ 3ರ ಬಡ್ಡಿದರದಲ್ಲಿ 20 ಲಕ್ಷ ರೂ, ಹೆಚ್ಚುವರಿ ಸಾಲ, ಅಪೂರ್ಣಗೊಂಡ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೆವೆ ಎಂದರು.
ಪ್ರತಿ ಜಿ.ಪಂ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಬಹಿರಂಗ ಸಭೆ ನಡೆಸಲಾಗುವುದು. ಪಾದಯಾತ್ರೆಯ ನಂತರ ರಾಜ್ಯ ನಾಯಕರನ್ನು ಆಹ್ವಾನಿಸಿ ನಗರದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಸೋಲಿನ ಭಯ : ಮಾಜಿ ಶಾಸಕ ಶ್ರೀಕಾಂತ ಕುಲಕಣರ್ಿ ಅವರು ಪಾದಯಾತ್ರೆಯನ್ನು ಮಾಡುತ್ತೇವೆ ಎಂದು ತಿಳಿದು. ಇವಾಗ ಅವರಿಗೆ ನಡುಕು ಶೂರುವಾಗಿದೆ. ಸೋಲಿನ ಭಯದಲ್ಲಿ ಎನೆನ್ನೋ ಮಾತನಾಡುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುವುದು ಪಾದಯಾತ್ರೆಯಲ್ಲಿ ಕ್ಷೇತ್ರದ ಜನತೆಗೆ ತಿಳಿಸುತ್ತೇನೆ ಎಂದು ಶಾಸಕ ಆನಂದ ನ್ಯಾಮಗೌಡ ವ್ಯಂಗವಾಡಿದರು.
ವಕೀಲ ಎನ್.ಎಸ್. ದೇವರವರ ಮಾತನಾಡಿದರು. ಮುಖಂಡ ಅರುಣಕುಮಾರ ಶಹಾ, ನಜೀರ ಕಂಗನೊಳ್ಳಿ, ಬಸವರಾಜ ನ್ಯಾಮಗೌಡ, ವರ್ಧಮಾನ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ, ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ಸುನೀಲ ಶಿಂಧೆ, ಸಿದ್ದು ಮೀಸಿ, ಈಶ್ವರ ವಾಳೆನ್ನವರ ಸೇರಿದಂತೆ ಅನೇಕರು,