ಸಮಾಜ ಕಟ್ಟುವ ಕಾಯಕದಲ್ಲಿ ಯುವಕರು ಮುಂದಾಗಬೇಕು: ಪ್ರಭುಲಿಂಗ ಶ್ರೀ
ಲೋಕದರ್ಶನ ವರದಿ
ರಾಣಿಬೆನ್ನೂರ 16: ಇಲ್ಲಿನ ಸಿದ್ದೇಶ್ವರ ನಗರದಲ್ಲಿರುವ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಶ್ರೀ ಪದ್ಮಸಾಲಿ ಸಮಾಜದ ಕುಲತಿಲಕ ಗುರುಮಾರ್ಕಂಡೇಶ್ವರ ಮಹರ್ಷಿಗಳ ಜಯಂತ್ಯೋತ್ಸವ, ತೊಟ್ಟಿಲೋತ್ಸವ ಹಾಗೂ ಪಾಲಕಿ ಉತ್ಸವ ಧಾರ್ಮಿಕ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಸಾಂಪ್ರದಾಯಕವಾಗಿ ಸಮಾಜದ ಬಾಂಧವರು, ಭಕ್ತಿಭಾವದೊಂದಿಗೆ ನೆರವೇರಿಸಲಾಯಿತು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ, ಗುರು ಮಾರ್ಕಂಡೇಶ್ವರ ಪದ್ಮಸಾಲಿ ಗುರುಪೀಠದ ಪೀಠಾಧ್ಯಕ್ಷ ಪ್ರಭುಲಿಂಗ ಸ್ವಾಮೀಜಿ ಅವರು ಮಾತನಾಡಿ, ಸಮುದಾಯಕ್ಕೆ ಇತಿಹಾಸದಿಂದಲೂ ತಮ್ಮದೆಯಾದ ಭವ್ಯ ಧಾರ್ಮಿಕ, ಸಾಂಸ್ಕೃತಿಕ ಪರಂಪರೆ ಇದೆ. ತಮ್ಮ ಕಾಯಕದೊಂದಿಗೆ ಧರ್ಮ ಜಾಗೃತಿಯನ್ನು ಸದಾ ಕಾಲ ಪ್ರತಿಪಾಧಿಸುವ ಈ ಸಮುದಾಯವು ವೃತ್ತಿಯ ಜೊತೆಗೆ ಸಮಾಜದ ಕಲ್ಯಾಣವನ್ನು ಬಯಸುವ ಬಹು ಮುಖ್ಯ ಕರ್ತವ್ಯವನ್ನು ಮಾಡುತ್ತಿದ್ದಾರೆ. ಇದರಿಂದ ಜಗದ್ಗುರು ಪೀಠಕ್ಕೆ ಅತ್ಯಂತ ಸಂತೋಷ ತರುತ್ತಲಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದ ಶ್ರೀಗಳು ಯುವ ಜನತೆ ತಮ್ಮ ಶಿಕ್ಷಣ ಪರಿಪೂರ್ಣತೆಯ ಜೊತೆಗೆ ಸಮಾಜ ಮತ್ತು ಸಮಾಜ ನಡೆದು ಬಂದ ದಾರಿ ಹರಿತುಕೊಳ್ಳಬೇಕು. ಇದರಿಂದ ಮತ್ತಷ್ಟು ಬಲಿಷ್ಠ ಸಮಾಜ ಕಟ್ಟಲು ಸಾಧ್ಯವಾಗುವುದು ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಪೀಠದ ಜಗದ್ಗುರುಗಳು ವಿವಿಧ ಧಾನಿಗಳನ್ನು, ಸಮಾಜ ಸೇವಕರನ್ನು, ಸಮಾಜದ ಪರವಾಗಿ ಅಭಿನಂದಿಸಿ ಸನ್ಮಾನಿಸಿದರು. ಸಮಾರಂಭಕ್ಕೂ ಮುನ್ನ ಅಂದು ಮುಂಜಾನೆ ಸೂರ್ಯೋದಯ ಕಾಲ ಶ್ರೀ ಸಿದ್ದೇಶ್ವರ ನಗರದ ಶ್ರೀ ರೇಣುಕಾ ಮಂದಿರದಲ್ಲಿ ಗಂಗಾಮಾತೆಗೆ ಪೂಜೆ ಸಲ್ಲಿಸಿ ಜಲ ಕುಂಭ ಹೊತ್ತು ಮೆರವಣಿಗೆ ಸಾಗಿ ಶ್ರೀ ಸ್ವಾಮಿಗೆ ಮಹಾರುದ್ರಾಭಿಷೇಕ ಮತ್ತು ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ಸುಮಂಗಲೆಯರಿಗೆ ಹುಡಿ ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು.
ದೇವಸ್ಥಾನದಲ್ಲಿ ನಡೆದ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮಿಗೆ ಮಾರ್ಕಂಡೇಯ ನಾಮಕರಣಗೊಳಿಸಿ ಪೂಜೆ ಸಲ್ಲಿಸಲಾಯಿತು. ಅಧ್ಯಕ್ಷ ನಾಗರಾಜ ಅದಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾಽ ಬಸವರಾಜ ಕೇಲಗಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಉಪಾಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ, ಕರಬಸಪ್ಪ ಹಳ್ಳಳ್ಳಿ, ಶಂಕ್ರ್ಪ ಗರಡಿಮನಿ, ಲಕ್ಷ್ಮಣ ಕಡ್ಲಿಬಾಳ, ಪ್ರವೀಣ ಗುತ್ತೂರು, ಹನುಮಂತಪ್ಪ ಸುಂಕಾಪೂರ, ಶೇಖಪ್ಪ ಕಡ್ಲಿಬಾಳ, ಮಾರುತಿ ಗರಡಿಮನಿ, ಬಸವರಾಜ ಐರಣಿ, ರವಿ ಕಿಚಡಿ, ಕುಮಾರ ರಂಗನವರ, ನೀಲಪ್ಪ ಕುಮಾರ್ಪನವರ, ಎಲ್ಲಪ್ಪ ಗುತ್ತಲ, ನಾಗೇಶ ದೇವರೆಡ್ಡಿ, ಪರಶುರಾಮ ಅಗಡಿ, ಬೆನಕೇಶ ಹದಡಿ, ಮಲ್ಲಿಕಾರ್ಜುನ ಮಾಗೇನಹಳ್ಳಿ, ಅಜೇಯ್ ಹುಲ್ಲತ್ತಿ, ರೇವಣಸಿದ್ದಪ್ಪ ಗುತ್ತೂರು, ಗಣೇಶ ಹುಲ್ಲತ್ತಿ, ರಾಜು ಕಡ್ಲಿಬಾಳು, ನಾಗರಾಜ ಬಾದರಗಟ್ಟಿ ಸೇರಿದಂತೆ ಮತ್ತಿತರ ಗಣ್ಯರು, ಸಮಾಜದ ಮುಖಂಡರು, ನಾಗರೀಕರು, ಯುವಕರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಗುರು ಮಾರ್ಕಂಡೇಶ್ವರ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಹನುಮಂತಪ್ಪ ಮುಕ್ತೇನಹಳ್ಳಿ, ಉಪಾಧ್ಯಕ್ಷರಾದ ಲಕ್ಷ್ಮಣ ಕಡ್ಲಿಬಾಳು ಸೇರಿದಂತೆ ಮತ್ತಿತರ ಗಣ್ಯರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ನಂತರ ಸಾರ್ವಜನಿಕವಾಗಿ ಮಹಾಪ್ರಸಾದ ವಿತರಿಸಲಾಯಿತು.