ಹೊಸಪೇಟೆ

ಯುವಕರಿಗೆ ರಂಗಭೂಮಿಯ ಶಿಸ್ತು ಬೇಕು: ಆನಂದ ಪುರೋಹಿತ

ಯುವಕರಿಗೆ ರಂಗಭೂಮಿಯ ಶಿಸ್ತು ಬೇಕು: ಆನಂದ ಪುರೋಹಿತ

ಹೊಸಪೇಟೆ 29: ಇಂದಿನ ಯುವಕರಿಗೆ ರಂಗಭೂಮಿಯ ಶಿಸ್ತು ಬೇಕು ನಾಟಕಗಳು ಅವರನ್ನು ಶಿಸ್ತಿನ ಸಿಪಾಯಿಗಳನ್ನಾಗಿ ಮಾಡುತ್ತವೆ ಎಂದು ಆನಂದ ಪುರೋಹಿತ ಹೇಳಿದರು. 

ಅವರು ದಿ. 28 ರಂದು ಸಂಜೆ 6:30ಕ್ಕೆ ಹೊಸಪೇಟೆ ತಾಲೂಕಿನ ಕಾರಿಗನೂರಿನಲ್ಲಿ ಕೃತಿ ಆಕೃತಿ ಕಲಾ ಟ್ರಸ್ಟ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಏರಿ​‍್ಡಸಲಾದ ನಿರ್ದಿಗಂತ ಮೈಸೂರು ತಂಡದ “ತಿಂಡಿಗೆ ಬಂದ ತುಂಡೇರಾಯ” ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. 

ಸಮಾರಂಭದಲ್ಲಿ ಊರಿನ ಮುಖಂಡರಾದ ವೆಂಕಟೇಶಪ್ಪ, ಶ್ರೀಪಾದ್ ಭಟ್, ಸುರೇಶ್ ಹಾಗೂ ಎಸ್‌.ಟಿ.ಎಮ್‌.ಸಿ ಅಧ್ಯಕ್ಷರಾದ ಬಿ.ಮಂಜುನಾಥ್, ನಗರಸಭೆ ಸದಸ್ಯರಾದ ಗಂಗಮ್ಮ ನಾಗೇಂದ್ರ ಇದ್ದರು. ನಂತರ ಮೈಸೂರಿನ ನಿರ್ದಿಗಂತ ತಂಡದಿಂದ ಬ್ರೆಕ್ಟ್‌ನ ಮೂಲ ರಚನೆಯ, ಶಕೀಲ್ ಅಹ್ಮದ್ ಅವರ ಪರಿಕಲ್ಪನೆ ವಿನ್ಯಾಸ ಮತ್ತು ನಿರ್ದೇಶನದ “ತಿಂಡಿಗೆ ಬಂದ ತುಂಡೇರಾಯ” ನಾಟಕ ಪ್ರದರ್ಶನವಾಯಿತು. ಉತ್ಸಾಹಿ ರಂಗನಿರ್ದೇಶಕರಾದ ಕಲ್ಲಪ್ಪ ಪೂಜಾರ್ ಹಾಗೂ ಪಿ.ಅಬ್ದುಲ್ ಬಂದು ಕಲಾವಿದರನ್ನು ಗೌರವಿಸಿ ಸನ್ಮಾನಿಸಿದರು. ಕೃತಿ ಆಕೃತಿ ಕಲಾ ಟ್ರಸ್ಟ್‌ ಅಧ್ಯಕ್ಷರಾದ ಸೋಮಶೇಖರ ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನು ಹಂಚಿಕೊಂಡರು. 


ಸುದ್ದಿ ಓದಿ