ಬೆಳೆ ವಿಮೆ ಪರಿಹಾರ ವಿತರಣೆಗೆ ಚಾಲನೆ
ಲೋಕದರ್ಶನ ವರದಿ
ಬ್ಯಾಡಗಿ06: ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪುಟ್ಟಣ್ಯಯ್ಯ ಬಣ) ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದ ಪ್ರತಿಭಟನೆ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ, ಕೃಷಿ ಇಲಾಖೆ ವಿಮಾ ಕಂಪನಿ ಹಾಗೂ ಬ್ಯಾಂಕ್ಗಳ ಅಧಿಕಾರಿಗಳು ಶುಕ್ರವಾರ (ಜು.6) ರಂದು ವಿಮಾ ಅದಾಲತ್ ನಡೆಸುವ ಮೂಲಕ ಬೆಳೆವಿಮೆ ಪರಿಹಾರದ ಹಣ ಬಾಕಿ ಉಳಿದಿದ್ದ ರೈತರ ಪರಿಹಾರ ವಿತರಿಸುವ ಪ್ರಕ್ರಿಯೆ ಚಾಲನೆ ನೀಡಿತು.
ಪಟ್ಟಣದ ತಾಲ್ಲೂಕ ಕಛೇರಿಯಲ್ಲಿ ಬೆಳೆವಿಮೆ ಪಡೆದುಕೊಳ್ಳದೇ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ವಿಷಯಾಧಾರಿತ ಹೋರಾಟ ಆರಂಭಿಸಿದ ಮುಂದಾಗಿತ್ತು ಕೊನೆಗೆ ಅಧಿಕಾರಿಗಳ ಹಾಗೂ ಸಂಘದ ಕಾರ್ಯಕರ್ತರ ನಡುವಿನ ಜಟಾಪಟಿ ತಾರಕಕ್ಕೇರಿದ್ದರಿಂದ ರೈತ ಸಂಘವು, ಜು.2 ರಿಂದ ಅಹೋರಾತ್ರಿ ಧರಣಿಯನ್ನು ಸಂಬಂಧಿಸಿದ ತಾಲ್ಲೂಕ ಕಚೇರಿಗಳಲ್ಲಿ ಆರಂಭಿಸಿತ್ತು, ಪಟ್ಟು ಸಡಿಲಿಸಿದ ರೈತರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಅಧಿಕಾರಿಗಳ ಸಭೆಯನ್ನು ಇಂದು ಆರಂಭಿಸಿದೆ.
ನೀರಾವರಿ ಹೇಗಾಯಿತು..?ಉತ್ತರಕೊಡಿ:ಬಳಿಕ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾಜರ್ುನ ಬಳ್ಳಾರಿ, ಬಹುತೇಕ ರೈತರು ಬಯಲು ಪ್ರದೇಶವೆಂದು ಹಿಂಗಾರಿ ಜೋಳಕ್ಕೆ ಪ್ರತಿ ಎಕರೆಗೆ 400 ರೂ.ಗಳಂತೆ ಬ್ಯಾಂಕಿಗೆ ಭರಣ ಮಾಡಿದ್ದೇವೆ, ಆದರೆ ವಿಮೆ ಕಂಪನಿಗಳು ಪರಿಹಾರದ ಹಣವನ್ನು ಉಳಿಸುವುದಕ್ಕಾಗಿ ತುಂಬಿದ ಹಣವನ್ನು 472 ಕ್ಕೆ ತಾವೇ ಖುದ್ದಾಗಿ ಹೆಚ್ಚಿಸಿಕೊಂಡು ರೈತರನ್ನು ವಿಮೆಯಿಂದ ವಂಚಿತರಾಗುವಂತೆ ಮಾಡಿದೆ, ಇದಕ್ಕೆ ಹೊಣೆಯಾರು..? ಇಂತಹ 189 ರೈತರಿಗೆ ವಿಮಾ ಕಂಪನಿ ಮೋಸವೆಸಗಿದೆ ಎಂದು ಆರೋಪಿಸಿದರು.
ಬ್ಯಾಂಕಗಳಲ್ಲಿ ಉಳಿದ ವಿಮೆ ಹಣ:ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಸತತ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ, ಮಾಡಿದ ಸಾಲ ತೀರಿಸಲಾಗದೇ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ, ಕಳೆದ 2015-16 2016-17 ಹಾಗೂ 2017-18 ಒಟ್ಟು 3 ವರ್ಷಗಳು ಅದಾಗ್ಯೂ ಸಹ ಜಿಲ್ಲೆಯ ಅಷ್ಟೂ ರೈತರಿಗೆ ನ್ಯಾಯ ಸಮ್ಮತವಾಗಿ ಸಿಗಬೇಕಾ ಗಿದ್ದ ಸುಮಾರು 11 ಕೋಟಿ ರೂ.ಗಳಷ್ಟು ವಿಮೆ ಹಣ ಬ್ಯಾಂಕ್ಗಳಲ್ಲಿ ಉಳಿಯುವಂತೆ ಮಾಡಲಾಗಿದೆ ಎಂದು ಆರೋಪಿಸಿದರು.
ಬಡ್ಡಿ ಸಮೇತ ಹಿಂದುರುಗಿಸಿ ಇಲ್ಲವೇ ಬ್ಲಾಕ್ ಲೀಸ್ಟಗೆ ಸೇರಲಿ: ರೈತ ಮುಖಂಡ ಶಶಿಧರ ಛತ್ರದಮಠ ಮಾತನಾಡಿ, ತಡವಾಗಿ ವಿತರಣೆಯಾಗುತ್ತಿರುವ ಬೆಳೆವಿಮೆ ಪರಿಹಾರದ ಮೊತ್ತಕ್ಕೆ ಬಡ್ಡಿ ಸಮೇತ ಮರಳಿಸಬೇಕು ಯಾವುದೇ ಕಾರಣಕ್ಕು ಅದನ್ನು ಪಡೆದುಕೊಳ್ಳದೇ ಬಿಡುವುದಿಲ್ಲ, ವಿಮೆ ಪರಿಹಾರ ಇದು ನಮ್ಮ ಹಕ್ಕು ನೀವು ಕೊಡುವ ಭಿಕ್ಷೆಯಲ್ಲ ಇದನ್ನು ಅಧಿಕಾರಿಗಳು ಅಥರ್ೈಸಿಕೊಂಡು ಕಾರ್ಯ ನಿರ್ವಹಿಸಬೇಕು, ವಿಮೆ ಕಂಪನಿ ಸರಿಯಾಗಿ ಪರಿಹಾರ ನೀಡಿದ್ದರೇ ರೈತರು ಬೀದಿಗೆ ಬಂದು ನಿಲ್ಲುವಂತಹ ಕಾರಣವೇನಿತ್ತು ಎಂದು ಪ್ರಶ್ನಿಸಿದ ಅವರು, ಒಂದು ವೇಳೆ ಇದಕ್ಕೆ ಒಪ್ಪದಿದ್ದಲ್ಲಿ ಕೂಡಲೇ ಇಲ್ಲಿಂದ ಜಾಗ ಖಾಲಿ ಮಾಡಿ ಹಣ ಹೇಗೆ ಪಡೆದುಕೊಳ್ಳಬೇಕೆಂಬುದು ನಮಗೂ ಗೊತ್ತಿದೆ ವಿಮಾ ಕಂಪನಿಯನ್ನು ಕಪ್ಪು ಪಟ್ಟಿಗೆ (ಬ್ಲಾಕ್ಲೀಸ್ಟ್) ಸೇರಿಸಲು ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ಕ್ಷಮೆ ಕೇಳಿದ ವಿಮಾ ಕಂಪನಿ: ಯುನಿವರ್ಸಲ್ ಸ್ಯಾಂಪೋ ವಿಮೆ ಕಂಪನಿ ಅಧಿಕಾರಿ ಶ್ರೇಯಸ್ ಮಾತನಾಡಿ, ನಮ್ಮಗಳ ತಪ್ಪಿನಿಂದ ಖುಷ್ಕಿಭೂಮಿ ಇದ್ದಂತುಹುದು ನೀರಾವರಿ ಎಂದು ಪರಿವರ್ತನೆಯಾಗಿದೆ, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅದಕ್ಕಾಗಿ ಕ್ಷಮೆ ಕೇಳುತ್ತೇನೆ, ಸದರಿ ವಿಷಯವನ್ನು ಹಿರಿಯ ಅಧಿಕಾರಿಗಳೊಂದಿಗೆ ಚಚರ್ಿಸಿ ಇನ್ನೂ 15 ದಿನಗಳಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದರು.
ಕೆವಿಜಿ ಬ್ಯಾಂಕನಿಂದ ರೈತರಿಗೆ ಬಹುದೊಡ್ಡ ಮೋಸ: ರೈತ ಮುಖಂಡ ಕಿರಣ ಗಡಿಗೋಳ ಮಾತನಾಡಿ, ವಿಮೆ ಕಂಪನಿಯು ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಮಾಡಿದ್ದರೂ ಸಹ ಕಳೆದ 3 ವರ್ಷಗಳಿಂದ ಇಲ್ಲಸಲ್ಲದ ನೆಪಗಳನ್ನು ನೀಡಿ ರೈತರ ಖಾತೆಗಳಿಗೆ ಹಣ ನೀಡಿಲ್ಲ, ಇದಕ್ಕೆ ಸರಿಯಾದ ಕಾರಣವನ್ನು ನೀಡಲೇಬೇಕು ಇಲ್ಲವೇ ಬಡ್ಡಿ ಸಮೇತ ಬ್ಯಾಂಕ್ ರೈತನಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು.
ಜೈಲಿಗೆ ಸೇರಿಸಬೇಕೆಂದು ಮಾಡಿದ್ದೀರೇನ್ರೀ:ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ, ಅಧಿಕಾರಿಗಳು ಮತ್ತು ವಿಮೆ ಕಂಪನಿಗಳು ಮಾಡಿದ ತಪ್ಪಿಗೆ ತಾಲೂಕಿನ ಬಹುತೇಕ ರೈತರಿಗೆ ಟೋಮೋಟೋ ವಿಮೆ ಪರಿಹಾರ ದೊರೆಯಲಿಲ್ಲ ಮನೆಯಲ್ಲಿಯೇ ಕುಳಿತು ಆಣೆವಾರಿ (ಕ್ರಾಪ್ ಎಕ್ಸಪರಿಮೆಂಟ್) ಮಾಡಿ ರೈತರಿಗೆ ಮೋಸವೆಸಗಿದ ಅಧಿಕಾರಿಯನ್ನು ಜೈಲಿಗೆ ಅಟ್ಟುವುದನ್ನು ಬಿಟ್ಟು ತೋಟಗಾರಿಕೆ ಇಲಾಖೆ ಕಚೇರಿಗೆ ಬೀಗ ಜಡಿದು ಬೆಳೆವಿಮೆ ನೀಡುವಂತೆ ಪ್ರಶ್ನಿಸಿದ ರೈತರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಿದ್ದ ರಕ್ಷಣಾ ಇಲಾಖೆಯಲ್ಲಿಯೇ ರೈತರ ಮಕ್ಕಳಿಲ್ಲವೇ ನಮ್ಮ ಸಂಕಷ್ಟ ಅಧಿಕಾರಿಗಳಿಗೆ ಅರ್ಥವಾಗಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಿಯೇ ಇಲ್ಲಿಂದ ತೆರಳುವಂತೆ ಬಿಗಿಪಟ್ಟು ಹಿಡಿದರು.
ವರುಣನ ಅವಕೃಪೆ:ಬೆಳೆವಿಮೆ ವಂಚಿತ ಸಾವಿರಾರು ಸಂಖ್ಯೆಯ ರೈತರು ಬೆಳಿಗ್ಗೆಯಿಂದಲೇ ತಹಶೀಲ್ಧಾರ ಕಚೇರಿ ಆವರಣದಲ್ಲಿ ಜಮಾಯಿಸಿದ್ದರು, ವಿಮೆ ಮೊತ್ತ ಪಡೆದುಕೊಳ್ಳಲು ಬಂದ ರೈತರರಿಗೂ ವರುಣದೇವ ಕಾಡಿದ ಘಟನೆ ನಡೆಯಿತು. ಮದ್ಯಾಹ್ನ 12 ಗಂಟೆಗೆ ಸುರಿದ ಮಳೆಗೆ ಬಹುತೇಕ ರೈತರು ತೊಯ್ದು ತೊಪ್ಪಡಿಯಾದರು, ಹೀಗಾಗಿ ಮಳೆಯಿಂದ ತಪ್ಪಿಸಿಕೊಳ್ಳಲು ಕೆಲವರು ಕೊಡೆಗಳನ್ನು ಹಿಡಿದುಕೊಂಡರೇ ಇನ್ನೂ ಕೆಲವರು ಕುಳಿತುಕೊಳ್ಳಲು ಹಾಕಿದ್ದ ಖುಚರ್ಿಗಳ ಆಸರೆಯನ್ನು ಪಡೆದುಕೊಂಡರು.
ಉಪವಿಭಾಗಾಧಿಕಾರಿ ಲೊಕೇಶ್, ತಹಶೀಲ್ದಾರ ಶಿವಶಂಕರ ನಾಯಕ್ ಹಿರಿಯ ತೋಟಗಾರಿಕೆ ಇಲಾಖೆಯ ವಿಜಯಲಕ್ಷ್ಮೀ, ಸಹಾಯಕ ಕೃಷಿ ನಿದರ್ೇಶಕ ಅಮೃತೇಶ್, ರೈತ ಮುಖಂಡರಾದ ಮೌನೇಶ ಬಡಿಗೇರ, ಡಾ.ಕೆ.ವಿ.ದೊಡ್ಡಗೌಡ್ರ, ಮಂಜಪ್ಪ ತೋಟದ ಮಲ್ಲೇಶಪ್ಪ ಡಂಬಳ, ಶೇಖಪ್ಪ ಕಾಶಿ, ಹನುಮಂತಪ್ಪ, ವಿ.ಸಿ.ಹಾವೇರಿಮಠ, ಗಿರೀಶ್ ಮುದ್ದಶೆಟ್ಟಿ, ಅಶೋಕ ಮಾಳೇನಹಳ್ಳಿ, ಚಿಕ್ಕಪ್ಪ ಛತ್ರದ, ಪ್ರಶಾಂತ ಹಾಲನಗೌಡ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.