ರಾಣೆಬೆನ್ನೂರ

ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಂತ ಮಹತ್ವ: ಮುನಿಯಪ್ಪ

ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಂತ ಮಹತ್ವ: ಮುನಿಯಪ್ಪ

ರಾಣೇಬೆನ್ನೂರು 21: ಯೋಗದಿಂದ ಆತ್ಮಸ್ಥೈರ್ಯ ಮತ್ತು ಏಕಾಗೃತೆಯಿಂದ ಸರ್ವರೋಗದಿಂದ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆಯೆಂದು ಪ್ರಾಚಾರ್ಯರಾದ ಪಿ.ಮುನಿಯಪ್ಪ ಹೇಳಿದರು. 

ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪ.ಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ   7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ವಿಶ್ವಕ್ಕೆ ಯೋಗವನ್ನು ಪರಿಚಯ ಮಾಡಿಕೊಟ್ಟಿದ್ದು ನಮ್ಮ ಭಾರತ ಇಂದಿನ ಕಾಲ ಘಟ್ಟದಲ್ಲಿ ಇದರ ಪ್ರಾಮುಖ್ಯತೆ ಹೇಚ್ಚಾಗಿದೆ ಅದ್ದರಿಂದ ಪ್ರತಿ ದಿನ ಪ್ರತಿಯೊಬ್ಬರು ಯೋಗವನ್ನು ಮಾಡಬೇಕು ಎಂದರು. 

ಉಪನ್ಯಾಸಕ ಹೆಚ್‌.ಶಿವಾನಂದ ಮಾತನಾಡಿ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಾಗಿ ಇರಲು ಯೋಗಭ್ಯಾಸಗಳು ಪ್ರತಿಯೋಬ್ಬರಿಗು ಅವಶ್ಯಕವಾಗಿದೆ ಕೊರೋನಾ ಹಿನ್ನಲೆಯಲ್ಲಿ ಯೋಗವನ್ನು ಮನೆಯಲ್ಲಿ ಪ್ರತಿ ನಿತ್ಯ ಮಾಡುವುದರಿಂದ ಜನರ ಆರೋಗ್ಯ ಕಾಪಾಡುವಲ್ಲಿ ಯೋಗ ಮಹತ್ವದ ಪಾತ್ರವನ್ನು ವಹಿಸಿದೆ ಎಂದರು. 

ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಿ.ಎ.ವಿಜಯಕುಮಾರ, ಎಸ್‌.ಎಸ್‌.ಬಡ್ನಿ. ಕೆ.ಜೆ.ಆಶಾ.ಉಮ್ಮೇಹಬಿಬಾ.ಜಿ.ಸುಚಿತ್ರಾ.ಆರ್‌.ಪ್ರವೀಣ್‌ಕುಮಾರ್‌.ಪ್ರಸನ್ನಕುಮಾರ. ಗಣೇಶ ಹಿರೇಮಠ್ ಮತ್ತಿತರರು. 


ಸುದ್ದಿ ಓದಿ