ಪಂಜಾಬ್ ಗಡಿಯಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಯತ್ನ ಬಿಎಸ್ಎಫ್ ನಿಂದ ವಿಫಲ
ನವದೆಹಲಿ, ಸೆಪ್ಟೆಂಬರ್ 12 : ಪಂಜಾಬ್ನ ಫಿರೋಜ್ಪುರ ಜಿಲ್ಲೆಯ ಅಬೋಹಾರ್ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಶನಿವಾರ ವಿಫಲಗೊಳಿಸಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ತೀವ್ರ ಎಚ್ಚರವಹಿಸಿದ್ದ ಬಿಎಸ್ಎಫ್ ಪಡೆಗಳು ಕಳ್ಳಸಾಗಾಣೆ ಯತ್ನವನ್ನು ವಿಫಲಗೊಳಿಸಿ, ಆರು ಮ್ಯಾಗಜೀನ್ಗಳೊಂದಿಗೆ ಮೂರು ಎಕೆ -47 ರೈಫಲ್ಗಳು, 91 ಜೀವಂತ ಗುಂಡುಗಳು ಒಳಗೊಂಡ ಎರಡು ಎಂ -16 ರೈಫಲ್ಗಳೊಂದಿಗೆ ನಾಲ್ಕು ಮ್ಯಾಗಜೀನ್ಗಳು, 57 ಮದ್ದುಗುಂಡುಗಳು, ನಾಲ್ಕು ಮ್ಯಾಗಜೀನ್ಗಳು ಮತ್ತು 20 ಜೀವಂತ ಮದ್ದುಗುಂಡುಗಳನ್ನು ಒಳಗೊಂಡ ಎರಡು ಪಿಸ್ತೂಲ್ಗಳನ್ನು ವಶಪಡಿಸಿಕೊಂಡಿವೆ.
ಘಟನೆಯ ಕುರಿತಂತೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ರೀತಿ, ಕಳೆದ ಒಂದು ವಾರದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಕಾಶ್ಮೀರ ಕಣಿವೆಗೆ ಸಾಗಿಸುತ್ತಿದ್ದ ಉಗ್ರರನ್ನು ಬಂಧಿಸಿ ಅಪಾರ ಶಸ್ತ್ರಾಸ್ತ್ರಗಳನ್ನು ತೀವ್ರ ಎಚ್ಚರ ವಹಿಸಿದ್ದ ಭದ್ರತಾ ಪಡೆಗಳು ವಶಪಡಿಸಿಕೊಂಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.