ಯರಡಾಲ ಗ್ರಾಮದೇವಿ ಜಾತ್ರೆ: ಆಮಂತ್ರಣ ಪತ್ರ ಬಿಡುಗಡೆ
ಬೈಲಹೊಂಗಲ 02: ತಾಲೂಕಿನ ಯರಡಾಲ ಗ್ರಾಮದಲ್ಲಿ ಏ.15 ರಿಂದ 26 ರವರೆಗೆ 11 ದಿನಗಳ ಕಾಲ ಅದ್ದೂರಿಯಾಗಿ ಸಡಗರ-ಸಂಭ್ರಮದಿಂದ ಜರುಗುವ ಶ್ರೀ ಗ್ರಾಮದೇವಿ (ದೇಮವ್ವನ) ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದೇವಿ ಮಂದಿರದಲ್ಲಿ ತಾರಿಹಾಳದ ಬಡೇಕೊಳ್ಳ ಮಠದ ಪೂಜ್ಯ ನಾಗೇಂದ್ರ ಸ್ವಾಮೀಜಿ ಅವರು ಆಮಂತ್ರಣ ಪತ್ರಿಕೆ ಹಾಗೂ ಭಿತ್ತಿ ಪತ್ರಗಳನ್ನು ಶನಿವಾರ ಬಿಡುಗಡೆಗೊಳಿಸಿದರು.
ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ನಾಗೇಂದ್ರ ಶ್ರೀಗಳು ಯರಡಾಲ ಗ್ರಾಮವು ಚಿಕ್ಕವಾಗಿದ್ದರೂ ಸಹ ಇಲ್ಲಿನ ಜನರಲ್ಲಿ ಅದ್ಯಾತ್ಮದ ಒಲವು ಹೆಚ್ಚಿದ್ದು ಸುಮಾರು 9 ವರ್ಷಗಳ ನಂತರ ಗ್ರಾಮದೇವಿ ಜಾತ್ರೆಯು ನೆರವೇರುತ್ತಿದೆ. ಜಾತ್ರೆಗೆ ಪ್ರತಿಯೊಬ್ಬರ ಸಹಾಯ-ಸಹಕಾರ ಕೂಡಿದಲ್ಲಿ ಧರ್ಮ ಕಾರ್ಯಗಳೆಲ್ಲವೂ ಯಶಸ್ವಿಯಾಗಲಿವೆ. ಬರುವಂತಹ ಭಕ್ತಾಧಿಗಳಿಗೆ ಯಾವದೇ ರೀತಿಯ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕೆಂದು ಯುವಕರಿಗೆ ಕರೆ ನೀಡಿದರು.
ಗ್ರಾಮದೇವಿ ಜಾತ್ರಾ ಮಹೋತ್ಸವ ಕಮೀಟಿ ಅಧ್ಯಕ್ಷ, ಬೈಲಹೊಂಗಲದ ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಆರ್.ಪಾಟೀಲ ಮಾತನಾಡಿ, ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲು ಈಗಾಗಲೇ ಪೂರ್ವಭಾವಿ ಸಭೆಗಳನ್ನು ಕರೆದು ಹಲವಾರು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಬೈಲವಾಡ ಗ್ರಾಮ ಪಂಚಾಯತ ಆಡಳಿತ, ಗ್ರಾಮದ ಹಲವು ಸಂಘ-ಸಂಸ್ಥೆಗಳು ವ್ಯವಸ್ಥಿತವಾಗಿ ನಡೆಯಲು ಸಹಕಾರ ನೀಡಲಿವೆ. ಜಾತ್ರಾ ಮಹೋತ್ಸವದ ಅಂಗವಾಗಿ ಧರ್ಮಸಭೆ, ಶ್ರೀದೇವಿಗೆ ಉಡಿ ತುಂಬುವ ಕಾರ್ಯಗಳು, ಗ್ರಾಮದ ವಿವಿಧ ದೇವರುಗಳಿಗೆ ವಿಶೇಷ ಪೂಜೆ, ಪ್ರಾರ್ಥನೆ, ವಿವಿಧ ಸಾಂಸ್ಕ್ರತಿಕ, ಮನರಂಜನೆ ಕಾರ್ಯಕ್ರಮಗಳು, ನಾಟಕ ಪ್ರದರ್ಶನ, ವಿವಿಧ ಸ್ಪರ್ಧೆಗಳು ಸಂಭ್ರಮದಿಂದ ಜರುಗಲಿವೆ ಎಂದರು.
ಗ್ರಾಮದ ದುಂಡಯ್ಯ ಹಿರೇಮಠ, ಕಲ್ಲಯ್ಯ ಸ್ವಾಮೀಜಿ, ಗ್ರಾ.ಪಂ.ಸದಸ್ಯರಾದ ಶ್ರೀಶೈಲಗೌಡಾ ಪಾಟೀಲ, ಬಸನಗೌಡಾ ಪಾಟೀಲ, ಈರ್ಪ ಬನಶೆಟ್ಟಿ, ಶಿಕ್ಷಕ ವಿಜಯ ಬನಶೆಟ್ಟಿ, ರಾಜು ಕುಲಕರ್ಣಿ, ಮಲನಾಯ್ಕಗೌಡಾ ಪಾಟೀಲ, ನಾಗಪ್ಪ ಬೈಲಪ್ಪನವರ, ರಾಮಲಿಂಗಪ್ಪ ಮುದಿನಾಯ್ಕರ, ಬಸಪ್ಪ ಹೂಗಾರ, ಬಿ.ಎಸ್.ಪಾಟೀಲ, ಅಶೋಕ ಪಾಟೀಲ, ಶಿದ್ದಪ್ಪ ವಾರದ, ಗ್ರಾ.ಪಂ.ಮಾಜಿ ಸದಸ್ಯ ನಿಂಗಪ್ಪ ರಾಜಗೋಳಿ, ರಾಮಚಂದ್ರ ಬಡಿಗೇರ, ಶಿವಪ್ಪ ಗೋಣಿ ಮುಂತಾದವರು ಉಪಸ್ಥಿತರಿದ್ದರು.