ಬೆಳಗಾವಿ

ಗಾಂಜಾ ಮಾರಾಟ ಆರೋಪ: ಯುವಕ ಬಂಧನ, 250 ಗ್ರಾಂ ಗಾಂಜಾ ವಶ

ಗಾಂಜಾ ಮಾರಾಟ ಆರೋಪ: ಯುವಕ ಬಂಧನ, 250 ಗ್ರಾಂ ಗಾಂಜಾ ವಶ

ಲೋಕದರ್ಶನ ವರದಿ 

ಬೆಳಗಾವಿ, ಆ. 7: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಮಾರಿಹಾಳ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವ ಯುವಕನನ್ನು ಬಂಧಿಸಿ, 250 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.  

ಆಗಸ್ಟ್‌ 6ರಂದು ಮುಚ್ಚಂಡಿ ಗ್ರಾಮದ ್ಕ್ದಸ್ಲಸದಿಳ್ತಹಿ್ದೈ್ಲ್ಘ್ಣು್ಧ್ಘೂ ರಸ್ತೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ, ಪ್ರಕಾಶ ಅರ್ಜುನ್ ಬಂಗಾರಿ (21) ಎಂಬಾತನನ್ನು ಪಿಎಸ್‌ಐ ಮಂಜುನಾಥ ಹುಲಕುಂದ ಅವರ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.  

ಬಂಧಿತನಿಂದ ಸುಮಾರು 250 ಗ್ರಾಂ ಗಾಂಜಾ (ಅಂದಾಜು ಮೌಲ್ಯ ?13,000) ವಶಪಡಿಸಿಕೊಳ್ಳಲಾಗಿದೆ.  ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 119/2026ರಡಿ ಎನ್ಡಿಪಿಎಸ್ ಕಾಯ್ದೆ (ಓಆಕಖ ಂಛಿಣ) ಕಲಂ 20(ಛ)()(ಂ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. 


ಸುದ್ದಿ ಓದಿ