ಯುವ ಸಾಹಿತಿಗಳು ಶಬ್ಧ ಭಂಡಾರವನ್ನು ಹೆಚ್ಚಿಸಿಕೊಂಡು ಸಾಹಿತ್ಯ ಕೃಷಿ ಮಾಡಬೇಕು: ಸಂಜೀವ ಶಿರಹಟ್ಟಿ
ರಾಣೇಬೆನ್ನೂರು 09: ಯುವ ಸಾಹಿತಿಗಳು ಮಂಕುತಿಮ್ಮನ ಕಗ್ಗ, ವಚನ, ದಾಸ ಸಾಹಿತ್ಯಗಳ ಅಧ್ಯಯ ಮಾಡುವಮೂಲಕ ತಮ್ಮ ಸಾಹಿತ್ಯ ರಚನಾ ಸಾಮರ್ಥ್ಯ ಮತ್ತು ಶಬ್ಧ ಭಂಡಾರವನ್ನು ಹೆಚ್ಚಿಸಿಕೊಂಡು ಉತ್ತಮ ಸಾಹಿತ್ಯ ಕೃಷಿ ಮಾಡಬೇಕು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅವರು ಹೇಳಿದರು.
ಅವರು ನಗರದ ಕರ್ನಾಟಕ ಸಂಘದಲ್ಲಿ ಮಂಗಳವಾರ 88ನೆಯ ವರ್ಷದ ನಾಡಹಬ್ಬದ ಆರನೆಯ ದಿನದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡುತ್ತ, ಮಂಕುತಿಮ್ಮನ ಕಗ್ಗ ಮತ್ತು ಡಿವಿಜಿಯವರ ನುಡಿಮುತ್ತುಗಳು ಇಂದಿನ ಆಧುನಿಕ ಜಗತ್ತಿಗೆ ಪ್ರಸ್ತುತವಾಗುತ್ತವೆ ಎಂದು ಹೇಳಿದರು. ನಗರದ ಇನ್ನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಸಂಜನಾ ಕುರುವತ್ತಿ ಹಾಗೂ ಜೆ.ಸಿ.ಐ. ಸಂಸ್ಥೆಯ ಆಧ್ಯಕ್ಷ ಕೆ. ಶಿವಶಂಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಹರಿಹರದ ಎನ್. ಆರ್. ಕನವಳ್ಳಿ ಇವರಿಂದ ಮಂಕುತಿಮ್ಮನ ಕಗ್ಗ ವಾಚನ ಮತ್ತು ಭಾವಾರ್ಥ ಸಾಹಿತ್ಯಾಭಿಮಾನಿಗಳಿಗೆ ರಸದೌತಣವನ್ನುಣಬಡಿಸಿದರು.
ಅಭಿನಂದನ ಜೋಶಿ ನಾಡಗೀತೆ ಹಾಡಿದರು, ಲಕ್ಷ್ಮೀ ಅಡಕಿ ಸ್ವಾಗತಿಸಿದರು, ಮಹೇಶ ನಾಡಿಗೇರ ವಂದಿಸಿದರು, ಶ್ರೀನಿಧಿ ಶಿರಹಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಸತ್ಯನಾರಾಯಣ ವಿಶ್ವರೂಪ, ಕೆ. ಎನ್. ಷಣ್ಮುಖ, ಶ್ರೀನಿವಾಸ ಏಕಬೋಟೆ, ಚಿದಂಬರ ಜೋಶಿ, ಸೀತಾರಾಮ ಕಣೇಕಲ್, ಪ್ರಭು ಹಲಗೇರಿ, ಶ್ರೀಪಾದ ಕುಲಕರ್ಣಿ, ಸಂಕಪ್ಪ ಮಾರನಾಳ ಮೊದಲಾದವರು ಉಪಸ್ಥಿತರಿದ್ದರು.