ಶಿಗ್ಗಾವ್

ಮುಖ್ಯದ್ವಾರವನ್ನು ನಿರ್ಮಾಣಕ್ಕೆ ಶ್ರೀಕಾಂತ ಗುದ್ದಲಿ ಪೂಜೆ

ಮುಖ್ಯದ್ವಾರವನ್ನು ನಿರ್ಮಾಣಕ್ಕೆ ಶ್ರೀಕಾಂತ ಗುದ್ದಲಿ ಪೂಜೆ

ಲೋಕದರ್ಶನ ವರದಿ 

ಶಿಗ್ಗಾವಿ :ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಅಂಬಿಗೇರ ಮಾತನಾಡಿ ಸರಕಾರಿ ಶಾಲೆಗೆ ಮುಖ್ಯದ್ವಾರ ನಿರ್ಮಾಣ ಮಾಡಿಕೊಡಲು ಮುಂದಾಗಿದ್ದು ಸಂತೋಷ ತಂದಿತು ಎಂದು ಉಪಸ್ಥಿತಿಯಲ್ಲಿದ್ದ ಶ್ರೀಕಾಂತ ದುಂಡಿಗೌಡ್ರ ಅವರಿಗೆ ಅಭಿನಂದಿಸಿದರು. 

ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ 1 ಮತ್ತು ಸರಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಗಳಿಗೆ ಮುಖ್ಯದ್ವಾರವನ್ನು ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ ಉದ್ದೇಶಿಸಿ  ಶಾಲೆಯು 169 ವರ್ಷಗಳ ಹಳೇಯ ಶಾಲೆಯಾಗಿದ್ದು,  ಇದು ರಾಜ್ಯಕ್ಕೆ, ರಾಷ್ಟ್ರಕ್ಕೆ ಅಧಿಕಾರಿಗಳನ್ನು, ಸತ್ಪ್ರಜೆಗಳನ್ನು ನೀಡಿದ ಶಾಲೆ ಇದಾಗಿದೆ. ಈ ಶಾಲೆಗೆ ಅಭಿಮಾನದಿಂದ ಶಿಕ್ಷಣ ಪ್ರೇಮಿ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ಬ.ದುಂಡಿಗೌಡ್ರ ಅವರು ಮುಖ್ಯದ್ವಾರವನ್ನು ಸ್ವಂತ ಖರ್ಚಿನಿಂದ ನಿರ್ಮಾಣ ಮಾಡಿಕೊಡಲು ಮುಂದೆ ಬಂದಿರುತ್ತಾರೆ ಎಂದು ಅಭಿನಂದಿಸಿದರು.

 ಪುರಸಭೆ ಸದಸ್ಯ ಪರಶುರಾಮ ಸೊನ್ನದ,  ಎಸ್.ಡಿ.ಎಂ.ಸಿ ಅಧ್ಯಕ್ಷರವಿ ಮಡಿವಾಳರ, ಸದಸ್ಯ ಸಂಜೀವ ಮಣ್ಣಣ್ಣವರ, ಸುರೇಶಗೌಡ ಪಾಟೀಲ, ಸುರೇಶ ಹರಿಗೊಂಡ, ಸತೀಶ ಕಲಾಲ, ಹಳೇಯ ವಿದ್ಯಾರ್ಥಿಗಳಾದ ರಾಘವೇಂದ್ರ ದೇಶಪಾಂಡೆ,  ಮಹದೇವ ಅಡರಕಟ್ಟಿ, ಪ್ರತೀಕ ಕೋಳೇಕರ, ನವೀನ ಸಾಸನೂರ, ಚೇತನಕುವಾರಕರ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ಎನ್. ಎ. ಮಲಸಮುದ್ರ, ಸಹ ಶಿಕ್ಷಕ ಲಿಂಗೇಶ, ಲವಕುಮಾರ, ಶೃತಿ ಉಪಸ್ಥಿತಿಯಲ್ಲಿ ಇದ್ದರು 

ಸುದ್ದಿ ಓದಿ