ದುಶ್ಚಟಗಳಿಂದ ದೂರವಾಗಲು ಯುವಕರಿಗೆ ಜಾಗೃತಿ ಅವಶ್ಯ: ರಾಯಪ್ಪ ಹೂಗಾರ್
ಕುಷ್ಟಗಿ 12: ಯುವಕರು ಅನೇಕ ಕೆಟ್ಟ ಚಟಗಳಿಗೆ ಗುರಿಯಾಗುತ್ತಿದ್ದಾರೆ. ಅವುಗಳಿಂದ ದೂರವಾಗಲು ಇಂತಹ ಜಾಗೃತಿ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಮುಖ್ಯೋಪಾಧ್ಯಾಯರಾದ ರಾಯಪ್ಪ ಹೂಗಾರ್ ಹೇಳಿದರು.
ತಾಲೂಕಿನ ಚಳಗೇರಾ ಗ್ರಾಮದ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಹನುಮಸಾಗರ ಪೊಲೀಸ್ ಠಾಣೆ ಸಹಯೋಗದಲ್ಲಿ ಮಾದಕದ್ರವ್ಯ ಸೇವನೆ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶಾಲಾ ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಬೇಕು ಕೆಟ್ಟ ಚಟುವಟಿಕೆಗಳಿಗೆ ದಾಸರಾಗದೇ ಉತ್ತಮ ಆರೋಗ್ಯವನ್ನು ಹೊಂದಬೇಕು ಎಂದು ಹೇಳಿದರು.
ಹನುಮಸಾಗರ ಪೊಲೀಸ್ ಠಾಣೆಯ ಪೇದೆ ಕರಬಸಪ್ಪ ಕಲಕಬಂಡಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಶಾಲಾ ಹಂತದಲ್ಲಿ ಇಂತಹ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಎಚ್.ಸಿ ಶಬ್ಬೀರ ಕಲಾದಗಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಪೇದೆಗಳಾದ ದಾದಾಪೀರ್, ಹನುಮಂತ ಹಾಗೂ ಹೋಂ ಗಾರ್ಡ್ ಪಕೀರ್ಪ , ಶಾಲಾ ಶಿಕ್ಷಕರಾದ ಅರವಿಂದ್ ಕುಮಾರ್ ದೇಸಾಯಿ, ವಿಶಾಲಕ್ಷಮ್ಮ, ಶಾಕಿರ್ ಬಾಬಾ, ಶರಣಪ್ಪ ಪರಸಾಪುರ, ಸಿದ್ದನಗೌಡ ಪೊಲೀಸ್ ಪಾಟೀಲ್, ಬಸವರಾಜ ಪಿ, ಯಂಕವ್ವ ವಡ್ಡರ್, ಶರೀಫಾ ಬಿ ಇದ್ದರು.