ರಾಣೆಬೆನ್ನೂರ

ವಿದ್ಯಾರ್ಥಿಗಳಿಗೆ ಯೋಗ ಪ್ರಾಣಾಯಾಮದ ಪ್ರಾತ್ಯಕ್ಷಿಕೆ

ವಿದ್ಯಾರ್ಥಿಗಳಿಗೆ ಯೋಗ ಪ್ರಾಣಾಯಾಮದ ಪ್ರಾತ್ಯಕ್ಷಿಕೆ

ರಾಣಿಬೆನ್ನೂರ: ತಾಲೂಕಿನ ಕೊಡಿಯಾಲ ಹೊಸಪೇಟೆಯ ಅಮೃತವರ್ಷಿಣಿ ವಿದ್ಯಾಲಯದಲ್ಲಿ  ವಿದ್ಯಾರ್ಥಿಗಳಿಗೆ ಯೋಗ ಮತ್ತು ಪ್ರಾಣಾಯಾಮದ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲಾಯತು.   

ಯೋಗ ಶಿಬಿರಕ್ಕೆ ಚಾಲನೆ ನೀಡಿದ ಶಿಕ್ಷಣತಜ್ಞ ಪ್ರಕಾಶರಾವ್ ಮಾತನಾಡಿ, ಯೋಗದಿಂದ ಮಾನವನ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಹುಮ್ಮಸ್ಸು, ಬುದ್ಥಿಮತ್ತೆಯಲ್ಲಿ ಏಕಾಗ್ರತೆ, ಸದಾ ಲವಲವಿಕೆಯಿಂದ ತನ್ನ ಜೀವನವನ್ನು ಸಾಗಿಸಲು ಅನುಕೂಲವಾಗುವುದೆಂದೂ,  ಮಾನವನ ಆಯುಷ್ಯ ಪ್ರಮಾಣವು ಕೂಡ ವೃದ್ಥಿಸುವುದೆಂದು ತಿಳಿಸಿದರು. 

ರೇಖಾ ರಾಮಾಲದ ಅವರಿಂದ ವಿದ್ಯಾರ್ಥಿಗಳಿಗೆ ಸ್ವಸ್ಥ ಆರೋಗ್ಯಕ್ಕಾಗಿ ಯೋಗ ಶಿಬಿರವನ್ನು ನಡೆಸಿಕೊಟ್ಟರು.ವಿನಯರಾವ್, ಪ್ರಾಂಶುಪಾಲೆ ಚೇತನಾ ರಾವ್, ಧನ್ಯೋಸ್ಮಿ  ಭರತಭೂಮಿ ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಡಾಽ ಜಿ.ಜೆ ಮೆಹೆಂದಳೆ, ಡಾಽ ಜ್ಯೋತಿ ಮಹಾಂತೇಶ ಇದ್ದರು. 


ಸುದ್ದಿ ಓದಿ