ವಿದ್ಯಾರ್ಥಿಗಳಿಗೆ ಏಕಾಗ್ರತೆಯನ್ನ ಒದಗಿಸಲು ಯೋಗ ಅತ್ಯಾವಶ್ಯಕ
ಲೋಕದರ್ಶನ ವರದಿ
ಶಿಗ್ಗಾವಿ 22: ಸದೃಢ ದೇಹ ಹೊಂದಲು, ರೋಗ ರಹಿತರಾಗಿ ಬಾಳಲು, ಮನಸ್ಸನ್ನ ಕೇಂದ್ರೀಕರಿಸಲು, ವಿದ್ಯಾರ್ಥಿಗಳಿಗೆ ಏಕಾಗ್ರತೆಯನ್ನ ಒದಗಿಸಲು ಯೋಗ ಅತ್ಯಾವಶ್ಯಕವಾಗಿ ಬೇಕು ಎಂದು ಎಸ್ ಬಿ ಹಿರೇಮಠ
ಪಟ್ಟಣದ ರಂಭಾಪುರಿ ಮಹಾವಿದ್ಯಾಲಯದಲ್ಲಿ ರಂಭಾಪುರಿ ಕಾಲೇಜು ಹಾಗೂ ಜೆಸಿಐ ಘಟಕ ಶಿಗ್ಗಾವಿ, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಗ ದಿನಾಚರಣೆಯ ದಿನವಷ್ಟೇ ಯೋಗಾಸನ ಮಾಡಿದರೆ ಸಾಲದು ದಿನಂಪ್ರತಿ ನಿಮಗೋಸ್ಕರ ಯೋಗಾಸನಗಳನ್ನ ಮಾಡುತ್ತ ಬಂದರೆ ಸದೃಢರಾಗಿ ಬೆಳೆದು ನಾಡಿಗೆ ಒಳ್ಳೆ ಪ್ರಜೆಯಾಗಲು ಸಾಧ್ಯ ಎಂದರು.
ಜೆಸಿಐ ಘಟಕದ ಅಧ್ಯಕ್ಷೆ ಅನಿತಾ ಗೊಬ್ಬರಗುಂಪಿ ಮಾತನಾಡಿ, ಯೋಗ ಮಾಡಿ ರೋಗ ದೂರ ಮಾಡಿಕೊಳ್ಳಬಹುದೆಂದರು.
ಕಾರ್ಯಕ್ರಮವನ್ನು ಸಸಿಗೆ ನೀರುಣಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು, ನಂತರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಯೋಗಾಸನವನ್ನು ಮಾಡುವ ಮೂಲಕ ಯೋಗದಿನಾಚರಣೆ ಆಚರಿಸಿದರು.
ಪ್ರಾಚಾರ್ಯ ಪ್ರೊ. ಎಸ್ ಎಸ್ ಮಲ್ಲಾಡದ. ಎಫ್ ಎಸ್ ಶಿವಣ್ಣನವರ್, ಡಾ. ಡಿ ಎ ಗೊಬ್ಬರಗುಂಪಿ. ಪ್ರೊ. ಎಸ್ ವಿ ಪೂಜಾರ, ಡಾ. ಹೆಚ್ ಕೆ ವಿನಯ್, ಪ್ರೊ ಬಸವರಾಜ್ ಹೋಣ್ಣನನವರ್, ಕೊಟ್ರೇಶಪ್ಪ ಎಂ. ಜಿ ಎನ್ ಯಲಿಗಾರ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು. ವಿದ್ಯಾರ್ಥಿಗಳು. ಜೆಸಿಐ ಘಟಕದ ಸದಸ್ಯರುಗಳು ಭಾಗವಹಿಸಿದ್ದರು