ಲೇಖನಗಳು

ನಿಮ್ಮ ನೆನೆದಾಗಲೇ ಉದಯ; ನಿಮ್ಮ ಮರೆವೇ ಅಸ್ತಮಾನ

ನಿಮ್ಮ ನೆನೆದಾಗಲೇ ಉದಯ; ನಿಮ್ಮ ಮರೆವೇ ಅಸ್ತಮಾನ

( 2025, ನವ್ಹೆಂಬರ 13 ಕೆಎಲ್‌ಇ ಸಂಸ್ಥೆಗೆ 110ನೇ ಸಂಸ್ಥಾಪನಾ ದಿನಾಚರಣೆ) 

ಕೆಎಲ್‌ಇ ಸಂಸ್ಥೆ ಮರುಚಿಂತನೆ 

ಇಂದು ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡ ಪ್ರತಿಷ್ಠಿತ  ಶಿಕ್ಷಣ ಸಂಸ್ಥೆ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ. ಬೆಳಗಾವಿ ಇದರ ಕೇಂದ್ರ ಕಚೇರಿ. ಇದು ಪಾರಂಭವಾಗಿ 109 ವರ್ಷಗಳೇ ಕಳೆದಿವೆ. ಏಳು ಜನ ಶಿಕ್ಷಕರು ಯಾವುದೇ ಬಂಡವಾಳ ಇಲ್ಲದ ಕಾಲದಲ್ಲಿ ಛಲದಿಂದ, ಸ್ವಾರ್ಥತ್ಯಾಗಗಳಿಂದ, ಸಮಾಜದ ಅಭ್ಯುದಯಕ್ಕಾಗಿ ಕಟ್ಟಿ ಬೆಳೆಸಿದರು. ಅವರಿಗೆ ಭೀಮಶಕ್ತಿಯಾಗಿ ಪ್ರೇರಣೆ ನೀಡಿದವರು ಆಗಿನ ಬೆಳಗಾವಿ ಜಿಲ್ಲೆಯ ಡೆಪ್ಯುಟಿ ಜಿಲ್ಲಾ ಕಲೆಕ್ಟರ್ ರಾವಬಹದ್ದೂರ ಅರಟಾಳ ರುದ್ರಗೌಡರು. ಇವರ ಬೆಂಬಲಕ್ಕೆ ನಿಂತವರು ಶ್ರೀಮಂತ ವಿ.ಜಿ.ನಾಯಿಕ ಬಹದ್ದೂರ ದೇಸಾಯಿ-ಚಚಡಿ ಹಾಗೂ ಬೆಳಗಾವಿಯ ಶ್ರೀಮಂತ ವೈಜಪ್ಪ ಅನಿಗೋಳ ಅವರು. ಕೆ.ಎಲ್‌.ಇ. ಸಂಸ್ಥೆಯ ಸ್ಥಾಪನೆಗೆ ಮುಂದಾದವರು ಪಂಡಿತಪ್ಪ ಚಿಕ್ಕೋಡಿ ಅವರು, ಇವರೇ ಬೆಳಗಾವಿಯ “ಬೆಳಗಾಂವ ಸಮಾಚಾರ” ಎಂಬ ಅತೀ ಹಳೆಯ ಪತ್ರಿಕೆ (ಇಂದಿಗೂ ಪ್ರಕಟವಾಗುತ್ತಿದೆ)ಯಲ್ಲಿ ಶಿಕ್ಷಕರ ನೇಮಕಾತಿಗೆ ಜಾಹೀರಾತು ಕೊಟ್ಟರು. ನಂತರ ಅವರ ಸಂದರ್ಶನಕ್ಕಾಗಿ ಬೆಳಗಾವಿ ರವಿವಾರ ಪೇಟೆಯಲ್ಲಿರುವ ಕಲ್ಮಠದಲ್ಲಿ ಸಭೆ ಕರೆದರು. ಅರ್ಜಿ ಹಾಕಿದವರು ಅದೇ ತಾನೇ ಪುಣೆ-ಮುಂಬಯಿಗಳಲ್ಲಿ ವೀರಶೈವ ಆಶ್ರಮಗಳಲ್ಲಿದ್ದು, ವಿದ್ಯಾರ್ಥಿಗಳಿಗೆ ಟ್ಯೂಶನ್ (ಶಿಕವಣಿ) ಹೇಳಿ ಅಷ್ಟಿಷ್ಟು ಸಂಪಾದನೆ ಮಾಡಿ ಕಾಲೇಜು ಫೀ ಕಟ್ಟಿ ಬಿ.ಎ., ಬಿ.ಎಸ್‌.ಸಿ., ಎಂ.ಎಂ., ಎಲ್‌.ಎಲ್‌.ಬಿ. ಮುಂತಾದ ಪದವಿ ಶಿಕ್ಷಣ ಪಡೆದವರು. ಇವರಲ್ಲಿ ಪಂಡಿತಪ್ಪ ಚಿಕ್ಕೋಡಿ, ಪ್ರೊ, ಎಂ.ಆರ್‌.ಸಾಖರೆ, ಬಿ. ಬಿ. ಮಮದಾಪುರ ಬೆಳಗಾವಿ ಜಿಲ್ಲೆಯವರಾದರೆ, ಪ್ರೊ. ಶಿ.ಶಿ.ಬಸವನಾಳ, ಎಚ್‌.ಎಫ್‌.ಕಟ್ಟಿಮನಿ, ಬಿ. ಎಸ್‌. ಹಂಚಿನಾಳ, ಸರದಾರ ವೀರನಗೌಡ ಪಾಟೀಲರು ಅಂದಿನ ಅಖಂಡ ಧಾರವಾಡ ಜಿಲ್ಲೆಗೆ ಸೇರಿದವರಾಗಿದ್ದರು. ಇವರಲ್ಲಿ ಬಹುತೇಕರು ಲಿಂ. ಅರಟಾಳ ರುದ್ರಗೌಡರು ಮತ್ತು ಗಿಲಗಂಚಿ ಗುರುಸಿದ್ದಪ್ಪನವರು ಸೇರಿ ಸ್ಥಾಪಿಸಿದ “ಲಿಂಗಾಯತ ಫಂಡದಿಂದ ಶಿಷ್ಯವೇತನ ಪಡೆದು ಪದವೀಧರರಾದವರು. ಅವರ ಮೇಲೆ ಸಮಾಜದ ಋಣಭಾರವಿತ್ತು. ಅದನ್ನು ಹೇಗೆ ಸಮಾಜಕ್ಕೆ ಮರಳಿ ನೀಡುವದು ಎಂಬುದೇ ಅವರ ಚಿಂತನೆಯಾಗಿತ್ತು. ಅಂತೆಯೇ ಸಮಾನ ಮನಸ್ಕರಾದ ಆ ಏಳು ಜನ ಶಿಕ್ಷಕರು ಬ್ರಿಟಿಷ ಆಡಳಿತದಲ್ಲಿ ಸುಲಭವಾಗಿ ದಕ್ಕುತ್ತಿದ್ದ ಉನ್ನತ ಹುದ್ದೆಗಳಿಗೆ ಆಶ ಪಡದೇ ಯಾವ ಖಚಿತ ವೇತನದ ಭರವಸೆ ಇಲ್ಲದಾಗಲೂ ಮಾಸ್ತರಿಕೆ ಮಾಡಲು ಒಪ್ಪಿದ್ದು, ಬೆಳಗಾವಿಯಲ್ಲಿಯೇ ಶಿಕ್ಷಣ ಸಂಸ್ಥೆ ಸ್ಥಾಪಿಸಲು ನಿರ್ಧರಿಸಿದ್ದು, ಮನೆ-ಮನೆಗಳಿಗೆ ತಿರುಗಾಡಿ ದಾನ ಸಂಗ್ರಹಿಸಿ ಸಂಸ್ಥೆಗೆ ಭದ್ರ ಅಡಿಪಾಯ ಹಾಕಿದ್ದು ಲಿಂಗಾಯತರು ಕಣ್ಣಾರೆ ಕಂಡಿದ್ದಾರೆ. ಇಷ್ಟೇ ಅಲ್ಲದೇ ಅವರು ಬರೀ ಶಾಲೆ ಕಲಿಸುವದನ್ನೇ ಗುರಿಯಾಗಿಸಿಕೊಳ್ಳದೇ, ಅಖಂಡ ಕರ್ನಾಟಕ ನಿರ್ಮಾಣಕ್ಕೆ ಪಣತೊಟ್ಟು ಹೋರಾಟ ಮಾಡಿದರು. ಮರಾಠಿಗರ ನಡುವೆ ನೆಲೆನಿಂತು ಕನ್ನಡದ ನಂದಾದೀಪ ಬೆಳಗಿದರು. ತಾವು ಸ್ಥಾಪಿಸಿದ ಮೊದಲ ಶಾಲೆಗೆ ಗಿಲಗಂಚಿ ಗುರುಸಿದ್ದಪ್ಪನವರು ಹಾಗೂ ಅರಟಾಳ ರುದ್ರಗೌಡರ ನಾಮಕರಣ ಮಾಡಿದರು. ತಾವು ಆರಂಭಿಸಿದ ಮೊದಲ ಕಾಲೇಜಿಗೆ ಸಿರಸಂಗಿ ಲಿಂಗರಾಜರ ನಾಮಕರಣ ಮಾಡಿದರು. ನೋಡಿ, ಅವರು ಎಷ್ಟೊಂದು ಉದಾತ್ತ ವಿಚಾರಗಳ ಸಂಗಮವಾಗಿದ್ದರು. ಅಂದು ಅವರು ಹೊತ್ತಿಸಿದ “ಜ್ಞಾನಜ್ಯೋತಿ” ಇಂದು ವಿಶ್ವದ ತುಂಬ ಬೆಳಕು ನೀಡುವಲ್ಲಿ ಸಫಲವಾಗಿದೆ. 

ಈ ಸಂಸ್ಥೆಯ ಬೆಳವಣಿಗೆಯಲ್ಲಿ ಮೂರು ಕಾಲಘಟ್ಟಗಳನ್ನು ಗುರುತಿಸಬಹುದು  1) 1916-1944 28 ವರ್ಷಗಳು 2) 1945-1984 30 ವರ್ಷಗಳು 3) 1984- 2025 41 ವರ್ಷಗಳು.  ಮೊದಲನೇ ಕಾಲಘಟ್ಟದಲ್ಲಿ ಮಹತ್ವದ ಯೋಗದಾನ ನೀಡಿದವರು ಅರಟಾಳ ರುದ್ರಗೌಡರು, ಏಳು ಜನ ಶಿಕ್ಷಕರು, ಶ್ರೀಮಂತ ಚಚಡಿ ದೇಸಾಯರು, ಶ್ರೀಮಂತ ವೈಜಪ್ಪ ಆನಿಗೋಳ ಅವರು, ಸರ್ ಸಿದ್ದಪ್ಪ ಕಂಬಳಿಯವರು, ಲಕ್ಷ್ಮಣರಾವ್ ಟೊಣ್ಣನವರ, ಕೆಲವು ಬ್ರಿಟಿಷ ಅಧಿಕಾರಿಗಳು ಉದಾರವಾಗಿ ದಾನ ನೀಡಿ ಸಾಮಾಜಿಕ ಕಳಕಳಿ, ಶಿಕ್ಷಣ ಪ್ರೀತಿ ಮೆರೆದ ಪುಣ್ಯಾತ್ಮರು. ಇವರಿಗೆ ಪುಣೆಯಲ್ಲಿ ಲೋಕಮಾನ್ಯ ಟಿಳಕರು ಸ್ಥಾಪಿಸಿದ್ದ “ಡೆಕ್ಕನ್ ಎಜ್ಯುಕೇಶನ್ ಸೊಸೈಟಿ” ಆದರ್ಶವೆನಿಸಿತ್ತು. ಅದನ್ನೇ ‘ಮಾಡೆಲ್‌’ ಆಗಿ ತೆಗೆದುಕೊಂಡು ಆ ಸಂಸ್ಥೆಯ ನಿಯಮಾವಳಿಗಳ ಮಾದರಿಯಲ್ಲಿ ಘಟನೆ ಸಂವಿಧಾನ ರಚಿಸಿದರು. 1917ರಲ್ಲಿ ಸರಕಾರದಲ್ಲಿ ಸಂಸ್ಥೆಯನ್ನು ನೋಂದಾಯಿಸಿದರು. ಕೆಎಲ್‌ಇ ಸಂಸ್ಥೆಯ ಸಂಸ್ಥಾಪಕ ಸಪ್ತಋಷಿಗಳು ಪ್ರಾರಂಭದಲ್ಲಿ ಬೆಳಗಾವಿ ಕೋಟೆ ಒಳಗಿನ ಬಂಗ್ಲೆ ನಂ.24ನ್ನು ಭಾಡಿಗೆಗೆ ಪಡೆದರು. 1927-28ರ ಸುಮಾರಿಗೆ ಇಂದಿನ ಲಿಂಗರಾಜ ಕಾಲೇಜ ಇರುವ ಕ್ಯಾಂಪಸ್‌-17 ಎಕರೆ ನಿವೇಶನವನ್ನು 30,000 ರೂ.ಗಳಿಗೆ ಖರೀದಿ ಪಡೆದರು. ಮುಂದುವರೆದು ಮತ್ತೇ 8 ಎಕರೆ ಖರೀದಿಸಿದರು. 1930ರಲ್ಲಿ  ಬ್ರಿಟೀಷ ಮಾದರಿಯಲ್ಲಿ ಲಿಂಗರಾಜ ಕಾಲೇಜ ಕಟ್ಟಡ ನಿರ್ಮಿಸಿದರು. ಅದೂ ಬರೀ 80,000 ರೂ. ಗಳಲ್ಲಿ ನಂಬ್ತೀರಾ! ಅಂದು ಪ್ರಾರಂಭಗೊಂಡ ಕೆ.ಎಲ್‌.ಇ. ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯದಂತೆ ವಿಸ್ತರಿಸುತ್ತಲೇ ನಡೆದಿದೆ. ಇದೆಲ್ಲ ಸಾಧಿಸಲು ಆ ಏಳು ಜನ ಶಿಕ್ಷಕರು ತಮ್ಮ ಮನೆ-ಮಠ ತೊರೆದು ಬದುಕಿದರು. ಪ್ರಾರಂಭದ ವರ್ಷಗಳಲ್ಲಿ ಎಲ್ಲರೂ ಸೇರಿ ಒಂದೇ ಕಡೆಗೆ (ಬೆಳಗಾವಿಯ ಖಡೇಬಜಾರ್‌ನ ಭೋಜನ್ನವರ ಮನೆಯಲ್ಲಿದ್ದು) ಜೂನ 1917ರಿಂದ ಪ್ರತಿ ತಿಂಗಳು 150 ರೂ.ಗಳಂತೆ ಕೆಲವು ವರ್ಷ ಪಡೆದರೆ, 1918ರಿಂದ ತಲಾ 35/- ರೂ.ಗಳಂತೆ, ನಂತರ ತಲಾ 50/- ರೂ.ಗಳಂತೆ ವೇತನ ಪಡೆದುಕೊಂಡರು. ಅವರು ಒಂದೇ ಕಡೆ ವಾಸ ಮಾಡಿ ಅಡುಗೆ ಮಾಡಿಕೊಂಡು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ ರೀತಿ ಅನನ್ಯವೆನಿಸಿದೆ. ಅವರು ಮಾಡಿರುವ ತ್ಯಾಗ ! ಗುರು ವಿರಕ್ತರೂ ಮಾಡಲಾರದಷ್ಟು ತ್ಯಾಗ. ಒಬ್ಬರು ಎಚ್‌. ಎಫ್‌. ಕಟೀಮನಿಯವರು ಎಂ.ಎಲ್‌.ಸಿ.  ಆಗಿದ್ದರು, ಇನ್ನೊಬ್ಬರು ಬಿ. ಬಿ. ಮಮದಾಪುರ ಎಂ.ಎಲ್‌.ಸಿ. ಆಗಿದ್ದರು, ಪಂಡಿತಪ್ಪ ಚಿಕ್ಕೋಡಿ ಡಿಸ್ಟಿಕ್ಟ್‌ ಲೋಕಲ್ ಬೋರ್ಡ ಚೇರಮನ್ ಆಗಿದ್ದರು. ನೋಡಿ ಅವರು ಏರಿದ ಎತ್ತರ, ಸಮಾಜ ಅವರನ್ನು ಗುರುತಿಸಿದ ರೀತಿ ಅದ್ಭುತ ಮತ್ತು ಅಪ್ರತಿಮ ಎನಿಸಿತು. ಅದಕ್ಕೇ ಅವರು “ಸಪ್ತರ್ಷಿ”ಗಳಾಗಿ ಜನಮಾನಸದಲ್ಲಿ ನೆಲೆಯೂರಿದರು. ಕನ್ನಡ ಕಟ್ಟಿದ ಪುಣ್ಯಪುರುಷರೆನಿಸಿದರು. 

ಈ ಏಳು ಜನ ಬರಿಗೈ ಬಂಟರು  ರಾವಬಹದ್ದೂರ ಅರಟಾಳ ರುದ್ರಗೌಡರಿಗೆ ಶಾಲೆ ಪ್ರಾರಂಭಿಸಲು ದುಂಬಾಲು ಬೀಳದೆ ಹೋಗಿದ್ದರೆ, ಇವರ ತಾಳ್ಮೆ ಮತ್ತು ಮನೋಬಲವನ್ನು ಪರೀಕ್ಷಿಸಿ ಶಾಲೆ ಪ್ರಾರಂಭಿಸಲು ರೂ.2727-04 ಮತ್ತು ವೈಯಕ್ತಿಕ 400 ರೂ.ಗಳ ಧನಸಹಾಯ ಮಾಡದೆ ಹೋಗಿದ್ದರೆ, ಅರಟಾಳ ರುದ್ರಗೌಡರು ಎ ವಿ ಶಾಲೆಯನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿರಲಿಲ್ಲ.  ಸರ್ ಸಿದ್ದಪ್ಪ ಕಂಬಳಿ ಸಾಹೇಬರು ಮುಂಬಯಿ ಸರಕಾರದಲ್ಲಿ ಮಂತ್ರಿಗಳಾಗಿದ್ದ ಕಾಲದಲ್ಲಿ ತಮ್ಮ ಪ್ರಭಾವ ಬೀರಿ ಲಿಂಗರಾಜ ಕಾಲೇಜಿಗೆ ಅನುಮತಿ ದೊರಕಿಸಿ ಕೊಡದೇ ಹೋಗಿದ್ದರೆ, ವಂಟಮುರಿ ಸಂಸ್ಥಾನದ ಲಖಮಗೌಡರು ಆಗಿನ ಕಾಲದಲ್ಲಿ ಮೊದಲ ದಾನವಾಗಿ 20,000 ರೂ.ಗಳ ಧನಸಹಾಯ ಮಾಡದೇ ಹೋಗಿದ್ದರೆ, ಬೆಳಗಾವಿಯ ಕಾಳಿ- ಅಮರಾಯಿ ಪ್ರದೇಶದಲ್ಲಿ 17 ಎಕರೆ+ ನಿವೇಶನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಸಿರಸಂಗಿ ಲಿಂಗರಾಜ  ಟ್ರಸ್ಟ್‌ 50,000 ರೂ.ಗಳ ಧನಸಹಾಯ ಮಾಡದೇ ಹೋಗಿದ್ದರೆ ಲಿಂಗರಾಜ ಹಾಸ್ಟೆಲ್ ಕಟ್ಟಡ ಬರುತ್ತಿರಲಿಲ್ಲ. ಹೀಗೆ ಸಪ್ತರ್ಷಿಗಳ ನೇರ ಮತ್ತು ಪ್ರತ್ಯಕ್ಷ ಆಡಳಿತದ ಅವಧಿಯಲ್ಲಿ ಸಮಾಜದ ಇತರೆ ವ್ಯಕ್ತಿಗಳ  ಯಾವ ಹಸ್ತಕ್ಷೇಪವಿರಲಿಲ್ಲ. ನಿಯಮಾವಳಿ ಪ್ರಕಾರ ಆಡಳಿತ ನಡೆಸುವ ಎಲ್ಲ ಅಧಿಕಾರಗಳೂ ಆಜೀವ ಸದಸ್ಯರಿಗೆ ಕೊಡಲ್ಪಟ್ಟಿದ್ದವು. ಕೆ.ಎಲ್‌.ಇ. ಸಂಸ್ಥೆ ತನ್ನ ಮೊದಲ ಅಂಗ ಸಂಸ್ಥೆ “ಗಿಲಗಂಚಿ ಅರಟಾಳ ಎ.ವಿ.ಸ್ಕೂಲ್‌”ನ್ನು ಪ್ರಾರಂಭಿಸುವ ಪೂರ್ವದಲ್ಲಿ ರಾ. ಬ. ಅರಟಾಳ ರುದ್ರಗೌಡರು 1883ರಲ್ಲಿ ಲಿಂಗಾಯತ ಫಂಡ ಸಂಗ್ರಹಿಸಿ ಬಡವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಶಿಷ್ಯವೇತನ ನೀಡುವ ವ್ಯವಸ್ಥೆ ಮಾಡಿದರು. ಧಾರವಾಡದಲ್ಲಿ ಸರಕಾರಿ ಕಾಲೇಜು ಪ್ರಾರಂಭಿಸಲು ಲಿಂಗಾಯತರಿಂದ ಸರಕಾರಕ್ಕೆ 90,000 ರೂ.ಸಂಗ್ರಹಿಸಿಕೊಟ್ಟರು. ಕೊಡುವ ಪೂರ್ವದಲ್ಲಿ ಆ ಹಣವನ್ನು ಬ್ಯಾಂಕಿನಲ್ಲಿ ಸುರಕ್ಷಿತವಾಗಿ ಠೇವು ಮಾಡಿದರು. ಅದರಿಂದ ಸಂಗ್ರಹವಾದ ಬಡ್ಡಿ ಹಣ ಮತ್ತು ತಮ್ಮ ಸ್ವಂತ 400 ರೂ.ಗಳ ಕಾಣಿಕೆಯನ್ನು ಸೇರಿಸಿ ಆ ಏಳು ಜನ ಶಿಕ್ಷಕರಿಗೆ ನೀಡಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು. ಉತ್ತರ ಕರ್ನಾಟಕದ ಲಿಂಗಾಯತರು ಏಕಕಾಲಕ್ಕೆ ಧಾರವಾಡದಲ್ಲಿ ಕರ್ನಾಟಕ ಕಾಲೇಜು ಪ್ರಾರಂಭಿಸಲು ಮತ್ತು ಬೆಳಗಾವಿಯಲ್ಲಿ ಕೆ.ಎಲ್‌.ಇ. ಸಂಸ್ಥೆ ಮತ್ತು ಜಿ.ಎ.ಹೈಸ್ಕೂಲ ಪ್ರಾರಂಭಿಸಲು ಉದಾರವಾಗಿ ದಾನ ನೀಡಿದರು. ಅಲ್ಲಿಂದ ಮುಂದೆ ಬೆಳಗಾವಿಯಲ್ಲಿ ಇತರ ಸಮಾಜಗಳು ಶೈಕ್ಷಣಿಕವಾಗಿ ಜಾಗೃತಗೊಂಡು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದವು. ಅಂತೆಯೇ ಇಂದು ಬೆಳಗಾವಿ ಶಿಕ್ಷಣದ ಕಾಶಿ ಎನಿಸಿದೆ. 

ಪ್ರಾ.ಬಿ.ಎಸ್‌.ಗವಿಮಠ 

ನಿವೃತ್ತ ಆಜೀವ ಸದಸ್ಯರು, ಕೆಎಲ್‌ಇ ಸಂಸ್ಥೆ 

ಸಿ ಕನ್ನಡದ ನೆಲದಲ್ಲಿಯೇ ಕನ್ನಡ ಅನಾಥವಾಗಿ, ಬಲಹೀನವಾಗಿದ್ದನ್ನು ಕಂಡ ಕೆ.ಎಲ್‌.ಇ. ಸಂಸ್ಥಾಪಕರು 1916 ರಲ್ಲಿ ಗಿಲಗಂಚಿ ಅರಟಾಳರ ಹೆಸರಿನಲ್ಲಿ ಹೈಸ್ಕೂಲು ಪ್ರಾರಂಭಿಸಿದರು 

ಸಿ ಕೆ.ಎಲ್‌.ಇ. ಸಂಸ್ಥೆಯ ಧ್ಯೇಯ - ಸತ್ಯ, ಪ್ರೇಮ, ಸೇವೆ, ಸ್ವಾರ್ಥತ್ಯಾಗ ಸಿದ್ಧಾಂತದ ತಳಹದಿಯ ಮೇಲೆ ರೂಪಗೊಂಡಿದೆ.  

ಸಿ ಕೆಎಲ್‌ಇ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಪಡೆದವರು ಚರಿತ್ರೆ ಅರಿತು ಚರಿತ್ರೆ ನಿರಿ​‍್ಮಸಿದ್ದಾರೆ. ಅಪ್ರತಿಮ ಸಾಧನೆಗಳನ್ನು ಮಾಡಿದ್ದಾರೆ. ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಕೈಗಾರಿಕಾ ಉದ್ಯಮಗಳನ್ನು ಸ್ಥಾಪಿಸಿದ್ದಾರೆ, ಸರಕಾರದಲ್ಲಿ ಮಂತ್ರಿಗಳಾಗಿದ್ದಾರೆ, ಮುಖ್ಯಮಂತ್ರಿಗಳೂ ಆಗಿದ್ದಾರೆ. ಇಂದು ಕೆ.ಎಲ್‌.ಇ. ಸಂಸ್ಥೆ ಒಂದು ಬೃಹತ್ ಶೈಕ್ಷಣಿಕ ಜಾಲ ನಿರಿ​‍್ಮಸಿದೆ. ರಾಷ್ಟ್ರದಲ್ಲಿಯೇ ಅತ್ಯಂತ ಗುಣಮಟ್ಟದ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿದೆ. 

ಸಿ 1933ರಲ್ಲಿ ಬೆಳಗಾವಿಯಲ್ಲಿ ಲಿಂಗರಾಜ ಕಾಲೇಜಿನ ಸ್ಥಾಪನೆಯಾಯಿತು. ಇದು ಉತ್ತರ ಕರ್ನಾಟಕದ ಪ್ರಥಮ ಪದವಿ ಕಾಲೇಜು. 

ಕೆಎಲ್‌ಇ ಸಂಸ್ಥೆಗೆ 110ನೇ ಸಂಭ್ರಮ 

 

ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಶತಮಾನೋತ್ಸವದ ಆಚರಿಸಿಕೊಂಡು ಮುನ್ನಡೆದಿದೆ. ಸಾಗರದಾಚೆಗೂ ಬೆಳೆದು ಇಂದು ವಿಶ್ವದಜೆರ್ಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. 1916 ರಂದು ಏಳು ಜನ ಶಿಕ್ಷಕರ ನಿಸ್ವಾರ್ಥ ತ್ಯಾಗ ಸೇವೆಯಿಂದ ಸಾಕಾರಗೊಂಡ ಸಂಸ್ಥೆ ರಾಷ್ಟ್ರದ ಶೈಕ್ಷಣಿಕ ಹಸಿವನ್ನು ನೀಗಿಸಿದೆ. ಪ್ರೊ.ಎಂ.ಆರ್‌.ಸಾಖರೆ, ಪ್ರೊ.ಶಿ.ಶಿ.ಬಸವನಾಳ, ಡಾ.ಎಚ್‌.ಎಫ್‌.ಕಟ್ಟಿಮನಿ, ಬಿ.ಬಿ.ಮಮದಾಪೂರ, ಪಂಡಿತಪ್ಪ ಚಿಕ್ಕೋಡಿ, ಬಿ.ಎಸ್‌.ಹಂಚಿನಾಳ, ಸರದಾರ ವೀರನಗೌಡ ಪಾಟೀಲರನ್ನು ಕೆ.ಎಲ್‌.ಇ.ಸಂಸ್ಥೆ “ಸಪ್ತರ್ಷಿ”ಗಳೆಂದು ಕರೆದು ಗೌರವಿಸಿದೆ. ಈ ಸಪ್ತರ್ಷಿಗಳಿಗೆ ಸರ್ವವಿಧದ ಬೆಂಬಲ ಹಾಗೂ ಮಾರ್ಗದರ್ಶನ ಮಾಡಿದವರು ರಾವಬಹದ್ದೂರ ಅರಟಾಳ ರುದ್ರಗೌಡರು, ಚಚಡಿಯ ರಾವಬಹದ್ದೂರ ವಿ.ಜಿ.ದೇಸಾಯರು, ಶ್ರೀಮಂತ ವೈಜಪ್ಪ ಆನಿಗೋಳ ಪ್ರಮುಖರು. ಸಪ್ತರ್ಷಿಗಳು ಪದವಿ ಶಿಕ್ಷಣವನ್ನು ಪಡೆದದ್ದು  ಮಹಾರಾಷ್ಟ್ರದ ಪುಣೆ, ಸಾಂಗಲಿ, ಕೋಲ್ಹಾಪುರದಂತಹ ದೂರದ ಪಟ್ಟಣಗಳಲ್ಲಿ. ಹಣವಿದ್ದವರು ಎಲ್ಲಿಯಾದರೂ ಹೋಗಿ ಶಿಕ್ಷಣ ಪಡೆಯಬಹುದು. ಆದರೆ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದು ಅಸಾಧ್ಯವೆಂದು  ಸೂಕ್ಷ್ಮವಾಗಿ ಅರಿತುಕೊಂಡಿದ್ದ ಅವರು ಬೆಳಗಾವಿಯಂತಹ ಸೂಕ್ಷ್ಮ ಹಾಗೂ ಸಂವೇದನಾಶೀಲ ಪ್ರದೇಶದಲ್ಲಿ ಕನ್ನಡ ಶಿಕ್ಷಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದು ಇಂದು ಇತಿಹಾಸ.  

ಉತ್ತರ ಕರ್ನಾಟಕದಲ್ಲಿ ಕೆ.ಎಲ್‌.ಇ.ಸಂಸ್ಥೆ ಸ್ಥಾಪನೆಯಾಗದೇ ಹೋಗಿದ್ದರೆ ಶಿಕ್ಷಣ-ಆರೋಗ್ಯ-ಸಾಂಸ್ಕ್ಕೃತಿಕ ವಲಯ ಚೇತರಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಶಿಕ್ಷಣದೊಂದಿಗೆ ಕನ್ನಡವನ್ನು ಕಟ್ಟುವ, ಬೆಳೆಸುವ ಮನಸ್ಸುಗಳು ನಿರ್ಮಾಣಗೊಳ್ಳುತ್ತಿರಲಿಲ್ಲ. ಅಖಂಡ ಕರ್ನಾಟಕದ ಪರಿಕಲ್ಪನೆಗೆ ಸಂಸ್ಥೆಯ ಸ್ಥಾಪನೆಯು ಗಡಿಭಾಗದಲ್ಲಿ ಅಂದು ಶ್ರೀರಕ್ಷೆಯಾಯಿತೆನ್ನಬಹುದು. 

ಕೆ.ಎಲ್‌.ಇ.ಸಂಸ್ಥೆಯನ್ನು ಸ್ಥಾಪಿಸಿದಾಗ ಸಪ್ತರ್ಷಿಗಳು ಹಗಲಿರುಳು ದುಡಿದರು. ಸರ್ವಸ್ವವನ್ನೂ ತ್ಯಾಗ ಮಾಡಿದರು. ನಿರ್ದಿಷ್ಟ ಯೋಜನೆ-ಯೋಚನೆಗಳನ್ನು ಸಿದ್ಧಪಡಿಸಿದರು. ಹಿರಿಯರ - ಅನುಭಾವಿಗಳ ಸಂಪರ್ಕ ಪಡೆದರು. ಆಗ ಅವರಿಗೆ ಬೆನ್ನೆಲುಬಾಗಿ ನಿಂತವರು ರಾಜಾ ಲಖಮಗೌಡರು, ಶಿರಸಂಗಿ ಏಜ್ಯುಕೇಶನ್ ಟ್ರಸ್ಟ್‌ ಹಾಗೂ ದಾನಶೂರ ಭೂಮರಡ್ಡಿ ಬಸಪ್ಪನವರು ಪ್ರಮುಖರು. ಈ ಮಹಾದಾನಿಗಳಿಂದ ಸಂಸ್ಥೆಯ ಕನಸು ಸಾಕಾರಗೊಂಡಿತು. ಇಂದಿನ ಬೆಳಗಾವಿಯ ಕಿಲ್ಲೆಯ ಬಂಗ್ಲೆ ನಂಬರ್ 24ರಲ್ಲಿ ಮೊದಲ ಶಾಖೆ ಎ.ವ್ಹಿ.ಸ್ಕೂಲು ಹೆಸರಿನಡಿ 1916 ರಲ್ಲಿ ಸ್ಥಾಪನೆಗೊಂಡಿತು.  

ಸಪ್ತರ್ಷಿಗಳ ತ್ಯಾಗ : ಕೆ.ಎಲ್‌.ಇ. ಸಂಸ್ಥೆಯನ್ನು ಕಟ್ಟಿದ ಏಳು ಜನ ಪದವೀಧರ ಯುವಕರು ಪಗಾರಕ್ಕಾಗಿ ದುಡಿಯಲಿಲ್ಲ. ಸಮಾಜಕ್ಕಾಗಿ ಅವರು ತ್ಯಾಗ ಮಾಡಿದರು. ಎಲ್ಲರೂ ಸೇರಿ ತಿಂಗಳಿಗೆ 50/- ರೂ ಸಂಬಳ ಪಡೆಯುತ್ತಿದ್ದರು ಮತ್ತು ಅವರು ಬೆಳಗಾವಿಯ ಖಡೇಬಜಾರದ ಭೋಜಣ್ಣವರ ಅವರ ಮನೆಯ ಅಟ್ಟದ ಮೇಲೆ ಭಾಡಿಗೆಗೆ ವಾಸಮಾಡಿ ಸಂಸ್ಥೆಯ ಬೈಲಾ (ಘಟನೆ) ಬರೆದರು. ಬೆಳಗಾವಿಯ ರವಿವಾರಪೇಟೆಯ ಕಲ್ಮಠದಲ್ಲಿ ಸಭೆ ಮಾಡಿದರು. ಕಿಲ್ಲೆಯಲ್ಲಿ ಭಾಡಿಗೆಗೆ ಬಂಗ್ಲೆ ಪಡೆದು ಎ.ವ್ಹಿ.ಸ್ಕೂಲ್ ಸ್ಮಾಪಿಸಿದರು. ಅದಕ್ಕೆ ಗಿಲಗಂಚಿ ಅರಟಾಳರ ಹೆಸರಿಟ್ಟರು. ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗೆ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಎಂದು ನಾಮಕರಣ ಮಾಡಿ ಅಖಂಡ ಕರ್ನಾಟಕದ ಕನಸಿಗೆ ನಾಂದಿ ಹಾಡಿದರು. ಲಿಂಗಾಯತ ಪದಕ್ಕೆ ಹೊಸ ಅರ್ಥ ನೀಡಿದರು.  

ಅದ್ವಿತೀಯ ಅಂಗಸಂಸ್ಥೆಗಳು: ತದನಂತರದಲ್ಲಿ ಸಪ್ತರ್ಷಿಗಳ ತ್ಯಾಗದ ಫಲದಿಂದ ಒಂದೊಂದೆ ಅಂಗಸಂಸ್ಥೆಗಳು ರೂಪಗೊಂಡವು. 1933 ರಲ್ಲಿ ಲಿಂಗರಾಜ ಮಹಾವಿದ್ಯಾಲಯ ಉತ್ತರ ಕರ್ನಾಟಕದ ಮೊದಲ ಪದವಿ ಕಾಲೇಜ ಎನಿಸಿಕೊಂಡಿತು. 1935 ರಲ್ಲಿ ಲಿಂಗರಾಜ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಪ್ರಾರಂಭಗೊಂಡಿತು. 1944 ರಲ್ಲಿ ಆರ್‌.ಎಲ್‌.ವಿಜ್ಞಾನ ವಿಭಾಗ ಸ್ವತಂತ್ರವಾಗಿ ಸ್ಥಾಪನೆಗೊಂಡಿತು. 1948ರಲ್ಲಿ ಬಿ.ವ್ಹಿ.ಭೂಮರಡ್ಡಿ ತಾಂತ್ರಿಕ ಕಾಲೇಜು, 1963 ರಲ್ಲಿ ಮೊದಲ ಜವಾಹರಲಾಲ ನೆಹರು ಮೆಡಿಕಲ್ ಕಾಲೇಜು ಸ್ಥಾಪನೆಗೊಂಡವು.  

ಡಾ.ಪ್ರಭಾಕರ ಕೋರೆ ಸುವರ್ಣಯುಗ: 1984 ಕೆ.ಎಲ್‌.ಇ. ಸಂಸ್ಥೆಯ ಚರಿತ್ರೆಯಲ್ಲಿ ದಾಖಲಾರ್ಹ ವರ್ಷ. ಕಳೆದ 42 ವರ್ಷಗಳಿಂದ ಡಾ. ಪ್ರಭಾಕರ ಕೋರೆ ಅವರು ಸಂಸ್ಥೆಯ ಚುಕ್ಕಾಣಿಯನ್ನು ಹಿಡಿದು ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸಿದ್ದಾರೆ.  ಇವರ ಆಗಮನ ಪೂರ್ವದಲ್ಲಿ 38 ರಷ್ಟಿದ್ದ ಅಂಗಸಂಸ್ಥೆಗಳ ಸಂಖ್ಯೆ ಇಂದು 316 ಕ್ಕೆ ತಲುಪಿದೆ. ಕರ್ನಾಟಕ-ಮಹಾರಾಷ್ಟ-ದೆಹಲಿ-ದುಬೈದವರೆಗೆ ವ್ಯಾಪಿಸಿದೆ. 18,000 ಸಿಬ್ಬಂದಿ ವರ್ಗ, 1.40 ಲಕ್ಷ ವಿದ್ಯಾರ್ಥಿಗಳಿಂದ ಏಶಿಯಾದಲ್ಲಿಯೇ ಪ್ರಭಾವಿ ಶಿಕ್ಷಣ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಾ.ಪ್ರಭಾಕರ ಕೋರೆಯವರ ಆಗಮನ ಸಂಸ್ಥೆಯ ಬೆಳವಣಿಗೆಯಲ್ಲಿ ಒಂದು ಹೊಸ ಸಂಚಲನವನ್ನೇ ಉಂಟುಮಾಡಿತ್ತು. ಅವರ ನಾಯಕತ್ವ, ದೂರದರ್ಶಿತ್ವ, ರಚನಾತ್ಮಕ ವಿಚಾರಗಳು ಸಂಸ್ಥೆಯು ಶಿಕ್ಷಣದ ಎಲ್ಲ ಹಂತಗಳನ್ನೂ ತಲುಪಿತು. ಕಲೆ-ವಾಣಿಜ್ಯ-ವಿಜ್ಞಾನದೊಂದಿಗೆ ವೈದ್ಯಕೀಯ, ತಾಂತ್ರಿಕ, ಬಹುತಾಂತ್ರಿಕ, ಕೃಷಿ, ಬಿಜೆನಸ್ ಮ್ಯಾನೇಜಮೆಂಟ್, ಫ್ಯಾಷನ್ ಟೆಕ್ನಾಲಜಿ, ಹೋಮ್ ಸೈನ್ಸ್‌, ಆಯುರ್ವೇದ, ದಂತ ವೈದ್ಯಕೀಯ, ನರ್ಸಿಂಗ್, ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಸಮುದಾಯ ಬಾನುಲಿ ಕೇಂದ್ರಗಳು ಹೀಗೆ ಶಿಶು ವಿಹಾರದಿಂದ ಹಿಡಿದು ಸ್ನಾತಕೋತ್ತರದವರೆಗೆ ಸಂಸ್ಥೆ ವಿಸ್ತಾರಗೊಂಡಿದೆ. 

ಎರಡು ವಿಶ್ವವಿದ್ಯಾಲಯಗಳು: ಇದೆಲ್ಲಕ್ಕೂ ಮಿಗಿಲಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ 2006 ರಲ್ಲಿ ವೈದ್ಯಕೀಯ ನೆಲೆಯಲ್ಲಿ ಕೆ.ಎಲ್‌.ಇ.ವಿಶ್ವವಿದ್ಯಾಲಯ ರೂಪುಗೊಂಡಿತು. 2013ರಲ್ಲಿ ಬೆಳಗಾವಿ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯವು ಸುವರ್ಣ ಸಂಭ್ರಮವನ್ನು ಆಚರಿಸಿಕೊಂಡಿತು. ಮಾನ್ಯನೀಯ ಶ್ರೀ ನರೇಂದ್ರ ಮೋದಿಯವರು ಈ ಸಮಾರಂಭಕ್ಕೆ ಸಾಕ್ಷಿಯಾದರು. ಬೆಳಗಾವಿ ಜವಾಹರಲಾಲ ನೆಹರು ವೈದ್ಯಕೀಯ ಕಾಲೇಜು, ದಂತ ವೈದ್ಯಕೀಯ ಮಹಾವಿದ್ಯಾಲಯ, ಫಾರ್ಮಸಿ ಕಾಲೇಜು, ಬೆಂಗಳೂರು ಹಾಗೂ ಹುಬ್ಬಳ್ಳಿಯ ಫಾರ್ಮಸಿ ಕಾಲೇಜು ಹಾಗೂ ಕೆ.ಎಲ್‌.ಇ.ಶುಶ್ರೂಷ ವಿಜ್ಞಾನ ಸಂಸ್ಥೆ, ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಕೆ.ಎಲ್‌.ಇ. ಫಿಸಿಯೋಥೆರಪಿ ಸಂಸ್ಥೆಗಳು, ಹೊಮಿಯೋಪಥಿಕ್ ಕಾಲೇಜುಗಳು ಕೆ.ಎಲ್‌.ಇ. ವಿಶ್ವವಿದ್ಯಾಲಯದ ಸಾಂಸ್ಥಿಕ ಘಟಕಗಳೆಂದು ಗುರುತಿಸಿಕೊಂಡಿದೆ. ಇವು ಸಂಸ್ಥೆಯ ಬೆಳವಣಿಗೆಗೆ ಸಾಕ್ಷಿಯಾಗಿ ನಿಂತಿವೆ. ಅಂತೆಯೆ ಹುಬ್ಬಳ್ಳಿಯಲ್ಲಿ 2015ರಲ್ಲಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ತಲೆಯೆತ್ತಿ ನಿಂತಿದೆ. ಅನನ್ಯ ಸಾಧಕರನ್ನು ದೇಶಕ್ಕೆ ಸಮರ​‍್ಿಸಿದೆ. ಶಿಕ್ಷಣರಂಗದ ಜೀವನಾಡಿಯಾಗಿ ಶಿಕ್ಷಣ ಎಲ್ಲ ಬೇಕು ಬೇಡಿಕೆಗಳನ್ನು ಪೂರೈಸಿದ ಶ್ರೇಯಸ್ಸು ಕೆಎಲ್‌ಇ ಸಂಸ್ಥೆಯದು ಎಂಬುದನ್ನು ಹೆಮ್ಮೆಯಿಂದ ಹೇಳಲೇಬೇಕು. 

ಆರೋಗ್ಯ ಸೇವೆ : ಅಂತೆಯೇ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವ ಮಹೋನ್ನತ ಉದ್ದೇಶ ಹೊತ್ತ ಕೆ.ಎಲ್‌.ಇ.ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದೆ. ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಸಂಸ್ಥೆಯ ಮುಖಟಮಣಿಯಾಗಿದೆ. ಇದು ಉತ್ತರ ಕರ್ನಾಟಕ, ಗೋವಾ ಮತ್ತು ದಕ್ಷಿಣ ಮಹಾರಾಷ್ಟ್ರದ ಜನತೆಗೆ ಆರೋಗ್ಯಧಾಮವೆನಿಸಿದೆ. 2400 ಹಾಸಿಗೆಗಳ ಆಸ್ಪತ್ರೆಯನ್ನು ಜನರ ಸೇವೆಗೆ ಮುಡುಪಾಗಿಟ್ಟಿದೆ. ದೇಶದ 10 ಅತ್ಯುತ್ತಮ ಗುಣಮಟ್ಟದ ಆಸ್ಪತ್ರೆಗಳಲ್ಲಿ ಒಂದೆಂದು ಇಂಡಿಯಾ ಟುಡೆ ಮ್ಯಾಗಜಿನ್ ತನ್ನ ಸಮೀಕ್ಷೆಯ ವರದಿಯಲ್ಲಿ ತಿಳಿಸಿದ್ದು ಅದರ ಆರೋಗ್ಯ ಸೇವೆಗೆ ನಿದರ್ಶನ. ಅಂತೆಯೇ ಅಮೇರಿಕೆಯ ಆರೋಗ್ಯ ಕಾರ್ಯದರ್ಶಿ ಸಿಬಿಲಿಯಸ್ ಕ್ಯಾಥ್ಲೀನ್ ಈ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿಯ ಸೇವೆ ಸೌಲಭ್ಯಗಳನ್ನು ಕಂಡು ಮುಕ್ತ ಮನಸ್ಸಿನಿಂದ ಪ್ರಶಂಸಿಸಿದ್ದನ್ನು ನೆನಪಿಸಿಕೊಳ್ಳಬೇಕು. ಸಂಸ್ಥೆ ತನ್ನ ಆರೋಗ್ಯ ಸೇವೆಯನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಿ ಜನರೊಂದಿಗೆ ಸ್ಪಂದಿಸಿದೆ. ಬೆಳಗಾವಿ ಹತ್ತಿರವಿರುವ ಎಳ್ಳೂರ ರಸ್ತೆಯಲ್ಲಿ 500 ಹಾಸಿಗೆಗಳ ಉಚಿತ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯು ಪ್ರಾರಂಭಗೊಂಡಿದೆ. ಬೆಳಗಾವಿಯಲ್ಲಿ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆ, ಪುಣೆಯಲ್ಲಿ 200 ಹಾಸಿಗೆಗಳ ಆಸ್ಪತ್ರೆಗಳು ಕಾರ್ಯಾರಂಭಕ್ಕೆ ಸಿದ್ಧವಾಗಿನಿಂತಿವೆ. ಗೋಕಾಕ, ಚಿಕ್ಕೋಡಿ, ಅಂಕೋಲಾ, ಹುಬ್ಬಳ್ಳಿ, ಬೆಳಗಾವಿ ಮೊದಲ್ಗೊಂಡು 4500ಕ್ಕೂ ಹೆಚ್ಚು ಹಾಸಿಗೆಗಳ ಏಕೈಕ ಖಾಸಗಿ ವಲಯದ ಆಸ್ಪತ್ರೆ ಸೇವೆ ಕೆಎಲ್‌ಇ ಸಂಸ್ಥೆಯದು ಎನ್ನುವುದು ಅಭಿಮಾನದ ಸಂಗತಿ.  

‘ಕರ್ನಾಟಕ ಲಿಂಗಾಯತ ಶಿಕ್ಷಣಸಂಸ್ಥೆ’ ಎಂಬ ಹೆಸರಿದ್ದರೂ ಧರ್ಮನಿರಪೇಕ್ಷತೆಗೆ ಬದ್ಧರಾಗಿರುವುದು ವಿಶೇಷ. ಪರಂಪರೆಯನ್ನು ಬಿಟ್ಟುಕೊಡದೆ ಆಧುನಿಕತೆಯನ್ನು ಅಳವಡಿಸಿಕೊಂಡಿರುವ ಸಂಸ್ಥೆಯ ಎಲ್ಲವೂ ಪ್ರಸ್ತುತ. ದೇಶ-ವಿದೇಶಗಳ ವಿಶ್ವವಿದ್ಯಾಲಯಗಳೊಂದಿಗೆ ಸಹಯೊಗ ಸಾಧಿಸುತ್ತ, ಪ್ರಗತಿಪರ ಧೋರಣೆಯನ್ನು ಅನುಸರಿಸುತ್ತಿದೆ. ಎಲ್ಲೆಡೆಯಿಂದ ಬಂದ ಒಳಿತನ್ನು ಸ್ವೀಕರಿಸಿದೆ, ಪಡೆದು ಬೆಳೆದಿದೆ, ನೀಡಿ ಬೆಳೆಸಿದೆ. ಅದು ಕೆ.ಎಲ್‌.ಇ. ಸಂಸ್ಕೃತಿ. 

ಕನ್ನಡ ಕಟ್ಟಿದ ಸಂಸ್ಥೆ : ನಾಡುನುಡಿಗಳನ್ನು ಕಟ್ಟುವ ಕಾರ‌್ಯದಲ್ಲಿ ಕೂಡ ಕೆ.ಎಲ್‌.ಇ. ಮೊದಲಿನಿಂದಲೂ ಕ್ರಿಯಾಶೀಲ. ಕನ್ನಡ-ಕನ್ನಡಿಗ-ಕರ್ನಾಟಕಗಳನ್ನು ಪೋಷಿಸಿ ಬೆಳೆಸುವಲ್ಲಿ ಸಂಸ್ಥೆಯ ಸಂಸ್ಥಾಪಕರು ಹೋರಾಡಿದ ರೀತಿ ರೋಮಾಂಚಕಾರಿ. ಪ್ರೊ ಬಸವನಾಳ, ಪಂಡಿತಪ್ಪ ಚಿಕ್ಕೋಡಿ, ಪ್ರೊ ಸಾಖರೆ, ವೀರನಗೌಡ ಪಾಟೀಲ ಮೊದಲಾದವರು ತಮ್ಮ ಚಟುವಟಿಕೆಗಳಿಂದ ಕನ್ನಡಕ್ಕೆ ಶಕ್ತಿ ತುಂಬಿದರು. ಕರ್ನಾಟಕ ಏಕೀಕರಣ, ಕನ್ನಡ ಸಾಹಿತ್ಯ ಸಮ್ಮೇಳನ, ಕರ್ನಾಟಕ ರಾಜ್ಯೋತ್ಸವದಂಥ ಸಂದರ್ಭಗಳನ್ನು ಕನ್ನಡ ಕಟ್ಟಲು ಬಳಸಿಕೊಂಡದ್ದು ಮಾದರಿ. ಶಿಕ್ಷಕರಷ್ಟೆ ಅಲ್ಲ, ಸಂಸ್ಥೆಯ ಚುಕ್ಕಾಣಿ ಹಿಡಿದ ಡಾ. ಪ್ರಭಾಕರ ಕೋರೆ ಹಾಗೂ ಅವರ ತಂಡ ಕೂಡ ಹಲವಾರು ವಿಧಾಯಕ ಕಾರ‌್ಯಗಳ ಮೂಲಕ ಕನ್ನಡದ ಬೆಳವಣಿಗೆಗೆ ಶ್ರಮಿಸಿದ್ದು ನಾಡವರ ಕಣ್ಮುಂದಿದೆ. ಅದು ಇತರರಿಗೆ ಮಾದರಿಯಾಗಿದೆ.  

ಬೆಳಗಾವಿಯನ್ನು ಕೇಂದ್ರವಾಗಿಸಿಕೊಂಡ ಸಂಸ್ಥೆ, ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವದರ ಜೊತೆಯಲ್ಲೇ ಕನ್ನಡ ಕಟ್ಟುವ ಕಾರ‌್ಯದಲ್ಲಿಯೂ ರಚನಾತ್ಮಕವಾಗಿ ತೊಡಗಿಸಿಕೊಂಡಿದೆ. ಕನ್ನಡತನವನ್ನು ಬೆಳೆಸುವುದರೊಂದಿಗೆ ಸಂಸ್ಕೃತಿ ಸಂವರ್ಧನೆಯತ್ತ ಗಮನ ನೀಡುತ್ತಿದೆ. ಅಂತೆಯೆ ಕೆ.ಎಲ್‌.ಇ. ಕನ್ನಡದ ಭದ್ರಕೋಟೆಯಾಗಿದೆ. ಕನ್ನಡದ ಹೆಸರಾಂತ ಸಾಹಿತಿಗಳನ್ನು ರೂಪಿಸಿದ ಶ್ರ್ರೇಯಸ್ಸು ಈ ಸಂಸ್ಥೆಗಿದೆ. ಡಾ. ಎಸ್‌.ಎಲ್‌.ಭೈರ​‍್ಪ, ಪ್ರೊ.ಸಂ.ಶಿ.ಭೂಸನೂರಮಠ, ಡಾ. ಡಿ.ಎಸ್‌.ಕರ್ಕಿ, ಡಾ. ಬುದ್ದಣ್ಣ ಹಿಂಗಮಿರೆ, ಪ್ರೊ. ಶ್ರೀನಿವಾಸ ತೋಫಖಾನೆ, ಎಸ್‌.ಡಿ. ಇಂಚಲ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಕೆ.ಎಲ್‌.ಇ. ರೂಪಿಸಿದ ಪ್ರತಿಭೆಗಳು. 

ಒಟ್ಟಿನಲ್ಲಿ ಶೈಕ್ಷಣಿಕ ಉದ್ದೇಶವನ್ನಿಟ್ಟುಕೊಂಡು ಹುಟ್ಟಿಬೆಳೆದ ಕೆ.ಎಲ್‌.ಇ.ಸಂಸ್ಥೆ ಆರೋಗ್ಯ ನೆಲೆಯಲ್ಲಿ ಪವಾಡವನ್ನು ಸೃಷ್ಟಿಸಿದೆ. ಒಂದು ಸಂಸ್ಥೆ ಬೆಳೆಯುವುದು ಒಂದೆರೆಡು ದಿನಗಳಲ್ಲಿ ಅಲ್ಲ, ನಿರಂತರ ಕ್ರಿಯಾತ್ಮಕ ಹಾಗೂ ರಚನಾತ್ಮಕ ಯೋಜನೆಗಳಿಂದ. ಈ ದಿಸೆಯಲ್ಲಿ ಕೆ.ಎಲ್‌.ಇ. ತಾನು ಬೆಳೆಯುತ್ತ ಸಮಾಜ ಪರಿವರ್ತನೆಯೆಡೆಗೆ ಸಾಗಿದ್ದು ಪವಾಡವೇ ಸರಿ.  

ಸಂಸ್ಥೆಯನ್ನು ಹುಟ್ಟುಹಾಕುವುದು ಮಹತ್ವವಲ್ಲ, ಅದನ್ನು ಸಮಾಜಮುಖಿಯಾಗಿ ಮುನ್ನಡೆಸುವುದು ಮುಖ್ಯ. ಸಂಸ್ಥೆ ಯಾವುದೇ ಇರಲಿ, ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವಂತಿರಬೇಕು. ಮೂಲಭೂತ ಅವಶ್ಯಕತೆಗಳನ್ನು ನೀಡುವಂತಿರಬೇಕು. ಸಮಾಜದಲ್ಲಿಯ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಬಿತ್ತುವಂತಿರಬೇಕು. ಕೆ.ಎಲ್‌.ಇ.ಸಂಸ್ಥೆ ಈ ಮೌಲ್ಯಗಳನ್ನು ಯಶಸ್ವಿಯಾಗಿ ಪೂರೈಸಿ ಸಮಾಜದ ಬೆಳಕಾಗಿದೆ, ಸಮಾಜಮುಖಿಯೆನಿಸಿದೆ. ಹಾಗಾಗೀ ಕೆ.ಎಲ್‌.ಇ. ಸಮಾಜದ ಆಸ್ತಿ. ಸಪ್ತರ್ಷಿಗಳ ಆಶಯದಂತೆ ಇಂದು ಸಂಸ್ಥೆ ಡಾ.ಪ್ರಭಾಕರ ಕೋರೆಯವರ ಸಮರ್ಥ ನೇತೃತ್ವದಲ್ಲಿ ಅಹರ್ನಿಶಿಯಾಗಿ ದುಡಿಯುತ್ತಿದೆ, ಗೌರಿಶಿಖರದಷ್ಟು ಬೆಳೆದುನಿಂತಿದೆ. ಶತಮಾನೋತ್ಸವ ಆಚರಿಸಿಕೊಂಡಿರುವ ಕೆ.ಎಲ್‌.ಇ.ಸಂಸ್ಥೆಯಿಂದ ಸಮಾಜಕ್ಕೆ ಇನ್ನಷ್ಟು ಮಹತ್ತರ ಕೊಡುಗೆ ಸಲ್ಲಲೆಂಬುವುದೇ ನಾಡಿನ ಜನತೆಯ ಹಾರೈಕೆ.  

ಕೆಎಲ್‌ಇ ಸಂಸ್ಥೆಯ ಪಕ್ಷಿನೋಟ 

      

ಸಿ ಈ ಸಂಸ್ಥೆಯನ್ನು 13 ನವೆಂಬರ್ 1916ರಲ್ಲಿ ಏಳು ಜನ ಶಿಕ್ಷಕರು ಸ್ಥಾಪಿಸಿದರು. ಅವರನ್ನು ಸಂಸ್ಥೆಯು   ‘ಸಪ್ತರ್ಷಿ’ಗಳೆಂದು ಗೌರವಿಸುತ್ತದೆ.  

1) ಶ್ರೀ ಎಂ.ಆರ್‌. ಸಾಖರೆ 

2) ಶ್ರೀ ಬಿ.ಬಿ. ಮಮದಾಪೂರ 

3) ಶ್ರೀ ಬಿ.ಎಸ್‌. ಹಂಚಿನಾಳ 

4) ಶ್ರೀ ಶಿ.ಶಿ. ಬಸವನಾಳ 

5) ಶ್ರೀ ಎಚ್‌. ಎಫ್‌. ಕಟ್ಟೀಮನಿ 

6) ಶ್ರೀ ಪಿ.ಆರ್‌.ಚಿಕ್ಕೋಡಿ 

7) ಶ್ರೀ ವ್ಹಿ.ವ್ಹಿ. ಪಾಟೀಲ 

- ಮೂವರು ಮಹಾನ್ ಪೋಷಕರು 

1) ಶ್ರೀ ವೀರಭದ್ರ​‍್ಪ ಗುಣಪ್ಪ ನಾಯ್ಕ ಬಹಾದ್ದೂರ ದೇಸಾಯಿ, ಚಚಡಿ 

2) ಶ್ರೀ ರಾವಬಹದ್ದೂರ ರುದ್ರಗೌಡ ಅರಟಾಳ 

3) ಶ್ರೀ ರಾವಬಹದ್ದೂರ ವೈಜಪ್ಪ ಅನಿಗೋಳ 

ಸಿ ಕೆ.ಎಲ್‌.ಇ. ಸಂಸ್ಥೆಯ ಧ್ಯೇಯ - ಸತ್ಯ, ಪ್ರೇಮ, ಸೇವೆ, ಸ್ವಾರ್ಥತ್ಯಾಗ ಸಿದ್ಧಾಂತದ ತಳಹದಿಯ ಮೇಲೆ ರೂಪಗೊಂಡಿದೆ.  

ಸಿ ದೂರದ ಪಟ್ಟಣಗಳಾದ ಮುಂಬೈ, ಕೊಲ್ಲಾಪೂರ, ಪುಣೆ ಅಂತಹ ಶೈಕ್ಷಣಿಕ ಸ್ಥಳಗಳನ್ನು ಅರಸಿಕೊಂಡು ಹೋಗಬೇಕಾದಂತಹ ಕಾಲಘಟ್ಟದಲ್ಲಿ ಪುಣೆಯ ಫರ್ಗ್ಯುಸನ್ ಕಾಲೇಜು ಹಾಗೂ ಡೆಕ್ಕನ್ ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದ ಸಪ್ತರ್ಷಿಗಳಿಗೆ ಉತ್ತರ ಕರ್ನಾಟಕದಲ್ಲಿ ಕೆ.ಎಲ್‌.ಇ. ಸಂಸ್ಥೆಯನ್ನು ಹುಟ್ಟುಹಾಕುವ ಪ್ರೇರಣೆ ದೊರೆಯಿತು. 

ಸಿ ಅಂತೆಯೆ ಕೆ.ಎಲ್‌.ಇ. ಸಂಸ್ಥೆಯು ಪ್ರಾರಂಭದಲ್ಲಿ ಆಂಗ್ಲೋ ವರ್ನ್ಯಾಕುಲರ್ ಮಾದರಿಯಲ್ಲಿ ಶಾಲೆಯನ್ನು 1916 ರಲ್ಲಿ ಬೆಳಗಾವಿಯಲ್ಲಿ ಪ್ರಾರಂಭಿಸಿತು. 

ಸಿ 1933ರಲ್ಲಿ ಬೆಳಗಾವಿಯಲ್ಲಿ ಲಿಂಗರಾಜ ಕಾಲೇಜಿನ ಸ್ಥಾಪನೆಯಾಯಿತು. ಇದು ಉತ್ತರ ಕರ್ನಾಟಕದ ಪ್ರಥಮ ಪದವಿ ಕಾಲೇಜು. 

ಸಿ 1944ರಲ್ಲಿ ಬೆಳಗಾವಿಯ ರಾಜಾಲಖಮಗೌಡ ವಿಜ್ಞಾನ ಸಂಸ್ಥೆ ಸ್ಥಾಪನೆಗೊಂಡಿತು. 

ನೊಬೆಲ್ ಪಾರಿತೋಷಕ ವಿಜೇತ ವಿಜ್ಞಾನಿ ಸರ್ ಸಿ.ವ್ಹಿ. ರಾಮನ್ ಈ ಕಾಲೇಜನ್ನು ಉದ್ಘಾಟಿಸಿದರು. 

ಸಿ 1947ರಲ್ಲಿ ಬಿ.ವ್ಹಿ. ಭೂಮರಡ್ಡಿ ಹಾಗೂ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಕಾಲೇಜು, ಹುಬ್ಬಳ್ಳಿಯಲ್ಲಿ ಸ್ಥಾಪನೆಗೊಂಡಿತು. 

ಸಿ 1963ರಲ್ಲಿ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಬೆಳಗಾವಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ವೈದ್ಯಕೀಯ ಶಿಕ್ಷಣಕ್ಕೆ ಈ ಭಾಗದಲ್ಲಿ ಮಹತ್ವದ ಅಧ್ಯಾಯ ತೆರೆದ ಮೊದಲ ಶಿಕ್ಷಣ ಸಂಸ್ಥೆ ಎಂಬ ಶ್ರೇಯಸ್ಸಿಗೆ ಪಾತ್ರವಾಯಿತು. 

ಸಿ 1986ರಲ್ಲಿ ಕೆೆ.ಎಲ್‌.ಇ. ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಬೆಳಗಾವಿಯಲ್ಲಿ ಅಸ್ತಿತ್ವಕ್ಕೆ ಬಂದವು. 

- ಇಂದು 2400 ಹಾಸಿಗೆಗಳ ಅತ್ಯಾಧುನಿಕ ಸುಸಜ್ಜಿತ ಬೃಹತ್ ಆಸ್ಪತ್ರೆ ಇದಾಗಿದೆ.  

- ಈ ಆಸ್ಪತ್ರೆಯಲ್ಲಿ 1200 ಉಚಿತ ಹಾಸಿಗೆಗಳಿವೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ಅನುಕೂಲವಾಗಲೆಂದು, ಬಡವರಿಗೂ  ಆರೋಗ್ಯ ಸೇವೆ ತಲುಪಲೆಂದು ಇದನ್ನು  ರೂಪಿಸಲಾಗಿದೆ. ಉಚಿತ ಹಾಸಿಗೆಯೊಂದಿಗೆ ಚಿಕಿತ್ಸೆ, ಓಷಧ, ಆಹಾರವನ್ನು ಇಲ್ಲಿ ನೀಡಲಾಗುತ್ತಿದೆ. 

- ಇಲ್ಲಿಯವರೆಗೆ 1 ಕೋಟಿ 50 ಲಕ್ಷ ಹೊರ ರೋಗಿಗಳು ಹಾಗೂ 14 ಲಕ್ಷ.10 ಸಾವಿರ ಒಳರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಹಾಗೂ 3,91,539 ರೋಗಿಗಳು ಶಸ್ತ್ರ ಚಿಕಿತ್ಸೆಗೊಳಗಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 1500 ಕ್ಕೂ ಅಧಿಕ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. 

- ಆಸ್ಪತ್ರೆಯು ಹೃದಯ, ಯಕೃತ್ತು, ಮೂತ್ರಪಿಂಡ ಮತ್ತು ಚರ್ಮದ ಕಸಿ ಸೇವೆಗಳನ್ನು ಒದಗಿಸುತ್ತಿದ್ದು, ಉತ್ತರ ಕರ್ನಾಟಕದ ‘ಬಹು ಅಂಗಾಂಗ ಕಸಿ ಸೇವೆಗಳ ಪ್ರಮುಖ ಕೇಂದ್ರ’ವಾಗಿ ಹೊರಹೊಮ್ಮಿದೆ.  ಮೊದಲ ಹೃದಯ ಕಸಿಯನ್ನು ಫೆಬ್ರುವರಿ 2018 ರಲ್ಲಿ ಯಶಸ್ವಿಯಾಗಿ ನಡೆಸಲಾಯಿತು ಮತ್ತು ಮೊದಲ ಯಕೃತ್ತಿನ ಕಸಿಯನ್ನು ಅಕ್ಟೋಬರ್ 2022 ರಲ್ಲಿ ನಡೆಸಲಾಯಿತು. ಇಲ್ಲಿಯವರೆಗೆ ಈ ಸೌಲಭ್ಯವು 25 ಯಕೃತ್ತು ಕಸಿ, 14 ಹೃದಯ ಕಸಿ ಮತ್ತು 107 ಮೂತ್ರಪಿಂಡ ಕಸಿ ಕಾರ್ಯವಿಧಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.  

- ಆಸ್ಪತ್ರೆಯಲ್ಲಿ ಭಾರತದ ​‍್ರ​‍್ರಥಮ ವ್ಯಾಕ್ಸಿನ್ ಅಡ್ವೊಕಸಿ ಫೋರಮ್‌ನ ಕೆಎಲ್‌ಇ ವ್ಯಾಕ್ಸಿನ್ ಅಡ್ವೊಕಸಿ ಸೆಂಟರ್‌ನ್ನು ಪ್ರಾರಂಭಿಸಲಾಗಿದ್ದು, ವಯಸ್ಕರಿಗೆ ಲಸಿಕಾ ಸೌಲಭ್ಯವನ್ನು ಒದಗಿಸುತ್ತಿದೆ.  

- ಆಸ್ಪತ್ರೆಯು ಸೆಟಲೈಟ್ ಕೇಂದ್ರಗಳು ಹಾಗೂ ತೀವ್ರ ನಿಗಾ ಘಟಕಗಳ ಮೂಲಕ ಆರೋಗ್ಯ ಆರೈಕೆಯ ಸೇವೆಗಳನ್ನು ಪುಣೆ, ಹುಬ್ಬಳ್ಳಿ, ಅಂಕೋಲಾ, ಗೋಕಾಕ ಹಾಗೂ ಚಿಕ್ಕೋಡಿ ಭಾಗದ ಜನರಿಗೆ ವಿಸ್ತರಿಸಿದೆ.   

- ಪುಣೆಯಲ್ಲಿ 300 ಹಾಸಿಗೆಗಳ ಅತ್ಯಾಧುನಿಕ ಕೆಎಲ್‌ಇ-ಮೆಡಿಕವರ್ ಆಸ್ಪತ್ರೆ ಪ್ರಾರಂಭಗೊಂಡಿದೆ.  

- ಕೆಎಲ್‌ಇ ಸಂಸ್ಥೆಯ ಬೆಳಗಾವಿಯ 300 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ, ಹಾಗೂ ಹುಬ್ಬಳ್ಳಿಯ 1200 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆಗಳು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿವೆ.   

- ಒಟ್ಟಾರೆ ಸಂಸ್ಥೆಯು 4500 ಹಾಸಿಗೆಗಳ ಅದರಲ್ಲಿ 1700 ಉಚಿತ ಸೇವಾ ಹಾಸಿಗೆಗಳ ಸೌಲಭ್ಯವುಳ್ಳ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.  

- 2011 ರಲ್ಲಿ  ಪ್ರಾರಂಭಿಸಲಾದ ಕೆ.ಎಲ್‌.ಇ. ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ ಈ ಭಾಗದ ರೈತಾಪಿ ಜನರಿಗೆ ಆಶಾಕಿರಣವಾಗಿದೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ನವದೆಹಲಿ ಇವರಿಂದ  ಮಾನ್ಯತೆ ಪಡೆದಿದೆ.   

- 13 ಏಪ್ರಿಲ್ 2006ರಲ್ಲಿ ಅಸ್ತಿತ್ವಕ್ಕೆ ಬಂದ ಕೆಎಲ್‌ಇ ವಿಶ್ವವಿದ್ಯಾಲಯ ಡೀಮ್ಡ್‌ ವಿಶ್ವವಿದ್ಯಾಲಯದ ಸ್ಥಾನಮಾನ ಪಡೆದಿದೆ. ಈ ವಿಶ್ವವಿದ್ಯಾಲಯವು 11 ಅಂಗ ಸಂಸ್ಥೆಗಳನ್ನು ಹೊಂದಿದ್ದು ಹಿ ವೈದ್ಯಕೀಯ (2), ದಂತ ವಿಜ್ಞಾನ, ಶುಶ್ರೂಷಾ ವಿಜ್ಞಾನ, ಓಷಧ ವಿಜ್ಞಾನ (3), ಪಿಜಿಯೋಥೆರಪಿ(2), ಆಯುರ್ವೇದ ಹಾಗೂ ಹೋಮಿಯೋಪಥಿ ಈ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. 

- ಹುಬ್ಬಳ್ಳಿಯಲ್ಲಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯವನ್ನು 04 ಏಪ್ರಿಲ್ 2015ರಲ್ಲಿ ಸ್ಥಾಪಿಸಲಾಗಿದೆ. ಹುಬ್ಬಳ್ಳಿಯಲ್ಲಿ 1947ರಲ್ಲಿ ಸ್ಥಾಪನೆಗೊಂಡ ಪ್ರತಿಷ್ಠಿತ ಬಿ.ವಿ.ಭೂಮರಡ್ಡಿ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದ ಭದ್ರ ಅಡಿಪಾಯದೊಂದಿಗೆ ಈ ವಿಶ್ವವಿದ್ಯಾಲಯ ಹೊರಹೊಮ್ಮಿದೆ. ಸಂಸ್ಥೆಯು ತನ್ನ 75ನೇ ವರ್ಷದ ಸ್ಥಾಪನೆಯನ್ನು 2022 ರಲ್ಲಿ ಆಚರಿಸಿದೆ. ಐದು ಪದವಿ ಕೋರ್ಸುಗಳು ಓಃಂ ಯಿಂದ ಮಾನ್ಯತೆ ಪಡೆದಿವೆ ಮತ್ತು ವಿಶ್ವವಿದ್ಯಾಲಯವು ಓಂಂಅ ನಿಂದ "ಂ" ಶ್ರೇಣಿಯನ್ನು ಪಡೆದಿದೆ.   

- ಸಮುದಾಯ ಬಾನುಲಿ ಕೇಂದ್ರಗಳು - ಹುಬ್ಬಳ್ಳಿಯಲ್ಲಿ 2013 ರಲ್ಲಿ ಕೆಎಲ್‌ಇ ಧ್ವನಿ ಹಾಗೂ ಬೆಳಗಾವಿಯಲ್ಲಿ 2015ರಲ್ಲಿ ವೇಣುಧ್ವನಿ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಿದ್ದು, ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಕೃಷಿ ಹಾಗೂ ಶಿಕ್ಷಣದ ಕುರಿತಾದ ಮಾಹಿತಿಗಳನನ್ನು ಬಿತ್ತರಿಸಲಾಗುತ್ತಿದೆ.  

ಕೆ.ಎಲ್‌.ಇ. 316 ಅಂಗ ಸಂಸ್ಥೆಗಳಲ್ಲಿ -   

ಕಲಾ, ವಿಜ್ಞಾನ ಸಂಸ್ಥೆಗಳು 32 ಶಿಕ್ಷಣ ಮಹಾವಿದ್ಯಾಲಯಗಳು 06 

ಆರೋಗ್ಯ ವಿಜ್ಞಾನ ಸಂಸ್ಥೆಗಳು 29 ಶಿಕ್ಷಕರ ತರಬೇತಿ ಸಂಸ್ಥೆಗಳು 15 

ಆರೋಗ್ಯ ಸೇವೆ ಸಂಸ್ಥೆಗಳು 19 ಪದವಿಪೂರ್ವ ಕಾಲೇಜುಗಳು 37 

ತಾಂತ್ರಿಕ ಸಂಸ್ಥೆಗಳು 46 ಪ್ರೌಢಶಾಲೆಗಳು 40 

ಆಡಳಿತ ನಿರ್ವಹಣಾ ಸಂಸ್ಥೆಗಳು 21 ಪೂರ್ವಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳು 41 

ಕೃಷಿ ವಿಜ್ಞಾನ ಸಂಸ್ಥೆಗಳು 02 ಇತರ ಅಂಗಸಂಸ್ಥೆಗಳು 16 

ಕಾನೂನು ಮಹಾವಿದ್ಯಾಲಯಗಳು 06  

? ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಸಂಖ್ಯೆ : 1,45,000 

? ಸಿಬ್ಬಂದಿ ವರ್ಗ : 18,000 


ಸಿ ಕೆಎಲ್‌ಇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಪ್ರಮುಖರು - 

? ಬ್ಯಾರಿಸ್ಟರ್ ಶ್ರೀ ನಾಥ್ ಪೈ-ಖ್ಯಾತ ಸಂಸದರು 

? ದಿ. ಬಿ. ಶಂಕರಾನಂದ, ಮಾಜಿ ಕೇಂದ್ರ ಸಚಿವ 

? ಪದ್ಮಶ್ರೀ ಶ್ರೀಮತಿ ಸುಧಾಮೂರ್ತಿ- ಅಧ್ಯಕ್ಷರು, ಇನ್‌ಫೋಶಿಸ್ ಸಂಸ್ಥೆ, ಬೆಂಗಳೂರು. 

? ಶ್ರೀ ಸುನೀಲ ಜೋಶಿ-ಅಂತಾರಾಷ್ಟ್ರೀಯ ಕ್ರಿಕೆಟಿಗ 

? ನಾಡೋಜ ಡಾ. ಚಂದ್ರಶೇಖರ ಕಂಬಾರ-ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು 

? ಶ್ರೀ ದಾತಾರ-ಶ್ರೇಷ್ಠ ಕಾನೂನು ತಜ್ಞರು  

? ಡಾ. ಶಿವಾನಂದ ಪಾಟೀಲ-ಅಂತರ್‌ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ 

? ಶ್ರೀ ಪ್ರಹ್ಲಾದ ಜೋಶಿ, ಸನ್ಮಾನ್ಯ ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಹಾಗೂ ಕಲ್ಲಿದ್ದಲು ಸಚಿವರು 

? ದಿವಂಗತ ಶ್ರೀ ಅನಂತಕುಮಾರ, ಕೇಂದ್ರ ಮಾಜಿ ರಾಸಾಯನಿಕ ಹಾಗೂ ಗೊಬ್ಬರ ಖಾತೆ ಸಚಿವರು 

? ಶ್ರೀ ಬಸವರಾಜ ಬೊಮ್ಮಾಯಿ, ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ 

? ಶ್ರೀ ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕ 

? ಶ್ರೀ ಮುರುಗೇಶ ನಿರಾಣಿ, ಸನ್ಮಾನ್ಯ ಭಾರಿ ಹಾಗೂ ಮಧ್ಯಮ ಕೈಗಾರಿಕಾ ಸಚಿವರು, ಕರ್ನಾಟಕ ಸರ್ಕಾರ 

? ಶ್ರೀ ಬಸವರಾಜ ಹೊರಟ್ಟಿ, ಮಾಜಿ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು 

? ಶ್ರೀ ಪ್ರದೀಪ ವಜ್ರಮ, ಸಂಸ್ಥಾಪಕರು, ಸ್ಪೈಕ್ ಟೆಕ್ - ಸಿಲಿಕಾನ್ ವ್ಯಾಲಿಯಲ್ಲಿ ಪ್ರತಿಷ್ಠಿತ 10 ವಿನ್ಯಾಸ ಕೇಂದ್ರಗಳಲ್ಲಿ ಒಂದಾಗಿದೆ 

? ಶ್ರೀ ಉಮೇಶ ವೈದ್ಯಮಠ ಹಿ ಅಮೇರಿಕೆದಲ್ಲಿ ಪ್ರತಿಷ್ಠಿತ ಏಷಿಯಾದ 10 ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ.  

? ಶ್ರೀ ದೀಲೀಪ ಮಿಸ್ಕಿನ್, ಮಾಜಿ ವ್ಯವಸ್ಥಾಪಕರು, ಫೋರ್ಬ್ಸ್‌ ಮಾರ್ಷಾಲ 

? ದಿ. ಅನಂತ ಕುಮಾರ, ಮಾಜಿ ಕೇಂದ್ರ ಸಚಿವರು  

? ಶ್ರೀ ಅನಿಲ ದತ್ತಾತ್ರಯ ಸಹಸ್ರಬುದ್ದೆ, ಚೇರಮನ್, ಎ.ಐ.ಸಿ.ಟಿ.ಇ.  


ಸಿ ಸಂಸ್ಥೆಗೆ ಭೇಟಿ ನೀಡಿದ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಗಣ್ಯರು:  

ಸರ್ ಸಿ.ವ್ಹಿ. ರಾಮನ್, ಪಂಡಿತ ಜವಾಹರಲಾಲ್ ನೆಹರು, ಡಾ. ರಾಜೇಂದ್ರ ಪ್ರಸಾದ್, ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಶ್ರೀ ಲಾಲಬಹದ್ದೂರ ಶಾಸ್ತ್ರೀ, ಶ್ರೀ ಎಸ್‌.ನಿಜಲಿಂಗಪ್ಪ, ಶ್ರೀ ಬಿ.ಡಿ.ಜತ್ತಿ, ಶ್ರೀಮತಿ ಇಂದಿರಾ ಗಾಂಧಿ, ಶ್ರೀ ಮುರಾರ್ಜಿ ದೇಸಾಯಿ, ಡಾ. ನೀಲಂ ಸಂಜೀವರೆಡ್ಡಿ, ನಾನಿ ಪಾಲ್ಕಿವಾಲಾ, ಡಾ. ಶಂಕರ ದಯಾಳ ಶರ್ಮಾ, ಗ್ಯಾನಿ ಜೇಲಸಿಂಗ್, ಪಿ.ವಿ. ನರಸಿಂಹರಾವ್, ರಾಜೀವ ಗಾಂಧಿ, ಡಾ.ಎಪಿಜೆ ಅಬ್ದುಲ್ ಕಲಾಮ್, ಎಚ್‌.ಡಿ.ದೇವೆಗೌಡ, ಬಿ. ಶಂಕರಾನಂದ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ, ಎಲ್‌.ಕೆ. ಅಡ್ವಾನಿ, ಅರುಣ ಜೇಟ್ಲಿ, ಶರದ ಪವಾರ, ಗುಲಾಮ ನಬಿ ಆಜಾದ್, ಶ್ರೀ ನರೇಂದ್ರ ಮೋದಿ, ಶ್ರೀ ಅಮಿತ ಶಾ, ಶ್ರೀ ನೀತೀನ ಗಡಕರಿ, ಡಾ.ಎಸ್‌. ಜೈಶಂಕರ, ಶ್ರೀ ಅನುರಾಗ ಠಾಕೂರ, ಪದ್ಮಶ್ರೀ ರಾಜವರ್ಧನಸಿಂಗ್ ರಾಠೋರ, ಶ್ರೀಮತಿ ಮೀನಾಕ್ಷಿ ಲೇಖಿ, ಭಾರತರತ್ನ ಪ್ರೊ.ಸಿಎನ್‌ಆರ್ ರಾವ್, ಡಾ.ಯು.ಆರ್‌.ರಾವ್, ಮಾಜಿ ಚೇರಮನ್, ಇಸ್ರೋ, ಅನುಪಮ್ ಖೇರ್, ಡಾ.ಗಂಗೂಬಾಯಿ ಹಾನಗಲ್ಲ, ಡಾ. ನಾರಾಯಣ ಮೂರ್ತಿ, ಡಾ. ವಾಯ್‌. ಎಸ್‌. ರಾಜಶೇಖರ ರೆಡ್ಡಿ, ಶ್ರೀ ಎಸ್‌.ಎಂ. ಕೃಷ್ಣ, ಪದ್ಮವಿಭೂಷಣ ಶ್ರೀ ರತನ ಟಾಟಾ, ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಪಟುಗಳಾದ ಅನೀಲ ಕುಂಬ್ಳೆ, ಆರ್‌. ವಿನಯಕುಮಾರ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಮೊದಲಾದವರು.   




ಸಿ 1944ರಲ್ಲಿ ಬೆಳಗಾವಿಯ ರಾಜಾಲಖಮಗೌಡ ವಿಜ್ಞಾನ ಸಂಸ್ಥೆ ಸ್ಥಾಪನೆಗೊಂಡಿತು. ನೊಬೆಲ್ ಪಾರಿತೋಷಕ ವಿಜೇತ ವಿಜ್ಞಾನಿ ಸರ್ ಸಿ.ವ್ಹಿ. ರಾಮನ್ ಈ ಕಾಲೇಜನ್ನು ಉದ್ಘಾಟಿಸಿದರು. 

ಸಿ 1947ರಲ್ಲಿ ಬಿ.ವ್ಹಿ. ಭೂಮರಡ್ಡಿ ಹಾಗೂ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಕಾಲೇಜು, ಹುಬ್ಬಳ್ಳಿಯಲ್ಲಿ ಸ್ಥಾಪನೆಗೊಂಡಿತು. 

ಸಿ 1963ರಲ್ಲಿ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಬೆಳಗಾವಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ವೈದ್ಯಕೀಯ ಶಿಕ್ಷಣಕ್ಕೆ ಈ ಭಾಗದಲ್ಲಿ ಮಹತ್ವದ ಅಧ್ಯಾಯ ತೆರೆದ ಮೊದಲ ಶಿಕ್ಷಣ ಸಂಸ್ಥೆ ಎಂಬ ಶ್ರೇಯಸ್ಸಿಗೆ ಪಾತ್ರವಾಯಿತು. 

ಸಿ 1986ರಲ್ಲಿ ಕೆೆ.ಎಲ್‌.ಇ. ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಬೆಳಗಾವಿಯಲ್ಲಿ ಅಸ್ತಿತ್ವಕ್ಕೆ ಬಂದವು. 

ಸಿ ಉತ್ತರ ಕರ್ನಾಟಕದ ಗಡಿ ಪ್ರದೇಶದ ಹಳ್ಳಿ ಹಳ್ಳಿಗಳಿಗೆ ಉನ್ನತ ಶಿಕ್ಷಣ ಸೌಲಭ್ಯ ದೊರೆಯುವಂತೆ ಮಾಡಿದ ಶ್ರೇಯಸ್ಸು ಕೆ.ಎಲ್‌.ಇ. ಸಂಸ್ಥೆಯದು. 

ಸಿ ಇಂದು ಕೆಎಲ್‌ಇ ಸಂಸ್ಥೆಯು 316 ಅಂಗಸಂಸ್ಥೆಗಳನ್ನು ಹೊಂದಿದೆ. 18000 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.  1,40,000 ವಿದ್ಯಾರ್ಥಿಗಳಿದ್ದಾರೆ. 

ಸಿ ಅಲೋಪಥಿಕ್‌-ಆಯುರ್ವೇದ-ಹೋಮಿಯೋಪಥಿಕ್ ಮೂರು ಬೃಹತ್ ಆಸ್ಪತ್ರೆಗಳ ಆರೋಗ್ಯ ಜಾಲ ಕೆಎಲ್‌ಇ ಸಂಸ್ಥೆಯದು. 

ಸಿ 16 ಆಸ್ಪತ್ರೆಗಳು, 5000+ ಹಾಸಿಗೆಗಳು, ಅದರಲ್ಲಿ 1700+ ಉಚಿತ ಹಾಸಿಗೆಗಳು ಕೆಎಲ್‌ಇ ಆರೋಗ್ಯ ಸೇವೆಗೆ ನಿದರ್ಶನ. 

ಸಿ ಗಡಿನಾಡು ಬೆಳಗಾವಿಯಲ್ಲಿಯೇ 50+ ವಿದ್ಯಾಸಂಸ್ಥೆಗಳ ಬೃಹತ್ ಕೊಡುಗೆ 

ಸಿ ಬೆಳಗಾವಿಯಲ್ಲಿ 2006ರಲ್ಲಿ ವೈದ್ಯಕೀಯ ಡೀಮ್ಡ್‌ ವಿಶ್ವವಿದ್ಯಾಲಯ(ಕಾಹೆರ್) ಹಾಗೂ ಹುಬ್ಬಳ್ಳಿಯಲ್ಲಿ 2015ರಲ್ಲ್ಲಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ - ಶಿಕ್ಷಣ ಕ್ಷೇತ್ರದ ಮಹತ್ವದ ಕೊಡುಗೆ 

ಸಿ ನ್ಯಾಕ್ ಮಾನ್ಯತೆಯ ಎಲ್ಲ ಕೆಎಲ್‌ಇ ಪದವಿ ಕಾಲೇಜುಗಳು ಎ, ಎ+, ಎ++ ಗ್ರೇಡ್ ಹೊಂದಿರುವುದು ವಿಶೇಷ 

ಸಿ ಅಂತರರಾಷ್ಟ್ರೀಯ ವಿವಿಗಳೊಂದಿಗೆ ಅತೀ ಹೆಚ್ಚು ಒಡಂಬಡಿಕೆ. ಅದರಲ್ಲಿ ಅಮೇರಿಕೆಯ ಅತ್ಯಂತ ಹಳೆಯ ಪ್ರತಿಷ್ಠಿತ ಫಿಲ್ಡೇಫಿಯಾದ ಥಾಮಸ್ ಜಾಫರಸನ್ಸ ವಿವಿವೂ ಒಂದು. 

ಸಿ ದೇಶದ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಅತೀ ಹೆಚ್ಚು ಭೇಟಿ ನೀಡಿದ ಸಂಸ್ಥೆ ಕೆಎಲ್‌ಇ 


ಸುದ್ದಿ ಓದಿ