ರಾಷ್ಟ್ರೀಯ

ಜಕೀರ್ ನಾಯಕ್ ಪೀಸ್ ಟಿವಿ ಮೇಲೆ ನಿಷೇಧ...!

ಜಕೀರ್ ನಾಯಕ್  ಪೀಸ್ ಟಿವಿ ಮೇಲೆ  ನಿಷೇಧ...!

ನವದೆಹಲಿ, ಸೆ 24:   ವಿವಾದಾತ್ಮಕ ಇಸ್ಲಾಮಿಕ್ ಧರ್ಮ ಪ್ರಚಾರಕ  ಡಾ. ಜಕೀರ್ ನಾಯಕ್   ಸೇರಿದ  ಫೀಸ್ ಚಾನಲ್, ಮೊಬೈಲ್ ಆಪ್,  ಯೂಟ್ಯೂಬ್ ಚಾನಲ್ ಗಳ ಮೇಲೆ   ನಿಷೇಧ ವಿಧಿಸಲು  ಪ್ರಧಾನಿ  ನರೇಂದ್ರ  ಮೋದಿ  ನೇತೃತ್ವದ ಕೇಂದ್ರ ಸರ್ಕಾರ  ಗಂಭೀರವಾಗಿ  ಆಲೋಚಿಸುತ್ತಿದೆ. 

ತನ್ನ  ನೆಟ್ ವರ್ಕ್ ಮೂಲಕ ಧರ್ಮೋಪದೇಶ ನೀಡುವ, ಅನ್ಯಧರ್ಮಗಳ ಬಗ್ಗೆ  ಧ್ವೇಷ ಪೂರಿತ  ಭಾಷಣಗಳ ಮೂಲಕ ಪ್ರಚಾರ ನಡೆಸುತ್ತಿದ್ದಾರೆ ಎಂಬ ಆರೋಪಗಳು   ಜಕೀರ್    ವಿರುದ್ದ ಕೇಳಿಬರುತ್ತಿವೆ.ಆದರೆ,  ಜಕೀರ್ ನಾಯಕ್ ಸಂಬಂಧಿಸಿದ   ಆಪ್  ನಿಷೇಧಿಸುವ  ಆಲೋಚನೆ  ಕೇಂದ್ರ  ಗೃಹ  ಸಚಿವಾಲಯ ಹೊಂದಿದೆ ಎಂದು ತಿಳಿದುಬಂದಿದೆ.  

ಭಾರತದಿಂದ  ಪರಾರಿಯಾಗಿ,  ಪ್ರಸ್ತುತ  ಮಲೇಷಿಯಾದಲ್ಲಿ  ನೆಲೆಸಿರುವ ಜಕೀರ್,  ಪೀಸ್ ಟಿವಿಯ  ತಮ್ಮ ಭಾಷಣಗಳಿಂದ  ಮುಸ್ಲಿಂ  ಯುವಕರನ್ನು   ಪ್ರಚೋದಿಸುತ್ತಿದ್ದಾರೆ ಎಂದು ಗುಪ್ತಚರ  ಸಂಸ್ಥೆ  ತನ್ನ ವರದಿಯಲ್ಲಿ ತಿಳಿಸಿದೆ. ಪೀಸ್ ಟಿವಿ  ನೆಟ್ ವರ್ಕ್   ಜಿಹಾದಿ ಗುಂಪುಗಳೊಂದಿಗೆ  ಸಂಬಂಧ ಹೊಂದಿದೆ  ಎಂದು   ಐಬಿ ತಿಳಿಸಿದೆ.  ತಮ್ಮ  ಧರ್ಮ  ಪ್ರಚಾರ  ಮುಂದುವರಿಸಲು  ನಿಯಮಿತವಾಗಿ ಅರಬ್ ದೇಶಗಳಿಂದ  ಪೀಸ್ ಟಿವಿಗೆ  ಹಣ ಹರಿದುಬರುತ್ತಿದೆ ಎಂದು  ಐಬಿ ತನ್ನ ವರದಿಯಲ್ಲಿ ತಿಳಿಸಿದೆ.


ಸುದ್ದಿ ಓದಿ