ಸಂತಾನವಿಲ್ಲದ ದಂಪತಿಗಳಿಗೆ ವರವಾದ ಕನ್ಹೇರಿ ಮಠದ ಜನನಿ ಐವಿಎಫ್ ಕೇಂದ್ರ
ಸಂತೋಷಕುಮಾರ್ ಕಾಮತ್
ಮಾಂಜರಿ:ಸಂತಾನವಿಲ್ಲದ ಸಮಸ್ಯೆಯನ್ನು ಎದುರಿಸುತ್ತಿರುವ ಬಡ ಮಹಿಳೆಯರಿಗಾಗಿ ಕಣ್ಣೀರಿಯ ಸಿದ್ಧಗಿರಿ ಮಠದಲ್ಲಿ ಜೊಲ್ಲೆ ಗುಪ್ ವತಿಯಿಂದ ಜನನಿ ಐವಿಎಫ್ ಸೆಂಟರ್ ಪ್ರಾರಂಭಿಸಲಾಗಿದೆ.
ಮಾಜಿ ಸಚಿವ ಶಶಿಕಲಾ ಜೊಲ್ಲೆ ಅವರ ಕಾಳಜಿಯಿಂದ ಬಡ ಮಹಿಳೆಯರಿಗೆ ಸಂತಾನ ಭಾಗ್ಯ ಕಲ್ಪಿಸಿಕೊಡಬೇಕು ಎಂಬ ಕಾರಣಕ್ಕಾಗಿಯೇ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ನೇರಿ ಸಿದ್ದಗಿರಿ ಮಠದ ಆವರಣದಲ್ಲಿ ಫೆ. 7, 2023 ರಂದು ಪ್ರಾರಂಭವಾದ ಜನ ಐವಿಎಫ್ ಕೇಂದ್ರದ ಲಾಭವನ್ನು ಇದುವರೆಗೆ 1 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಡೆದುಕೊಂಡಿದ್ದಾರೆ.
ಬೇರೆಡೆಯಲ್ಲೆಲ್ಲ ಇರುವ ಐವಿಎಫ್ ಕೇಂದ್ರಗಳಲ್ಲಿ ಸಂತಾನ ಭಾಗ್ಯ ಚಿಕಿತ್ಸೆ ಪಡೆದುಕೊಳ್ಳಲು ಕನಿಷ್ಟ 3 ರಿಂದ 4 ಲಕ್ಷ ರೂ. ಗೂ ಹೆಚ್ಚು ಖರ್ಚುಮಾಡಬೇಕಾಗುತ್ತದೆ. ಆದರೆ, ಕಣ್ಣೀರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ವಿಶೇಷ ಪ್ರಯತ್ನದಿಂದ ಆರಂಭಿಸಿದ ಜನನಿ ಕೇಂದ್ರ ನಿಜಕ್ಕೂ ಮಕ್ಕಳಿಲ್ಲದ ಮಹಿಳೆಯರಿಗೆ ವರದಾನವಾಗಿದೆ.
ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ಹೊಂದಿರುವಈ ಆಸ್ಪತ್ರೆಯಲ್ಲಿ ಕೇವಲ 50 ಸಾವಿರ ರೂ. ನಿಂದ 75 ಸಾವಿರ ರೂ. ವೆಚ್ಚದಲ್ಲಿ ಸಾವಿರಾರು ಮಹಿಳೆಯರಿಗೆ ಮಕ್ಕಳ ಭಾಗ ದೊರೆತಿದೆ. ವೈದ ಡಾ. ವರ್ಷಾ ಪಾಟೀಲ
ಅವರು ಜನ ಐ ವಿ ಎಫ ಆಸತ್ರೆಯ ನಿರ್ವಹಣೆಯ ನೇತೃತ್ವ ವಹಿಸಿಕೊಂಡಿದ್ದು, ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರಿಗೂ ಸಂತಾನ ಭಾಗ್ಯ ಅತೀ ಕಡಿಮೆ ವೆಚ್ಚದಲ್ಲಿ ಸಿಗುವಂತಾಗಬೇಕೆಂಬುವುದೇ ಆಸ್ಪತ್ರೆ ಪ್ರಾರಂಭದ ಉದ್ದೇಶವಾಗಿದೆ. ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ , ಗೋವಾ ರಾಜ್ಯಗಳಿಂದ ಆಗಮಿಸಿದ ಮಹಿಳೆಯರು ಜನನಿ ಗರ್ಭಧಾರಣಾ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 3 ರಿಂದ 7 ತಿಂಗಳವರೆಗೆ ಈ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 15 ದಿನಗಳ ಕಾಲ ಮಹಿಳೆಯನ್ನು ಸಾಧಿಸಿಕೊಂಡು ಕೇಂದ್ರದಲ್ಲಿಯೇ ಸೌಲಭ್ಯವನ್ನು ಸದುಪಯೋಗ ಆಯುರ್ವೇದಿಕ್ ಪದ್ಧತಿಯಲ್ಲಿಯೂ ಚಿಕಿತ್ಸೆ ನೀಡಲಾಗುತ್ತಿದೆ. ಹೀಗೆ ಕಳೆದ ತಿಂಗಳಿನಿಂದ
ಸಾಕಷ್ಟು ಮಹಿಳೆಯರಿಗೆ ಸಂತಾನ ಭಾಗ್ಯ ಕಲ್ಪಿಸಿಕೊಟ್ಟ ಜನನಿ ಐವಿಎಫ್ ಕೇಂದ್ರ ಮಕ್ಕಳಿಲ್ಲ, ಮಕ್ಕಳಿಲ್ಲ ಅಂತಾ ಕೊರಗುವ ಮಹಿಳೆಯರಿಗೆ ಸಂತಾನ ಭಾಗ್ಯ ಕರುಣಿಸುವ ಕಾಮಧೇನು ಕಲ್ಪವೃಕ್ಷವೇ ಎಂದು ಹೇಳಬಹುದು. ಶಾಸಕಿ ಶಶಿಕಲಾ ಜೊಲ್ಲೆ ಅವರ ಆಸಕ್ತಿಯಿಂದ ಪ್ರಾರಂಭಗೊಂಡ ಜನನಿ ಕೇಂದ್ರಕ್ಕೆ ಇದೀಗ 9 ತಿಂಗಳು ತುಂಬಿದೆ. ತುಂಬಿದ ಜನನಿ ಇನ್ನಷ್ಟು ಮತ್ತಷ್ಟು ಮಹಿಳೆಯರಿಗೆ ಸಂತಾನ ಭಾಗ್ಯ ಕಲ್ಪಿಸಲಿ ಎಂಬುವುದಾಗಿದೆ.
**ಕೇವಲ 50 ಸಾವಿರ ರೂ. ನಿಂದ 75 ಸಾವಿರ ರೂ. ವೆಚ್ಚದಲ್ಲಿ ಜನನಿ ಐವಿಎಫ್ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡು ಕಳೆದ 9 ತಿಂಗಳ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರಿಗೆ ಮಕ್ಕಳ ಭಾಗ್ಯ ಸಿಕ್ಕಿದೆ. ಮಕ್ಕಳಿಲ್ಲದೇ ವಂಚಿತರಾಗಿರುವ ದಾಂಪತ್ಯಗಳು ಜನನಿ ಕೇಂದ್ರದ ಸೌಲಭ್ಯವನ್ನು ಪಡೆದುಕೊಳ್ಳಬೇಕು
- ಶಶಿಕಲಾ ಜೊಲ್ಲೆ ಶಾಸಕರು ನಿಪ್ಪಾಣಿ