ಮಕ್ಕಳ ಉತ್ಕೃಷ್ಟ ಭವಿಷ್ಯ ರೂಪಣೆ ಪೋಷಕರ ಕರ್ತವ್ಯ: ಅಂಬಿಗೇರ
ಲೋಕದರ್ಶನ ವರದಿ
ಶಿಗ್ಗಾವಿ 20: ತಮ್ಮ ಮಕ್ಕಳು ಉತ್ಕೃಷ್ಟ ಬದುಕು ಹೊಂದಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಹೆತ್ತವರು ಅವರನ್ನು ಶಾಲೆಗೆ ಸೇರಿಸುತ್ತಾರೆ.ಇಲ್ಲಿಗೆ ಅವರ ಕರ್ತವ್ಯ ಮುಗಿಯುವುದಿಲ್ಲ.ಅವರ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆಯೂ ನಿರಂತರ ಪರಾಮರ್ಶಿ ಮಾಡಿದಾಗಲೇ ಅದಕ್ಕೊಂದು ವಿಶಿಷ್ಟ ಅರ್ಥ ಬರುತ್ತದೆ ಎಂದು ಶಿಗ್ಗಾಂವ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಹೇಳಿದರು.
ತಾಲೂಕಿನ ಗೊಟಗೋಡಿಯ ಉತ್ಸವ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮನೆಯೇ ಮೊದಲ ಪಾಠ ಶಾಲೆ ಎಂಬ ಪೂರ್ವಜರ ಮಾತು ಸಾರ್ವಕಾಲಿಕ ಸತ್ಯ. ಸತ್ಯ.ಮಕ್ಕಳು ಬುದ್ಧಿವಂತರಾಗಿಯೇ ಹುಟ್ಟಿರುವುದಿಲ್ಲ.ಮನೆಯ ಪರಿಸರ,ಸಂಸ್ಕಾರ ಅವರ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ ಎಂದು ಅಂಬಿಗೇರ ಮಾರ್ಮಿಕವಾಗಿ ನುಡಿದರು.
ಪುಸ್ತಕಗಳಲ್ಲಿನ ಪಾಠ ಕಲಿಸಲು ಶಿಕ್ಷಕರು,ಶಾಲೆಯ ಅಗತ್ಯವೂ ಇಲ್ಲ.ಈ ಕೆಲಸ ಹೆತ್ತವರು ಮನೆಯಲ್ಲಿಯೇ ಮಾಡಬಹುದು.ಆದರೆ ಪುಸ್ತಕವನ್ನು ಮೀರಿದಂತಹ ಹಾಗೂ ಮಕ್ಕಳ ಭವಿಷ್ಯ ರೂಪಿಸುವಂತ ಶಿಕ್ಷಣ ನಮ್ಮ ಶಾಲೆಯಲ್ಲಿ ಆಗಬೇಕಿದೆ,ಅದು ಆಗುತ್ತಿದೆ ಎಂದು ಬಿಂಬಿಸುವುದೇ ಶಾಲಾ ವಾಷರ್ಿಕ ಸ್ನೇಹ ಸಮ್ಮೇಳನದ ಉದ್ದೇಶ ಎಂದು ಹೇಳಿದರು.
ಕನ್ನಡ ಜಾನಪದ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ವೇದಾರಾಣಿ ದಾಸನೂರ ಅಧ್ಯಕ್ಷತೆ ವಹಿಸಿ ಮಾತನಾಡಿ ತಮ್ಮ ಅಧ್ಯಕ್ಷೀಯ ಭಾಷಣದಲಿ ಪುಸ್ತಕ ಜ್ಞಾನದೊಂದಿಗೆ ಜಾಗತಿಕ ಚಟುವಟಿಕೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಶಿಕ್ಷಣ ಸಂಸ್ಥೆಗಳಿಂದ ನಿರಂತರ ನಡೆಯಬೇಕು ಎಂದರು.
ಶಿಕ್ಷಣ ಸಂಯೋಜಕ ಎಚ್.ಡಿ.ಗೋಣಿಗೌಡರ, ಬ್ಲಾಕ್ ಸಂಪನ್ಮೂಲ ವ್ಯಕ್ತಿ ಎಚ್.ಎಚ್.ರಟ್ಟಿಹಳ್ಳಿ, ಬಸವರಾಜ ಮಡಿವಾಳರ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಅನುಪಮಾ ಹೆಬ್ಬಾರ್ ಸ್ವಾಗತಿಸಿ ವಂದಿಸಿದರು