ಸಿಂಧಗಿ

ಯೋಗಃ ಕರ್ಮಸು ಕೌಶಲ್ಯಂ ಯೋಗ ಫಾರ್ ಹುಮನಿಟಿ: ಹೇಮಾ ಪೊದ್ದಾರ

ಯೋಗಃ ಕರ್ಮಸು ಕೌಶಲ್ಯಂ ಯೋಗ ಫಾರ್ ಹುಮನಿಟಿ: ಹೇಮಾ ಪೊದ್ದಾರ

  ಸಿಂದಗಿ24:  ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ ವಿಶ್ವಕ್ಕೆ ಯೋಗ ಪರಿಚಯಿಸಿದ್ದು ಭಾರತ ಸಿಂಧೂ ಸರಸ್ವತಿ ನಾಗರಿಕತೆಯಲ್ಲಿ ಅಳವಡಿಕೆ ಯೋಗದ ಮಹತ್ವ ಸುಮಾರು 5000 ವರ್ಷಗಳ ಹಿಂದೆಯೇ ಎಂಟನೇ ತರಗತಿ ಇತಿಹಾಸ ಪುಸ್ತಕದಲ್ಲಿ ಪ್ರಸ್ತುತವಾಗಿದೆ ಎಂದು ಗುರು ಕೃಪಾ ಆಂಗ್ಲಮಾಧ್ಯಮ ಹಿರಿಯ ಪ್ರಾರ್ಥಮಿಕ ಶಾಲೆ ಮುಖ್ಯ ಗುರುಮಾತೆ ಹೇಮಾ ಪೊದ್ದಾರ ಯೋಗ ಕುರಿತು ವಿದ್ಯಾಥರ್ಿಗಳಲ್ಲಿ ಅರಿಕೆ ಮಾಡಿಕೊಟ್ಟರು.

 ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ನಗರದ ಶ್ರೀ ಗುರು ಕೃಪಾ ಆಂಗ್ಲಮಾಧ್ಯಮ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಿನನಿತ್ಯದ ಯೋಗಾಭ್ಯಾಸವು ಮಕ್ಕಳಲ್ಲಿ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಪೂರಕವಾಗಿದ್ದು, ಅದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸಿನ ಮಾರ್ಗದಲ್ಲಿ ಸಾಗುವಂತೆ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ಹೇಮಾ ಪೋದಾರ್ ರವರು ಮಕ್ಕಳಿಗೆ ಹುರಿದುಂಬಿಸಿದರು ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ವರ್ಗ ಅತ್ಯಂತ ಹರ್ಷದಿಂದ 7 ಘಂಟೆಗೆ ಯೋಗಾಭ್ಯಾಸ ಮಾಡಿದರು ಶಿಕ್ಷಣ ಸಂಸ್ಥೆಯ ಶಿಕ್ಷಕರಾದ ಪ್ರಸನ್ನ ಕುಲಕರ್ಣಿ ಯೋಗ ಅಭ್ಯಾಸ ಮಾಡಿಸಿದರು.

 ಶ್ರೀ ಗುರು ಕೃಪಾ ಆಂಗ್ಲಮಾಧ್ಯಮ ಹಿರಿಯ ಪ್ರಾರ್ಥಮಿಕ ಶಾಲೆಯ ಕಾರ್ಯದರ್ಶಿಹಣಮಂತರಾವ ಪೋದ್ದಾರ, ಶಿಕ್ಷಕರಾದ ಸವಿತಾ ಬಿ, ಪೂಜಾ ದಶ್ಮಾ, ಸೌಮ್ಯ ಪೋದ್ದಾರ, ಹರೀಶ ಪೊದ್ದಾರ ಹಾಗೂ ಶೃತಿ ಕುಲಕರ್ಣಿ ಮತ್ತು ಸಿಬ್ಬಂದಿ ವರ್ಗ ವಿಶಾಲ ಹಿರೇಮಠ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 

ಸುದ್ದಿ ಓದಿ