ಸಿರುಗುಪ್ಪ ಜಲ್ ಜೀವನ್ ಮಿಷನ್ ವಸ್ತು ಪ್ರದರ್ಶನಕ್ಕೆ ಅಧಿಕಾರಿ ಮಡಗಿನ ಬಸಪ್ಪ ಚಾಲನೆ
ಸಿರುಗುಪ್ಪ27: ಕುಡಿಯುವ ನೀರಿನ ಅಶುದ್ಧತೆ ಇಂದಲೇ ಹಲವಾರು ಕಾಯಿಲೆ ರೋಗಗಳು ಹರಡುತ್ತವೆ ಆರೋಗ್ಯ ಕೆಡುವದು ಪ್ರತಿಯೊಬ್ಬರು ಶುದ್ಧ ಕುಡಿಯುವ ನೀರನ್ನು ಉಪಯೋಗಿಸಬೇಕು ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಅಭಿಪ್ರಾಯ ಪಟ್ಟರು ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಬಳ್ಳಾರಿ ತಾಲೂಕು ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ತಾಲೂಕ್ ಪಂಚಾಯತ್ ಸಿರುಗುಪ್ಪ ಸುರಭಿ ಸಮಗ್ರ ಮಾನವ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಬಳ್ಳಾರಿ ಇವರ ಸಹಭಾಗಿತ್ವದಲ್ಲಿ ನಗರದ ತಾಲೂಕು ಪಂಚಾಯತ್ ಕಚೇರಿ ಮೈದಾನದಲ್ಲಿ ಆಯೋಜಿಸಿದ ಜಲ್ ಜೀವನ್ ಮಿಷನ್ ವಸ್ತು ಪ್ರದರ್ಶನವನ್ನು ಅವರು ಚಾಲನೆ ನೀಡಿ ಮಾತನಾಡುತ್ತಿದ್ದರು. ಜಲ್ ಜೀವನ್ ಮಿಷನ್ ಅನುಷ್ಠಾನ ಮಾಹಿತಿ ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕುರಿತು ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು ರಾಷ್ಟ್ರೀಯ ಜಲಜೀವನ್ ಮಿಷನ್ ಸಲಹೆಗಾರ ಸಂಪನ್ಮೂಲ ವ್ಯಕ್ತಿ ಮೈಸೂರಿನ ಅಚ್ಚುತ್ ರಾವ್ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ತಾಲೂಕು ಪಂಚಾಯತ್ ಗ್ರಾಮ ಪಂಚಾಯತ್ ಜನಪ್ರತಿ ನಿಧಿಗಳಿಗೆ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದ್ದು ಕಲುಷಿತ ನೀರನ್ನು ಶುದ್ಧೀಕರಣ ಗೊಳಿಸುವಿಕೆ ಮತ್ತು ಮರುಬಳಕೆ ಮಾಡಬಹುದಾದ ವಿಧಗಳ ಬಗ್ಗೆ ತಿಳಿಸಿ ಮನವರಿಕೆ ಮಾಡಿದರು. ಸುರಭಿ ಸಂಸ್ಥೆಯ ನಿರ್ದೇಶಕ ಶ್ರೀಧರ್ ತಂಡದ ನಾಯಕ ಕೊಟ್ರೇಶ್ ಸಮುದಾಯದ ಸಂಘಟನಾ ಅಧಿಕಾರಿಗಳಾದ ಬಸವರಾಜ,ಮಂಜುಳಾ,ಜಿ ಮಂಜುನಾಥ , ಟಿ.ತಿಮ್ಮಪ್ಪ ವಸ್ತು ಪ್ರದರ್ಶನ ಬಗ್ಗೆ ವಿವರಿಸಿ ಮಾಹಿತಿ ನೀಡಿದರು.ಜಿಲ್ಲಾ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ,ಸಾರ್ವಜನಿಕರು, ಶಾಲಾ ಮಕ್ಕಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದರು.