ರಾಣೆಬೆನ್ನೂರ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಮತದಾರರ ಭೇಟಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಮತದಾರರ ಭೇಟಿ

ರಾಣಿಬೆನ್ನೂರ 17: ನವೆಂಬರ್ 21 ರಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯು ನಡೆಯಲಿದೆ. ಕಳೆದೂಂದು ತಿಂಗಳುಗಳಿಂದ ಅಧ್ಯಕ್ಷಗಾದಿ ಆಕಾಂಶೆಯಾಗಿರುವ ರಂಗಕರ್ಮಿ ಶಿಕ್ಷಕ ವೆಂಕಟೇಶ ಈಡಿಗರ ಅವರು ತಾಲೂಕು ಮತ್ತು ಜಿಲ್ಲೆಯ  ವಿವಿಧ ಶಾಲಾ ಕಾಲೇಜು ಸಾಹಿತಿಗಳು, ಕಲಾವಿದರು ಸೇರಿದಂತೆ ಕಸಾಪ ಅಜೀವ ಸದಸ್ಯರ ಮನೆ ಮನೆಗಳಿಗೆ ತಮ್ಮ ಅಪಾರ ಬೆಂಬಲಿಗರೂಂದಿಗೆ ತೆರಳಿ ಕನ್ನಡ ತಾಯಿ ಭುವನೇಶ್ವರಿಯ ಸೇವೆ ಮಾಡಲು ತಮಗೂಂದು ಬಾರಿ ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮೂಲಕ ಮತಯಾಚಿಸಿದ್ದಾರೆ.  

ಈಡಿಗರ ವೆಂಕಟೇಶ ಅವರು  ಕಲೆ, ಸಾಹಿತ್ಯ, ಸಂಗೀತ ಮತ್ತು ರಂಗ ಕ್ಷೇತ್ರದಲ್ಲಿ ತಮ್ಮ ಸಾಧನೆಯನ್ನು ಮೇರೆದಿದ್ದಾರೆ. ಶಿಕ್ಷಕರಾಗಿ ಸಂಘಟನಾ ಶಕ್ತಿಯುಳ್ಳ ಅವರು ಸಮಾಜದ ವಿವಿಧ ಸ್ಥರದಲ್ಲಿ ಸೇವಾ ಮುಖಿಯಾಗಿ ಗುರುತಿಸಿಕೂಂಡಿದ್ದಾರೆ.  ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಬಹು ಆಸೆ ಆಕಾಂಶೆ ಮತ್ತು ಗೆಲುವಿನ ನೀರೀಕ್ಷೆಯಿಂದಾಗಿ ಸ್ಪರ್ಧೆಗಿಳಿದಿದ್ದಾರೆ. ಜಿಲ್ಲಾ ಸಾಹಿತ್ಯ ಭವನದ ನಿರ್ಮಾಣ, ತಾಲೂಕು ಭವನ ಅಭಿವೃದ್ದಿ , ಹೂಬಳಿಗಳಲ್ಲಿ  ಘಟಕಗಳ ಸ್ಥಾಪನೆ, ಸದಸ್ಯತ್ವ ಸಂಖ್ಯೆ ಹೆಚ್ಚಳ, ಸಾಹಿತ್ಯಾಸಕ್ತರನ್ನು ಒಂದೇ ವೇದಿಕೆಗೆ ತರುವ ಹಂಬಲ ಇವರದಾಗಿದೆ. ಹಿರಿಯ ಸಾಹಿತಿಗಳ ಸ್ಮರಣೆ ಮತ್ತು ಗೌರವಿಸುವುದು, ಸಾಹಿತ್ಯ ಕಮ್ಮಟಗಳ ಮೂಲಕ ತರಬೇತಿ ಆಯೋಜಿಸುವುದು, ಯುವ ಪ್ರತಿಬೆಗಳಿಗೆ ತರಬೇತಿ ಮೂಲಕ ವೇದಿಕೆ ಕಲ್ಪಿಸುವುದು.  ಶಾಲಾ ಕಾಲೇಜುಗಳಲ್ಲಿ ಕನ್ನಡ ಪರ ಚಟುವಟಿಕೆಗಳನ್ನು ಆಯೋಜಿಸುವುದು, ಶಿಕ್ಷಕರು ವೃತ್ತಿ ಶಿಕ್ಷಕರಿಗೆ ಕನ್ನಡ ಪರ ತರಬೇತಿ ಸೇರಿದಂತೆ ಮತ್ತಿತರೆ ಕ್ರಿಯಾ ಯೋಜನೆಗಳನ್ನು ರೋಪಿಸುವ ಹಂಬಲವನ್ನು ಹೋಂದಿರುವ ವೆಂಕಟೇಶ ಈಡಿಗರ ಅವರು ತಮ್ಮ ವಿಚಾರಗಳನ್ನು ಪ್ರಚಾರ ಪ್ರಕಟಣೆಯಲ್ಲಿ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ