ಯೋಗದಲ್ಲಿ ರೋಗ ನಾಶಮಾಡುವ ಶಕ್ತಿ ಅಡಗಿದೆ: ಮ್ಯಾಗೇರಿ
ಶಿಗ್ಗಾವಿ 22: ಮಾನಸಿಕ ದೈಹಿಕವಾಗಿ ಸಮತೋಲನ ಮಾಡಿ ಬರುವ ಮತ್ತುಇರುವ ರೋಗಗಳನ್ನು ನಾಶಮಾಡುವ ಶಕ್ತಿ ಹೊಂದಿದೆ ಎಂದು ಶಿಗ್ಗಾವಿ ತಾಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ತಾಲೂಕಿನ ಐತಿಹಾಸಿಕಸುಕ್ಷೇತ್ರ ಪಂಚಪಾಂಡವರ ಬನ್ನಿಕೊಪ್ಪದೇವಸ್ಥಾನದ ಪ್ರಾಂಗಣದಲ್ಲಿ ಅಂತರಾಷ್ಟ್ರೀಯ ಯೋಗ ದಿನದಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ ಯೋಗದಿಂದ ಶಾಂತಿ ಸಮಾಧಾನ ಪ್ರಾಪ್ತಿಯಾಗುತ್ತದೆಜಾತಿ-ಮತ-ಪಂತ ಮೇಲು-ಕೀಳು ಇಲ್ಲದೆ ನಾವೆಲ್ಲರೂಒಂದೇ ಎಂಬ ಭಾವೈಕ್ಯತೆಯನ್ನು ಮೂಡಿಸುತ್ತದೆ. ಯೋಗ ನೆಮ್ಮದಿಯಆರೋಗ್ಯ ಬದುಕಿಗೆ ಸಂದೇಶ ಸಾರುತ್ತದೆ.
ಏಳಬೇಕು ನಾವೆಲ್ಲರೂ ಬೇಗ.ಮಾಡಬೇಕು ನಮಗೆ ಬಂದ ಬಂಗಿಯಲ್ಲಿಯೋಗ.ಪ್ರತಿನಿತ್ಯ ವಾಗಬೇಕು ಇದು ಪ್ರಯೋಗ.ಅಂತವರಿಗೆ ಬರುವುದಿಲ್ಲ ಯಾವರೋಗ. ದೈಹಿಕ ಮತ್ತು ಮಾನಸಿಕ ಏಕಾಗ್ರತೆಯ ಜೊತೆಗೆ ದೇಹದ ಅಂಗಾಂಗಗಳ ಕ್ರಿಯಾಚಟುವಟಿಕೆಯ ಬಗ್ಗೆ ಅರಿವು ಮೂಡಿಸುವುದು ಯೋಗ. ಯೋಗದಿಂದ ಸದೃಢದೇಹ ಒಳ್ಳೆಯ ಆರೋಗ್ಯ ದೈಹಿಕ ಮತ್ತು ಮಾನಸಿಕವಾಗಿ ವಿಶ್ರಾಂತಿ ಮತ್ತು ನೆಮ್ಮದಿ ದೀರ್ಘ ಆಯುಷ್ಯ ಸುಂದರವಾದ ಭವ್ಯ ಭವಿಷ್ಯ ರೂಪಿಸಿಕೊಳ್ಳುವ ಶಕ್ತಿ ಇದರಲ್ಲಿ ಅಡಗಿದೆಎಂದರು.
ತಾಲೂಕಿನಾದ್ಯಂತ ಇದೇ ರೀತಿ ಬಿಜೆಪಿ ನೇತೃತ್ವದಲ್ಲಿ 26 ಕಡೆಯೋಗ ಶಿಬಿರಗಳು ನಡೆದಿವೆ ಎಂದರು. ಈ ಸಂದರ್ಭದಲ್ಲಿ ಯೋಗ ಶಿಕ್ಷಕಈಶ್ವರ ಹುಣಸಿಕಟ್ಟಿಯವರು ಯೋಗಾಭ್ಯಾಸ ನಡೆಸಿಕೊಟ್ಟರು. ಗ್ರಾಮ ಪಂಚಾಯಿತಿ ಸದಸ್ಯ ಶಂಕ್ರ್ಪ ಬಟ್ಟಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ನಾರಾಯಣಪುರ್ ರೇಣುಕನಗೌಡ ಪಾಟೀಲ್ ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣನವರ, ಪ್ರಶಾಂತ್ ಬಡ್ಡಿ, ಮುತ್ತು ಎಲಿಗಾರ್, ಮಂಡಲದ ಪದಾಧಿಕಾರಿಗಳು ಹಾಗೂ ಸಾಯಿ ಸೇವಾ ಸಮಿತಿಯ ಸದಸ್ಯರು ಮಹಿಳಾ ಮೋರ್ಚಾದ ಸದಸ್ಯರು ಬನ್ನಿಕೊಪ್ಪಗ್ರಾಮದ ಹಿರಿಯರು ಯುವಕರು ಇನ್ನೂ ಅನೇಕರು ಪಾಲ್ಗೊಂಡಿದ್ದರು.