ಬೈಕ್ ಕಳ್ಳರ ಬಂಧಿಸುವಲ್ಲಿ ಪೊಲೀಸರ ಯಶಸ್ವಿ
ಜಮಖಂಡಿ :ನಗರದಲ್ಲಿ ವಿವಿಧ ಕಡೆಗಳಲ್ಲಿ ಮೋಟಾರ್ ಬೈಕ್ಗಳು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಶಹರ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ನಾಗನೂರ ಗ್ರಾಮದ ಸಿದ್ದಾರ್ಥ ಸುರೇಶ ಹರಿಜನ (22)ಹಾಗೂ ತೊದಲಬಾಗಿ ಗ್ರಾಮದ ದಯಾನಂದ ಮಠಪತಿ (20) ಇಬ್ಬರು ಆರೋಪಿಗಳಿಂದ 14 ಮೋಟಾರ್ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಗಲಕೋಟ ಜಿಲ್ಲೆ ಜಮಖಂಡಿ ನಗರದ ಹಾಗೂ ವಿಜಯಪೂರ ಜಿಲ್ಲೆ ತಿಕ್ಕೋಟಾ. ವಿಜಯಪುರ ನಗರದ ಗಾಂಧಿ ಚೌಕ, ಮತ್ತು ಧಾರವಾಡ ಜಿಲ್ಲೆ ಗರಗ, ಬೆಳಗಾವಿ ಜಿಲ್ಲೆ ಕಾಗವಾಡ ವ್ಯಾಪ್ತಿಯಲ್ಲಿ ಹಲವಾರು ಬಗ್ಗೆಯ ವಿವಿಧ ಮೋಟಾರ್ ಬೈಕ್ಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 9 ಲಕ್ಷ 30 ಸಾವಿರ ರೂಪಾಯಿ ಬೆಲೆ ಬಾಳುವ ಮೋಟಾರ್ ಬೈಕ್ಗಳನ್ನು ಜಮಖಂಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಗನೂರ ಗ್ರಾಮದ ಸಿದ್ದಾರ್ಥ ಸುರೇಶ ಹರಿಜನ ಮತ್ತು ತೊದಲಬಾಗಿ ಗ್ರಾಮದ ದಯಾನಂದ ಮಠಪತಿ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಜಿಲ್ಲಾ ಎಸ್ಪಿ ಜಯಪ್ರಕಾಶ ಎ, ಹೆಚ್ಚುವರಿ ಅಧಿಕಾರಿ ಪ್ರಸನ್ನ ದೇಸಾಯಿ ಮಾರ್ಗದರ್ಶನದಲ್ಲಿ ಡಿಎಸ್ಪಿ, ಶಾಂತವೀರ ಈ, ಸಿಪಿಐ, ಗುರುನಾಥ ಚವ್ಹಾಣ. ಶಹರ ಠಾಣಿಯ ಪಿಎಸ್ಐ, ಬಸವರಾಜ ಕೊಣ್ಣೂರೆ ಆರೋಪಿಗಳನ್ನು ಬಂಧಿಸಿದ್ದಾರೆ. ಕಾಯರ್ಾಚರಣೆಯಲ್ಲಿ ಎಸ್ಐ, ಎಚ್,ಎಸ್,ಮೇಂಡಗಾರ ಸಿಬ್ಬಂದಿಗಳಾದ
ಬಿ,ಎಮ್,ಜಂಬಗಿ, ಎಚ್,ಜಿ,ಭಂಗಿ, ಪಿ,ಎಚ್,ಹನಗಂಡಿ, ಆರ್,ಕೆ, ಗಸ್ತಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪೋಲಿಸರ ಕಾರ್ಯವೈಖರಿವನ್ನು ಶ್ಲಾಘಿಸಿ ಸೂಕ್ತ ಬಹುಮಾನವನ್ನು ಡಿಎಸ್ಪಿ, ಶಾಂತವೀರ ಈ, ಅವರು ನೀಡಿದರು.