ವಸ್ತುಪ್ರದರ್ಶನ
ಗದಗ 11 : ಗದಗ ನಗರದ ಕಳಸಾಪೂರ ರಿಂಗ್ ರೋಡನಲ್ಲಿ ಇರುವ ಸರ್ವೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 2022-23ನೇ ಸಾಲಿನ ವಸ್ತುಪ್ರದರ್ಶನ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಸರ್ವೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಧ್ಯಕ್ಷರಾದ ಕುಬೇರ್ಪ ಪವಾರ ರವರು ಉದ್ಘಾಟಿಸಿದರು. ಜಿ.ವಿ. ಬೇವಿನಕಟ್ಟಿ ಕ್ಷೇತ್ರ ಸಮನ್ವಯ ಅಧಿಕಾರಿಗಳು ಗ್ರಾಮೀಣ ವಲಯ ಗದಗ, ಡಾ. ಭೀಮಸಿಂಗ್ ರಾಠೋಡ ಅಧ್ಯಕ್ಷರು ಗದಗ ಜಿಲ್ಲಾ ಬಂಜಾರ ಅಭಿವೃದ್ದಿ ವೇದಿಕೆ ಗದಗ, ದಾಮಲಪ್ಪ ಎಲ್. ನಾಯಕ, ರಮೇಶ ಚವ್ಹಾಣ, ಭೋಜಪ್ಪ ಬಾಣಾವತ, ಬಿ.ಎಸ್ ರಾಠೋಡ, ಎಮ್.ಆರ್. ಲಮಾಣಿ ಮುಂತಾದವರು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಯನಿಯವರಾದ ಪ್ರೇಮಾ ರಾಠೋಡ ಸ್ವಾಗತಿಸಿದರು. ರೇಣುಕಾ ತಾಳಿಕೋಟಿಯವರು ನಿರೂಪಿಸಿದರು. ಸುಷ್ಮಾ ಹಿರೇಮಠ ವಂದಿಸಿದರು.