ರಾಣೆಬೆನ್ನೂರ

ಯುವ ಕವಿ ಬಸವರಾಜ ಬಾಗೇವಾಡಿಮಠ: ಹೆಮ್ಮೇಯ ಕನ್ನಡಿಗ

ಯುವ ಕವಿ ಬಸವರಾಜ ಬಾಗೇವಾಡಿಮಠ: ಹೆಮ್ಮೇಯ ಕನ್ನಡಿಗ

ಲೋಕದರ್ಶನ ವರದಿ 


ರಾಣೇಬೆನ್ನೂರು: ಇಲ್ಲಿನ ಸಾಹಿತಿ ಯುವ ಕವಿ ಶೃಂಗಾರ ಕಾವ್ಯ  ಪ್ರಕಾಶನ ಸಂಸ್ಥೆಯ ಸಂಸ್ಥಾಪಕ ಬಸವರಾಜ. ಬಿ. ಬಾಗೇವಾಡಿಮಠ ಅವರು ಹೆಮ್ಮೇಯ ಕನ್ನಡಿಗ ಪ್ರಶಸ್ತಿಗೆ ಬಾಜನರಾಗಿದ್ದಾರೆ.  ಕವಿ ಬಸವರಾಜ ಅವರು ಸಾಹಿತ್ಯ, ಸಾಮಾಜಿಕ, ಸಾಂಸ್ಕ್ರತಿಕ ಸೇವೆಯನ್ನು ಮೈಗೂಡಿಸಿಕೂಂಡಿದ್ದು,  ಪ್ರಕಾಶನ ಸಂಸ್ಥೆಯ ಮೂಲಕ ನಾಡಿನಾದ್ಯಂತ ಸಂಚರಿಸಿ  ಪುಸ್ತಕ ಸಂಗ್ರಹಿಸಿ ಅವುಗಳನ್ನು ವಿಧ್ಯಾರ್ಥಿಗಳ ಓದುವಿಕೆಗೆ ಸಹಕಾರಿಯಾಗಿ ಸಾಹಿತ್ಯ ಸೇವೆಯಲ್ಲಿ ತೂಡಗಿಸಿಕೂಂಡಿದ್ದಾರೆ.  

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಶ್ರೀ ವಿಶ್ವೇಶ್ವರಯ್ಯ ತರಬೇತಿ ಶಿಕ್ಷಣ ಸಂಸ್ಥೆ, ಗದಗ ಕರ್ನಾಟಕ ಕರಿಯರ್ ಅಕಾಡೆಮಿಯು ಗದಗ ನಗರದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ದಲ್ಲಿ ಬಸವರಾಜ ಅವರಿಗೆ ಪ್ರತಿಷ್ಠಿತ ಹೆಮೇಯ ಕನ್ನಡಿಗ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದೆ. 


ಸುದ್ದಿ ಓದಿ