ರಾಣೆಬೆನ್ನೂರ

ದೇಹದಾನ ಮಾಡಿ ಸತ್ತಮೇಲು ಆದರ್ಶತೆ ಮೇರೆದ ಅ.ಸಿ. ಹಿರೇಮಠ

ದೇಹದಾನ ಮಾಡಿ ಸತ್ತಮೇಲು ಆದರ್ಶತೆ ಮೇರೆದ ಅ.ಸಿ. ಹಿರೇಮಠ

ಪೂಜ್ಯರಿಂದ- ಭಕ್ತ ಸಮೂಹದಿಂದ ಅಶೃತರ್ಪಣ

ರಾಣೇಬೆನ್ನೂರು29: ಹಿರಿಯರು ಜಿಲ್ಲಾ ಕ.ಸಾ.ಪ ನಿಕಟಪೂರ್ವ ಅಧ್ಯಕ್ಷರು ಚೆನ್ನೇಶ್ವರ ಮಠದ ಕಾರ್ಯದಶರ್ಿ ಪ್ರೋ.ಅ.ಸಿ. ಹಿರೇಮಠ ಅವರು ದಿ: 26ರಂದು ಮಧ್ಯಾಹ್ನ 2:30ಕ್ಕೆ ಲಿಂಗೈಕ್ಯರಾದರು ಈ ನಗರದಲ್ಲಿ ಹಬ್ಬುತ್ತಲೆ ಸಾವಿರಾರು ಅಭಿಮಾನಿಗಳು, ಭಕ್ತವೃಂಧದವರು ಮನೆಗೆ ಹಾಗೂ ಚೆನ್ನೇಶ್ವರ ಮಠಕ್ಕೆ ಬಂದು ಹಿರೇಮಠ ಅವರ ಅಂತಿಮ ದರ್ಶನ ಪಡೆದರು. 

ಬೆಳಿಗ್ಗೆ 11:30ಕ್ಕೆ ಮನೆಯಿಂದ ಹೊರಟ ಪಾರ್ಥಿವ ಶರೀರ ಚೆನ್ನೇಶ್ವರ ಮಠ ತಲುಪಿದಾಗ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಾಣೇಬೆನ್ನೂರು ಪುರ ಹೊನ್ನಾಳಿ ಹಾವೇರಿಯಿಂದ ಭಕ್ತ ಹಾಗೂ ಅಭಿಮಾನಿ ಬಳಗ ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡರು.

ಹೊನ್ನಾಳಿ ಹಿರೇಕಲ್ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಶನಿಶ್ಚರ ಹಿರೇಮಠದ: ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ನೆಗಳೂರಿನ  ಗುರುಶಾಂತೇಶ್ವರ ಸ್ವಾಮಿಗಳು, ಪುಟ್ಟಯ್ಯನಮಠದ ಶ್ರೀಮನಿಪ್ರ ಗುರುಬಸವ ಸ್ವಾಮಿಗಳು, ಲಿಂಗನಾಯ್ಕನಹಳ್ಳಿಯ ಶ್ರೀಮನಿಪ್ರ ಚೆನ್ನವೀರಸ್ವಾಮಿಗಳು, ಲಿಂಗದಳ್ಳಿಯ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಅಭಿನವ ಸಿದ್ಧವೀರಶಿವಾಚಾರ್ಯರು, ಮಂಗಳೂರಿನ ಶ್ರೀಗಳು ಶ್ರದ್ಧಾಂಜಲಿ ಸಭೆಯ ಸಾನಿಧ್ಯ ವಹಿಸಿದ್ದರು.  

ಈ ಸಭೆಯಲ್ಲಿ ಜೆ ಎಂ ಮಠದ, ಶಿವಯೋಗಿ ಮಹಾನುಭಾವಿಮಠ, ವಿ.ವಿ. ಹರಪನಹಳ್ಳಿ, ಚಂದ್ರಣ್ಣ ಸೊಪ್ಪಿನ್, ರಾಜು ತಿಳುವಳ್ಳಿ, ಹಾಗೂ ಹೊನ್ನಾಳಿ ನೆಗಳೂರು ಲಿಂಗನಾಯಕನ ಹಳ್ಳಿಯ ಪೂಜ್ಯರು ಮಾತನಾಡಿ ಅ.ಸಿ. ಹಿರೇಮಠ ಅವರ ಸೇವೆ, ಕಾರ್ಯ ಹಾಗೂ ಸಾಧನೆಯನ್ನು ಸ್ಮರಸಿ ನಗರದಲ್ಲಿ ಚೆನ್ನೇಶ್ವರ ಮಠದ ನಿಮರ್ಾತೃ. ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷರಾಗಿ ಹಾಗೂ 250ಕ್ಕು ಹೆಚ್ಚು ಜ್ಞಾನವಾಹಿನಿ ಸಭೆಗಳನ್ನು ನಡೆಸಿ ಪಂಚಾಚಾರ್ಯರ, ಹೊನ್ನಾಳಿ ಹಿರೇಕಲ್ಮಠದ ಲಿಂ ಚಂದ್ರಶೇಖರ ಶಿವಾಚಾರ್ಯರ ಕರಕಮಲಸಂಜಾತರಾಗಿ ಸೇವೆ ಸಲ್ಲಿಸಿ ಸರಳ ಜೀವನ ನೆಡೆಸುವುದರ ಮೂಲಕ ಹಾಗೂ ದೇಹವನ್ನೇ ವೈದ್ಯಕೀಯ ರಂಗಕ್ಕೆ ದಾನಮಾಡಿ ಆದರ್ಶತೆ ಮೇರೆದಿದ್ದನ್ನು ಸ್ಮರಿಸಿ, ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು. ಶ್ರದ್ಧಾಂಜಲಿ ಸಭೆಯ ನಂತರ ಪಾಥರ್ಿವ ಶರೀರವನ್ನು ಬೆಳಗಾವಿ ಆಸ್ಪತ್ರೆಯ ವೈದ್ಯಕೀಯ ತಂಡಕ್ಕೆ ಸಮರ್ಪಿಸಲಾಯಿತು 

ಸುದ್ದಿ ಓದಿ