ಶಿಗ್ಗಾವ್

ನಲವತ್ತು ಎಕರೆಯಷ್ಟು ಪ್ರದೇಶಕ್ಕೆ ಬೆಂಕಿ: ಅಪಾರ ಹಾನಿ

ನಲವತ್ತು ಎಕರೆಯಷ್ಟು ಪ್ರದೇಶಕ್ಕೆ ಬೆಂಕಿ: ಅಪಾರ ಹಾನಿ

ಲೋಕದರ್ಶನ ವರದಿ

ಶಿಗ್ಗಾವಿ : ತಾಲೂಕಿನ ತಡಸ್ ಪೊಲೀಸ್ ಠಾಣಾ ವ್ಯಾಪ್ತಿಯ ಶ್ಯಾಡಂಬಿ ಗ್ರಾಮದ ಸಿದ್ದಲಿಂಗೇಶ್ವರ ಎಂ. ಪಾಟೀಲ ಎಂಬುವರ ಹೊಲದಲ್ಲಿ ಬೆಂಕಿ ಕಾಣಿಸಿಕೊಂಡು ಅಂದಾಜು 10 ಎಕರೆ ವ್ಯಾಪ್ತಿಯ ಮಾವಿನ ತೋಟದಲ್ಲಿನ 200 ಕಿಂತ ಹೆಚ್ಚಿನ ಮಾವಿನಗಿಡಗಳು, 3 ಎಕರೆ ಕಬ್ಬಿನ ಹೊಲ, ಅಡಿಕೆ ತೋಟದಲ್ಲಿ 200 ಕಿಂತ ಹೆಚ್ಚಿನ ಅಡಕೆ ಗಿಡಗಳು, ಸಾಗ್ವಾನಿ ಪ್ಲಾಂಟಿಷನ್ದಲ್ಲಿ 2000 ದಷ್ಟು ತೇಗದ ಗಿಡಗಳು, 50 ತೆಂಗಿನ ಗಿಡಗಳು, 3 ಎಕರೆ ವ್ಯಾಪ್ತಿಯ ಗೋಡಂಬೆ ತೋಟಾ ಬೆಂಕಿಯ ಕೆನ್ನಾಲಿಗೆಗೆ ಬಲಿಯಾದ ಘಟನೆ ಜರುಗಿದೆ. 

ಅವರ ಮಾಲಿಕತ್ವದ ಸುಮಾರು ನಲವತ್ತು ಎಕರೆಯಷ್ಟು ಪ್ರದೇಶಕ್ಕೆ ವ್ಯಾಪಿಸಿದ್ದ ಬೆಂಕಿಯನ್ನು ಗ್ರಾಮಸ್ಥರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಹತೋಟಿಗೆ ತಂದಿದ್ದರು, ಹೊಲದ ಮಾಲಿಕರ ಸುಮಾರು ವರ್ಷಗಳ ಶ್ರಮ ಹೋಮ ಮಾಡಿದಂತಾಗಿದ್ದು ಅಪಾರ ಪ್ರಮಾಣದ ನಷ್ಟ ಆಗಿದ್ದು ಭಾರಿ ಪ್ರಮಾಣದ ಬೆಳೆ ಬೆಂಕಿಯಲ್ಲಿ ಸುಟ್ಟಿದೆ. 

ತಡಸ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸೂಕ್ತ ಕಾರಣಗಳು ತನಿಖೆಯಿಂದ ತಿಳಿದು ಬರಬೇಕಾಗಿದೆ 

ಸುದ್ದಿ ಓದಿ