ಬಳ್ಳಾರಿ: ರೈತರ ಸಮಸ್ಯಗಳಿಗೆ ಸ್ಪಂಧಿಸುವ ಅಭ್ಯರ್ಥಿಗೆ ಬೆಂಬಲ: ರೈತಸಂಘದ ಅಧ್ಯಕ್ಷ ಪುರುಷೋತ್ತಮಗೌಡ

ಬಳ್ಳಾರಿ: ರೈತರ ಸಮಸ್ಯಗಳಿಗೆ ಸ್ಪಂಧಿಸುವ ಅಭ್ಯರ್ಥಿಗೆ  ಬೆಂಬಲ: ರೈತಸಂಘದ ಅಧ್ಯಕ್ಷ ಪುರುಷೋತ್ತಮಗೌಡ

ಬಳ್ಳಾರಿ 10: ರೈತರ ಸಮಸ್ಯಗಳಿಗೆ ಸ್ಪಂಧಿಸುವಅಭ್ಯರ್ಥಿಗಳಿಗೆ  ಮಾತ್ರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರೈತಸಂಘ ಬೆಂಬಲ ನೀಡಲಾಗುವುದು ಎಂದು ತುಂಗಭದ್ರ ರೈತಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು. ಈ ಕುರಿತು ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಈ ವರೆಗೆ ಚುನಾವಣೆಯಲ್ಲಿ ಸ್ಪಧರ್ಿಸಿದ ಎಲ್ಲಾ ಅಭ್ಯರ್ಥಿಗಳು ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಬರವಸೆಗಳನ್ನು ನೀಡುತ್ತಾರೆ. ನಂತರ ದಿನಗಳಲ್ಲಿ ತಾವು ನೀಡಿದ ಬರವಸೆಗಳನ್ನು ಹುಸಿ ಮಾಡುತ್ತಾರೆ. 

ಈ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಸ್ಪರ್ದಿಸಿರುವ  ಕಾಂಗ್ರೆಸ್ ಅಥವಾ ಬಿಜೆಪಿ ಅಭ್ಯಥರ್ಿಗಳು ರೈತರ ಸಮಸ್ಯಗಳ ಬಗ್ಗೆ ಇದೇ ತಿಂಗಳ 20ರೊಳಗಾಗಿ ರೈತರ ಬೇಡಿಕೆಗಳ ಈಡೇರಿಕೆಗೆ ಬರವಸೆ ನೀಡಬೇಕು. ರೈತರ ಸಮಸ್ಯಗಳಿಗೆ ಸ್ಪಂಧಿಸುವ ಅಭ್ಯಥರ್ಿಗಳಿಗೆ ಚುನಾವಣೆಯಲ್ಲಿ ಬೆಂಬಲ ನೀಡಲಾಗುವುದು ಎಂದರು. ರೈತರ ಸಮಸ್ಯಗಳಾದ ತುಂಗಭದ್ರ ಜಲಾಶಯದಲ್ಲಿ ತುಂಬಿರುವ 33 ಟಿಎಂಸಿ ಹೂಳು ತೆಗೆಯಬೇಕು. ತುಂಗಭದ್ರ ಮತ್ತು ಕೃಷ್ಣಾ ನದಿಗಳ ಜಲಾಶಯಗಳ ಮೆಲ್ಬಾಗದಲ್ಲಿ ಜೊಡಣೆ ಮಾಡಬೇಕು. ಎಂದು ಒತ್ತಾಯಿಸಿದರು. 

ಕಾರ್ಖಾನೆಗಳ  ಸ್ಥಾಪನೆಗಾಗಿ ರೈತರಿಂದ ಸ್ವಾದಿನ ಪಡಿಸಿಕೊಂಡಿರುವ ಸಾವಿರಾರು ಎಕರೆ ಜಮೀನನ್ನು ಉಕ್ಕಿನ ಕಾಖರ್ಾನೆಗಳನ್ನು ಸ್ಥಾಪಿಸಿ ರೈತರ ಮಕ್ಕಳಿಗೆ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆ ಗಣಿಗಾರಿಕೆಯಿಂದ ಸರಕಾರಕ್ಕೆ ಬರುವ ಅಂದಾಜು 13 ಸಾವಿರ ಕೋಟಿ ಹಣದಲ್ಲಿ ಅರ್ದದಷ್ಟು ಹಣವನ್ನು ತುಂಗಭದ್ರ ಜಲಾಶಯದ ಹೂಳು ತೆಗೆಯಲು ಮಿಸಲಿಡಬೇಕು. ಜೊತೆಗೆ ಜಿಲ್ಲೆಯ ಎಲ್ಲಾ ಕೆರೆಗಳಲ್ಲಿ ಇರುವ ಹೂಳನ್ನು ತೆಗೆಸಬೇಕು ಎಂದು ಒತ್ತಾಯಿಸಿದರು. ಪಕ್ಕದ ಜಿಲ್ಲೆಗಳಾದ ಕೊಪ್ಪಳ, ಗದಗ, ಜಿಲ್ಲೆಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮಿನಿ ವಿದಾನಸೌದ ನಿರ್ಮಿಸಲಾಗಿದೆ. ಆದರೆ ಬಳ್ಳಾರಿಯಲ್ಲಿ ಮಾತ್ರ ಮಿನಿ ವಿದಾನಸೌದದ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ. ಕೂಡಲೇ ಬಳ್ಳಾರಿ ನಗರದಲ್ಲಿ ಮಿನಿ ವಿದಾನಸೌದ ನಿರ್ಮಿಸಬೇಕು. ಅಲ್ಲದೇ ವೆದಾವತಿ ನದಿಗೆ ತಡೆಗೋಡೆಗಳನ್ನು ನಿಮರ್ಿಸಬೇಕು. ಹೀಗೆ ಹಲವಾರು ಬೇಡಿಕೆಗಳನ್ನು ಈ ಬಾರಿಯ ಲೋಕಸಭಾ ಅಭ್ಯರ್ಥಿಗಳಿಗೆ ಮನವಿಪತ್ರ ಸಲ್ಲಿಸಲಿದ್ದು ಇದೇ ತಿಂಗಳು 20ರೊಳಗಾಗಿ ಯಾರು ಸ್ಪಂದಿಸುತ್ತಾರೋ ಅವರಿಗೆ ರೈತಸಂಘ ಬೆಂಬಲ ನೀಡಲಿದೆ ಎಂದರು. 

ಪತ್ರಿಕಾಗೋಷ್ಟಿಯಲ್ಲಿ ರೈತಮುಖಂಡರುಗಳಾದ ಗಂಗಾವತಿ ವಿರೇಶಪ್ಪ, ಜಾಳಿಹಾಳ ಶ್ರೀಧರಗೌಡ, ಕೆ.ರಾಮನಗೌಡ, ಡಿ.ಶಿವಯ್ಯ, ಶರಣಪ್ಪಗೌಡ, ಕುಡುತಿನಿ ಪಂಪಾಪತಿ, ಕೊಂಚಗೇರಿ ಮಲ್ಲಪ್ಪ, ನಾಗೇಶಪ್ಪ ಕೊಂಚಗೇರಿ, ಕೆ.ರಾಜಶೇಖರ ಸೇರಿದಂತೆ ನೂರಾರು ರೈತಮುಖಂಡರು ಉಪಸ್ಥಿತರಿದ್ದರು.

 

ಸುದ್ದಿ ಓದಿ