ಯೋಗವು ಪ್ರಪಂಚಕ್ಕೆ ಭಾರತದ ಕೊಡುಗೆ
ಸಂಕೇಶ್ವರ 21:ಯೋಗವನ್ನು ಪ್ರಪಂಚಕ್ಕೆ ಪರಿಚಯಿಸಿದ್ದು ಭಾರತ ಎಂದು ಹೇಳಲು ನಮಗೆಲ್ಲ ಹೆಮ್ಮೆ ಎನಿಸುತ್ತದೆ. ಆಧುನಿಕತೆಯ ಭರಾಟೆಯಲ್ಲಿ ಭಾರತೀಯ ವೈದ್ಯ ಪದ್ಧತಿಗಳಲ್ಲಿ ಒಂದಾದ ಯೋಗವನ್ನು ಮರೆತಿದ್ದೆವು. ಇತ್ತೀಚೆಗೆ ರೋಗವನ್ನು ಬುಡಸಮೇತ ಕಿತ್ತೊಗೆಯುವ ಸಾಮಥ್ರ್ಯ ಹೊಂದಿರುವ ಯೋಗವು ದಿನೇ ದಿನೇ ತನ್ನ ಮಹತ್ವವನ್ನು ಹೆಚ್ಚಿಸಿಕೊಳ್ಳುತ್ತಿದೆ. ಎಂದು ನಗೆ ಭಾಷಣಕಾರರು ಹಾಗೂ ವಂದೇ ಮಾತರಂ ಯೋಗ ತರಬೇತಿ ಕೇಂದ್ರದ ಅಜಯ ಸಾರಾಪುರೆ ಅಭಿಪ್ರಾಯ ಪಟ್ಟರು.
ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸಂಕೇಶ್ವರದ ನೇಸರಿ ಗಾರ್ಡನ್ನಲ್ಲಿ ವಂದೇ ಮಾತರಂ ಯೋಗ ಕೇಂದ್ರ ಮತ್ತು ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ಕೇಂದ್ರ ಆಯೋಜಿಸಿದ್ದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿವಿಧ ಆಸನಗಳು, ಪ್ರಾಣಾಯಾಮದ ಜೊತೆಗೆ ನಿರಂತರ ಯೋಗ ಮಾಡಿ ನಮ್ಮ ಮನಸ್ಸನ್ನು ನಿಯಂತ್ರಿಸಬೇಕಾದ ಅವಶ್ಯಕತೆಯಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ ವಹಿಸಿ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ಯೋಗ ಬಲ್ಲವನೂ ರೋಗ ಮುಕ್ತನಾಗುತ್ತಾನೆ. ಯೋಗ ರೋಗವನ್ನು ಗುಣಪಡಿಸಲು ಮಾತ್ರವಲ್ಲ, ಇದು ಜೀವನದ ನಿರಂತರ ಕ್ರಮವಾಗಬೇಕು ಎಂದರು. ಸ್ವಾಸ್ಥ್ಯ ಸಮಾಜ ನಿಮರ್ಿಸಲು ಪ್ರತಿಯೊಬ್ಬರು ಯೋಗವನ್ನು ದಿನನಿತ್ಯದ ಕ್ರಮವಾಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ವಂದೇ ಮಾತರಂ ಯೋಗ ಕೇಂದ್ರದ ಅಜಯ ಸಾರಾಪುರೆ,ವಿಠ್ಠಲ ಡೊಳ್ಳಿನವರ, ಸುಧಾಕರ ಶೆಟ್ಟಿ, ರಾಜು ಕಾನ್ನೋರಿ, ಪುರಸಭೆಯ ಸದಸ್ಯ ಸಂಜಯ ಶಿರಕೋಳಿ, ರೋಹಣ ನೇತ್ರಿ, ಯವಧುರೀಣ ಶ್ರವಣ ನೇತ್ರಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ಅಲ್ಲದೇ ಮಹಿಳಾ ಹಾಗೂ ಪುರುಷ ಯೋಗ ಪಟುಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು. ನಂತರ ಶಿಬಿರಾರ್ಥಿಗಳಿಗೆ ಅಲ್ಪೋಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು