ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ 20: ತಾಲೂಕಿನ ವಿವಿಧ ಗ್ರಾಮಸ್ಥರು ಹಾಗೂ ಹಾವೇರಿ ಜಿಲ್ಲೆ ಸಾರ್ವಜನಿಕರಿಂದ ಬೆಂಗಳೂರಿನಲ್ಲಿ ಶನಿವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ನೂತನವಾಗಿ ಸದಸ್ಯರಾಗಿ ಆಯ್ಕೆಯಾದ ಶಿಗ್ಗಾವಿ ತಾಲೂಕಿನ ಬನ್ನೂರ ಗ್ರಾಮದ ಶಕುಂತಲಾ ಶ್ರೀಕಾಂತ ದುಂಡಿಗೌಡ್ರ ಹಾಗೂ ಗ್ರಾಮಸ್ಥರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮಹಿಳಾ ಸಮೂಹದ ಪ್ರಾಮಾಣಿಕ ಕಾರ್ಯದಿಂದ ನಾಡಿನ ಅಭಿವೃದ್ಧಿ ಪೂರಕವಾಗಿದೆ. ಪ್ರತಿ ಕಾರ್ಯದಲ್ಲಿ ಸತ್ಯ, ನಿಷ್ಟೆಯಿಂದ ಕೆಲಸ ಮಾಡುತ್ತಾರೆ. ಪ್ರಗತಿದಾಯಕದತ್ತ ಸದಾ ನಿರತರಾಗಿದ್ದಾರೆ. ಹೀಗಾಗಿ ಪ್ರತಿ ರಂಗದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನಗಳನ್ನು ನೀಡಲಾಗುತ್ತಿದೆ. ಅದರಲ್ಲಿ ಶಿಕ್ಷಕಿಯರು ನೀಡುವ ಸೇವೆ ಅಪಾರವಾಗಿದೆ. ಮಕ್ಕಳೊಂದಿಗೆ ಮಕ್ಕಳಾಗಿ ನಾಡಿನ ಏಳ್ಗೆ ಬಯಸುತ್ತಾರೆ. ಭವಿಷ್ಯದ ಸಮಾಜವನ್ನು ಉತ್ತಮವಾಗಿ ಕಟ್ಟುವ ಕಾರ್ಯ ಮಹಿಳೆಯರಿಂದ ನಡೆಯುತ್ತಿದೆ. ಹೀಗಾಗಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕ್ಷೇತ್ರ ಶಿಕ್ಷಕಿ ಶಕುಂತಲಾ ಅವರನ್ನು ನೇಮಕ
ಮಾಡಲಾಗಿದೆ. ಅವರು ಉನ್ನತವಾದ ಹುದ್ದೆ ನಿಭಾಯಿಸುತ್ತಾರೆಂಬ ವಿಶ್ವಾಸವಿದೆ ಎಂದರು.
ಗಂಜಿಗಟ್ಟಿ ಚರಮೂತೇಶ್ವರ ಮಠದ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಮುಖ್ಯಮಂತ್ರಿಗಳು ನಾಡಿಗೆ ಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ
ಕ್ಷೇತ್ರದಲ್ಲಿ ಪ್ರತಿಯೊಂದು ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಜನಮನದಲ್ಲಿ
ಉಳಿದುಕೊಂಡಿದ್ದಾರೆ. ಹೀಗಾಗಿ ಕ್ಷೇತ್ರ ನೀಡಿದ ಕೊಡುಗೆ ಅಪಾರವಾಗಿದೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರಿಗೆ ಉತ್ತಮ ಸ್ಥಾನಮಾನಗಳನ್ನು ನೀಡಿದ್ದಾರೆ ಎಂದರು.
ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಸುಮಾರು ವರ್ಷಗಳಿದ ಸಲ್ಲಿಸಿದ ಸೇವೆ ಗುರುತಿಸಿ ಉತ್ತಮ ಅವಕಾಶ ಕಲ್ಪಿಸಿದ್ದಾರೆ. ಇದು ಇಡೀ ಉತ್ತರ
ಕರ್ನಾಟಕಕ್ಕೆ ನೀಡಿದ ಕೊಡುಗೆಯಾಗಿದೆ. ಶಿಗ್ಗಾವಿ, ಸವಣೂರ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ಮಾಡಿದ ಪ್ರಗತಿ ಕಾರ್ಯಗಳನ್ನು ಜನರು ಎಂದಿಗೂ ಮರೆಯಲಾರರು ಎಂದರು.
ಬಂಕಾಪುರ ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಹಿರೇಮಣಕಟ್ಟಿ ಮುರಘೇಂದ್ರಮಠದ ವಿಶ್ವಾರಾಧ್ಯ ಸ್ವಾಮೀಜಿ, ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ನೂತನವಾಗಿ ಆಯ್ಕೆಯಾದ ಶಕುಂತಲಾ ಶ್ರೀಕಾಂತ ದುಂಡಿಗೌಡ್ರ ,ಎಚ್.ಆರ್.ದುಂಡಿಗೌಡ್ರ, ಬಸನಗೌಡ ದುಂಡಿಗೌಡ್ರ, ತಿಪ್ಪಣ್ಣ ಸಾತಣ್ಣವರ, ಕಿರಣ ಅವರಾದಿ, ಶಿವಪ್ರಸಾದ ಸುರಗೀಮಠ, ಮೋಹನ ಮೆಣಸಿನಕಾಯಿ, ಸುಭಾಸ ಚವ್ಹಾಣ, ಜಾಫರ ಪಠಾಣ, ಮಂಜುನಾಥ ಬ್ಯಾಹಟ್ಟಿ, ರಮೇಶ ವನಹಳ್ಳಿ, ದೇವಣ್ಣಾ ಚಾಕಲಬ್ಬಿ, ಜಯಣ್ಣಾ ಹೆಸರೂರ, ದತ್ತಣ್ಣಾ ವೇರ್ಣೇಕರ, ಶರೀಫಸಾಬ ನಧಾಫ, ನವೀನ ಸಾಸನೂರ, ವಿಶ್ವನಾಥ ಗಾಣಿಗೇರ, ಸಚಿನ ಕಲಾಲ ಸೇರಿದಂತೆ ಹಾವೇರಿ ಜಿಲ್ಲೆಯ ಅನೇಕ ಮುಖಂಡರು, ಗುತ್ತಿಗೆದಾರರು, ತಾಲೂಕಿನ ಸಾವಿರಾರು ಗ್ರಾಮಸ್ಥರು ಇದ್ದರು